
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆ ನಿಲ್ಲಿಸಲು ರಾಜ್ಯದ ಯಡಿಯೂರಪ್ಪ ಸರ್ಕಾರ ತೀರ್ಮಾನಿಸಿದೆ. ಅಲ್ಪಸಂಖ್ಯಾತರ ವಿವಾಹಕ್ಕಾಗಿ ಜಾರಿಗೆ ತರಲಾಗಿದ್ದ ಶಾದಿ ಭಾಗ್ಯ ಯೋಜನೆಗಾಗಿ ಹೊಸ ಅರ್ಜಿ ಸ್ವೀಕರಿಸಬೇಡಿ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಈ ಸಾಲಿನ ಬಜೆಟ್ ನಲ್ಲಿ ಶಾದಿ ಬಾಗ್ಯಕ್ಕೆ ಹಣ ಮೀಸಲಿಟ್ಟಿರಲಿಲ್ಲ. ಇದೀಗ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಶಾದಿಭಾಗ್ಯಕ್ಕೆ ಹೊಸ ಅರ್ಜಿ ಸ್ವೀಕರಿಸದಂತೆ ಆದೇಶ ಹೊರಬಿದ್ದಿದೆ.
ಬಿದಾಯಿ ಯೋಜನೆಯಡಿ ಮದುವೆ ಖರ್ಚು, ಜೀವನಾವಶ್ಯಕ ಸಾಮಗ್ರಿ ಖರೀದಿಗೆ 50 ಸಾವಿರ ರೂ. ನೀಡುವ ಶಾದಿ ಬಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿತ್ತು.
Advertisement