ಬ್ರಿಟಿಷರನ್ನು ಒದ್ದೋಡಿಸಲು ಒಟ್ಟಾದಂತೆ, ಈಗ ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಒಟ್ಟಾಗಬೇಕಿದೆ

ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿದಿದ್ದರು. ಈಗ ನಮ್ಮ ದೇಶದಲ್ಲಿ ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿಯಬೇಕಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. 
ರಮೇಶ್ ಕುಮಾರ್
ರಮೇಶ್ ಕುಮಾರ್
Updated on

ಚಾಮರಾಜನಗರ: ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿದಿದ್ದರು. ಈಗ ನಮ್ಮ ದೇಶದಲ್ಲಿ ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿಯಬೇಕಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. 

ಚಾಮರಾಜನಗರದಲ್ಲಿ ನಡೆದ ಸಿಎಎ, ಎನ್ ಪಿಆರ್, ಎನ್ಆರ್ ಸಿ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಯಾವುದೇ ಗಂಡಾಂತರ ಇಲ್ಲದಿರುವಾಗ ಮೋದಿ ಪೌರತ್ವದಂತಹ ಕಾಯ್ದೆ ತಂದಿದ್ದಾರೆ, ಇಂಥ ಸರ್ಕಾರದ ವಿರುದ್ಧ ಸಮರ ಸಾರಬೇಕಾಗಿದೆ ಎಂದು ರಮೇಶ್ ಕುಮಾರ್ ಕರೆ ನೀಡಿದ್ದಾರೆ. 

ತ್ರಿವಳಿ ತಲಾಕ್, 370, ನೋಟ್ ಬ್ಯಾನ್ ಕಾಯಿದೆ ತಂದರೂ ಮುಸ್ಲಿಮರು ಪ್ರತಿಭಟಿಸಲಿಲ್ಲ. ಈಗ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೆ ಮುಸ್ಲಿಮರು ಪ್ರತಿಭಟನೆ ನಡೆಸಬೇಕಾಯ್ತು. ಪ್ರಧಾನಿ ಮೋದಿ ಬ್ರಿಟಿಷರ ವಿರುದ್ದ ಹೋರಾಡಿದವರನ್ನ ಬೀದಿಯಲ್ಲಿ ನಿಲ್ಲಿಸಿದ್ದಾರೆ. ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಒಟ್ಟಾಗಬೇಕಿದೆ ಎಂದು ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com