ಬನ್ನೇರುಘಟ್ಟ ಪಾರ್ಕ್ ನ ಸೂಕ್ಷ್ಮ ವಲಯ: ಕೇಂದ್ರದ ಅಧಿಸೂಚನೆಯಲ್ಲಿ ಕತ್ತರಿ, ಪರಿಸರ ಪ್ರೇಮಿಗಳಿಂದ ವಿರೋಧ 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯಗಳು(ಇಎಸ್ ಝೆಡ್)268.96 ಚದರ ಕಿಲೋ ಮೀಟರ್ ನಿಂದ 168.84 ಚದರ ಕಿಲೋ ಮೀಟರ್ ಗೆ ಕಿರಿದುಗೊಳಿಸುವುದಾಗಿ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.ಇದು ಸಹಜವಾಗಿ ಪರಿಸರ ಪ್ರೇಮಿಗಳು ಮತ್ತು ನಾಗರಿಕರಿಗೆ ಅಸಮಾಧಾನ ತರಿಸಿದೆ.
ಬನ್ನೇರುಘಟ್ಟ ಪಾರ್ಕ್ ನ ಸೂಕ್ಷ್ಮ ವಲಯ: ಕೇಂದ್ರದ ಅಧಿಸೂಚನೆಯಲ್ಲಿ ಕತ್ತರಿ, ಪರಿಸರ ಪ್ರೇಮಿಗಳಿಂದ ವಿರೋಧ 

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯಗಳು(ಇಎಸ್ ಝೆಡ್)268.96 ಚದರ ಕಿಲೋ ಮೀಟರ್ ನಿಂದ 168.84 ಚದರ ಕಿಲೋ ಮೀಟರ್ ಗೆ ಕಿರಿದುಗೊಳಿಸುವುದಾಗಿ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಇದು ಸಹಜವಾಗಿ ಪರಿಸರ ಪ್ರೇಮಿಗಳು ಮತ್ತು ನಾಗರಿಕರಿಗೆ ಅಸಮಾಧಾನ ತರಿಸಿದೆ. ಏಕೆಂದರೆ ಬೆಂಗಳೂರಿನಲ್ಲಿ ಉಳಿದಿರುವ ಕೊನೆಯ ಹಸಿರು ನೆಲೆಯೆಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಎಂದರೆ ತಪ್ಪಾಗಲಾರದು.


ಸರ್ಕಾರ ನಂಬಿಕೆಗೆ ದ್ರೋಹ ಮಾಡಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ. ಸರ್ಕಾರ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದು ಇಲ್ಲಿ ಉಸಿರಾಟಕ್ಕೆ ಶುದ್ಧ ಗಾಳಿ, ಓಡಾಟಕ್ಕೆ ಶುದ್ಧ ಪರಿಸರ, ಜಾಗ ಸಿಗದಂತೆ ಮಾಡುತ್ತಿದೆ ಎಂದು ಅಲವತ್ತುಕೊಳ್ಳುತ್ತಾರೆ. ಸರ್ಕಾರದ ಗೆಜೆಟ್ ಅಧಿಸೂಚನೆಗೆ ತಡೆ ತರಬೇಕೆಂದು ಕೋರ್ಟ್ ಮೊರೆ ಹೋಗಲು ಸಿದ್ದರಾಗಿದ್ದಾರೆ.


ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆ ಏನು ಹೇಳುತ್ತದೆ?: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತ 100 ಮೀಟರ್ ನಿಂದ 1 ಕಿಲೋ ಮೀಟರ್ ವರೆಗೆ ಪರಿಸರ ಸೂಕ್ಷ್ಮ ವಲಯವಾಗಿದೆ. ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿದ ದಿನದಿಂದ 2 ವರ್ಷದೊಳಗೆ ವಲಯ ಯೋಜನೆಯನ್ನು ಸ್ಥಳೀಯರು ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳ ಜೊತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ತಯಾರು ಮಾಡಬಹುದು ಎಂದು ಗೆಜೆಟ್ ಅಧಿಸೂಚನೆ ಹೇಳುತ್ತದೆ.


ಕೇಂದ್ರ ಸರ್ಕಾರದ ಈ ಗೆಜೆಟ್ ಅಧಿಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರ ಉತ್ತಮವಾಗಿ ಯೋಚಿಸಿ ಅಧಿಸೂಚನೆ ಹೊರಡಿಸಬಹುದು ಎಂದು ನಾವಂದುಕೊಂಡಿದ್ದೆವು, ಆದರೆ ರಾಜ್ಯ ಸರ್ಕಾರ ಮತ್ತು ಸಂಪುಟ ಉಪ ಸಮಿತಿ ಕಳುಹಿಸಿರುವುದಕ್ಕೆ ಅದು ಮುದ್ರೆಯೊತ್ತಿ ಕೊಟ್ಟಿದೆಯಷ್ಟೆ. ಪರಿಸರ ಸಂರಕ್ಷಣೆ ಬಗ್ಗೆ ಆದ್ಯತೆ ಕೊಟ್ಟಿದೆ ಎಂದು ಅನಿಸುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.


ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನ ಸುತ್ತಮುತ್ತ ಪಿಲ್ಲಿಗನಹಳ್ಳಿ, ಗೊಟ್ಟಿಗೆರೆ, ಬಸವನಪುರ, ಹೊಮ್ಮದೇವನಹಳ್ಳಿ, ಕಲ್ಕೆರೆ, ಬಿಲ್ವರದಹಳ್ಳಿ, ಬುಥನಹಳ್ಳಿ, ದೋಡಾಗುಲಿ, ಹೆರಾಂಡ್ಯಪನ್ಹಳ್ಳಿ, ಟಿಪ್ಪುರು, ಬಿಜಳ್ಳಿ, ಬೊಮ್ಮಸಂದ್ರ, ಹೊಸದುರ್ಗ, ಸಾಲ್ಬನ್ನಿ, ಮತ್ತು ಗುಡ್ಡೇವರಹನವನ್ನು ಸೂಕ್ಷ್ಮ ವಲಯಗಳಾಗಿ ಗೆಜೆಟ್ ನಲ್ಲಿ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com