ಸರ್ಕಾರದ ಸಂಸ್ಥೆಗಳಿಂದ ಬೆಂಗಳೂರು ನೀರು ಸರಬರಾಜು ಮಂಡಳಿಗೆ ಪಾವತಿಸಲು ಬಾಕಿ ಇರುವ ಹಣ 29 ಕೋಟಿ ರೂ!

ಸರ್ಕಾರದ ಸಂಸ್ಥೆಗಳಿಂದ ಸುಮಾರು 28.9 ಕೋಟಿ ರೂಪಾಯಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ ಎಸ್ ಬಿ)ಗೆ ಪಾವತಿಸಲು ಬಾಕಿಯಿದೆ. ಹಣ ಪಾವತಿಸದ ಪ್ರಮುಖ 100 ಸಂಸ್ಥೆಗಳಲ್ಲಿ ಬಿಬಿಎಂಪಿ ಮತ್ತು ಇಂದಿರಾ ಕ್ಯಾಂಟೀನ್ ಗಳು ಕೂಡ ಇವೆ.
ಸರ್ಕಾರದ ಸಂಸ್ಥೆಗಳಿಂದ ಬೆಂಗಳೂರು ನೀರು ಸರಬರಾಜು ಮಂಡಳಿಗೆ ಪಾವತಿಸಲು ಬಾಕಿ ಇರುವ ಹಣ 29 ಕೋಟಿ ರೂ!

ಬೆಂಗಳೂರು; ಸರ್ಕಾರದ ಸಂಸ್ಥೆಗಳಿಂದ ಸುಮಾರು 28.9 ಕೋಟಿ ರೂಪಾಯಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ ಎಸ್ ಬಿ)ಗೆ ಪಾವತಿಸಲು ಬಾಕಿಯಿದೆ. ಹಣ ಪಾವತಿಸದ ಪ್ರಮುಖ 100 ಸಂಸ್ಥೆಗಳಲ್ಲಿ ಬಿಬಿಎಂಪಿ ಮತ್ತು ಇಂದಿರಾ ಕ್ಯಾಂಟೀನ್ ಗಳು ಕೂಡ ಇವೆ.


ಒಟ್ಟು 28 ಕೋಟಿಯ 90 ಲಕ್ಷದ 03 ಸಾವಿರದ 259 ರೂಪಾಯಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿವೆ ಎಂಬ ಮಾಹಿತಿ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಹೆಬ್ಬಾಳದ ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಕಚೇರಿಯಿಂದಲೇ 3.96 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.


ನಗರದಲ್ಲಿರುವ 12 ಇಂದಿರಾ ಕ್ಯಾಂಟೀನ್ ಗಳು ಹಣ ಪಾವತಿಸಿಲ್ಲ. ಡಿಸಿಪಿ ಪೂರ್ವ ವಲಯದ ಸರ್ಕಾರಿ ಕ್ವಾರ್ಟರ್ಸ್, ರಿಜಿಸ್ಟ್ರಾರ್ ಜನರಲ್, ಕೆ ಜಿ ಹಳ್ಳಿ ಪೊಲೀಸ್ ಠಾಣೆ, ಪಿಡಬ್ಲ್ಯುಡಿ ಕ್ವಾರ್ಟರ್ಸ್, ಕೇಂದ್ರ ಸರ್ಕಾರಿ ಕಚೇರಿಗಳು, ಟೆಲಿಫೋನ್ ಕಚೇರಿಗಳು ಹಣ ಪಾವತಿಸದೆ ವಿಫಲವಾಗಿರುವ ಸಂಸ್ಥೆಗಳ ಪಟ್ಟಿಯಲ್ಲಿವೆ.


ಬಾಕಿ ಉಳಿಕೆಯನ್ನು ಸಂಗ್ರಹಿಸಲು ಬಿಡಬ್ಲ್ಯುಎಸ್ಎಸ್ ಬಿ ಪ್ರಯತ್ನಿಸುತ್ತಿದೆ. ವರ್ಷಗಳಿಂದ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಅನಕ ಬಾರಿ ನೊಟೀಸ್ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಬಿಡಬ್ಲ್ಯುಎಸ್ಎಸ್ ಬಿ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com