ಕೊರೋನಾ ವೈರಸ್ ಹಿನ್ನೆಲೆ: ಮಹಾಂತೇಶ ಕವಟಗಿಮಠ ಪುತ್ರಿಯ ಆರಕ್ಷತೆ ಮುಂದೂಡಿಕೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇದೇ 15 ರಂದು ಸಂಜೆ ಬೆಳಗಾವಿಯ ಸಿಪಿಎಡ್ ಮೈದಾನ ಹಾಗೂ 17 ರಂದು  ಚಿಕ್ಕೋಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕರು, ಮಹಾಂತೇಶ ಕವಟಗಿಮಠ ಅವರ ಪುತ್ರಿ ಪೂಜಾ ಅವರ ಮದುವೆ ಸಮಾರಂಭದ  ಆರಕ್ಷತೆಯನ್ನು  ಮುಂದೂಡಲಾಗಿದೆ. 
ಮಹಾಂತೇಶ ಕವಟಗಿಮಠ
ಮಹಾಂತೇಶ ಕವಟಗಿಮಠ
Updated on

ಚಿಕ್ಕೋಡಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇದೇ 15 ರಂದು ಸಂಜೆ ಬೆಳಗಾವಿಯ ಸಿಪಿಎಡ್ ಮೈದಾನ ಹಾಗೂ 17 ರಂದು  ಚಿಕ್ಕೋಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕರು, ಮಹಾಂತೇಶ ಕವಟಗಿಮಠ ಅವರ ಪುತ್ರಿ ಪೂಜಾ ಅವರ ಮದುವೆ ಸಮಾರಂಭದ  ಆರಕ್ಷತೆಯನ್ನು  ಮುಂದೂಡಲಾಗಿದೆ. 

ಈ ಬಗ್ಗೆ ತಿಳಿಸಿರುವ ಅವರು, ದಿ.೧೫ ರಂದು  ಬೆಳಗ್ಗೆ ೧೦ ಗಂಟೆಗೆ ಅವರ ಮಗಳ ಮದುವೆಯನ್ನು ಕುಟುಂಬದರೊಂದಿಗೆ ಸರಳವಾಗಿ ನೆರವೇರಲಿದೆ, ತಮ್ಮ ತಮ್ಮ ಸ್ಥಳಗಳಿಂದಲೇ ವಧು ವರರನ್ನು ಆಶೀರ್ವದಿಸಬೇಕೆಂದು ಎಂದು ಕವಟಗಿಮಠ  ಕೋರಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರವು ಕೊರೋನ ವೈರಸ್ ಜನರಿಗೆ ಹರಡುವುದನ್ನು ತಡೆಗಟ್ಟುವ ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚು ಜನ ಸೇರುವ ಸಭೆ ಸಮಾರಂಭಗಳನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ  ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com