ಕೊಲೆಯಾದ ಬಿಜೆಪಿ ನಾಯಕ  ಎಸ್. ಆನಂದ್
ಕೊಲೆಯಾದ ಬಿಜೆಪಿ ನಾಯಕ ಎಸ್. ಆನಂದ್

ಮೈಸೂರು: ಬರ್ತಡೇ ಪಾರ್ಟಿ ವೇಳೆ ಬಿಯರ್ ಬಾಟಲಿಯಿಂದ ಚುಚ್ಚಿ ಬಿಜೆಪಿ ನಾಯಕನ ಭೀಕರ ಹತ್ಯೆ!

ಬರ್ತಡೇ ಪಾರ್ಟಿಯಲ್ಲೇ ಬಿಯರ್ ಬಾಟಲಿಯಿಂದ ಚುಚ್ಚಿ ಬಿಜೆಪಿ ನಾಯಕನೊಬ್ಬನ ಭೀಕರ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 
Published on

ಮೈಸೂರು: ಬರ್ತಡೇ ಪಾರ್ಟಿಯಲ್ಲೇ ಬಿಯರ್ ಬಾಟಲಿಯಿಂದ ಚುಚ್ಚಿ ಬಿಜೆಪಿ ನಾಯಕನೊಬ್ಬನ ಭೀಕರ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಕುವೆಂಪುನಗರದ ಅಪಾರ್ಟ್​​ಮೆಂಟ್​​ವೊಂದರಲ್ಲಿ ದುಷ್ಕರ್ಮಿಗಳು ಬಿಜೆಪಿ ನಾಯಕ ಎಸ್​. ಆನಂದ್​ ಅವರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿದ್ದ ಆನಂದ್ ಗುರುವಾರ ತಮ್ಮ ಬರ್ತಡೇ ಆಚರಣೆಯಲ್ಲಿದ್ದರು. ಕುವೆಂಪುನಗರ ಲವಕುಶ ಪಾರ್ಕ್ ಸಮೀಪದ ಅಪಾರ್ಟ್‍ಮೆಂಟ್‍ನಲ್ಲಿ ಪಾರ್ಟಿ ನಡೆಯುತ್ತಿದ್ದಾಗಲೇ ಕೊಲೆ ನಡೆದಿದೆ.

ಇನ್ನು ಕೊಲೆಯಾಗಿರುವ ಆನಂದ್ ಓರ್ವ ರೌಡಿ ಶೀಟರ್ ಸಹ ಆಗಿದ್ದು ಹಿಂದೆ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು.ಅಲ್ಲದೆ 13ವರ್ಷಗಳಷ್ಟು ಹಿಂದೆ 1ಜನತಾನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿ ಜೈಲು ಸೇರಿದ್ದರು.

ಇನ್ನು ಈ ಹಳೇ ದ್ವೇಷದಿಂದಾಗಿಯೇ ಕೊಲೆ ನಡೆದಿರಬೇಕೆಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಘಟನೆ ನಂತರ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಕುವೆಂಪುನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com