ಕರ್ನಾಟಕ ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆಯಿಂದ ಕೊರೋನಾ ಹೆಲ್ಪ್ ಡೆಸ್ಕ್ ಆರಂಭ 

ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಸಾಮಾನ್ಯ. ಇಲ್ಲಿ ಕೊರೋನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆ ವಿಶೇಷ ವೈದ್ಯಕೀಯ ಹೆಲ್ಪ್ ಡೆಸ್ಕ್ ಗಳನ್ನು ತೆರೆದಿದೆ. 
ಕರ್ನಾಟಕ ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆಯಿಂದ ಕೊರೋನಾ ಹೆಲ್ಪ್ ಡೆಸ್ಕ್ ಆರಂಭ 
Updated on

ಬೆಂಗಳೂರು:ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಸಾಮಾನ್ಯ. ಇಲ್ಲಿ ಕೊರೋನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆ ವಿಶೇಷ ವೈದ್ಯಕೀಯ ಹೆಲ್ಪ್ ಡೆಸ್ಕ್ಗಳನ್ನು ತೆರೆದಿದೆ. 


ನೈರುತ್ಯ ರೈಲ್ವೆ ಕರ್ನಾಟಕ, ತಮಿಳು ನಾಡು ಮತ್ತು ಗೋವಾ ರಾಜ್ಯಗಳ ಹಲವು ಭಾಗಗಳಲ್ಲಿ ಸಂಚರಿಸುತ್ತಿದ್ದು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ವಾಸ್ಕೊ ಡ ಗಾಮಾ, ವಿಜಯಪುರ, ಬೆಳಗಾವಿ, ಗದಗ, ಬಳ್ಳಾರಿ, ಹೊಸಪೇಟೆ, ಅಲ್ನವರ್ ಮತ್ತು ಬಾಗಲಕೋಟೆ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಿದೆ.


ರೈಲ್ವೆ ಇಲಾಖೆ ಸಿಬ್ಬಂದಿಗೆ ಪ್ರಮುಖ ನಿಲ್ದಾಣಗಳಲ್ಲಿ ಬೆಂಗಳೂರು ವಿಭಾಗದ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ವಾರದಲ್ಲಿ ಎರಡು-ಮೂರು ದಿನ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸುತ್ತದೆ.


ಕೊರೋನಾ ವೈರಸ್ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಮುಖ ನಿಲ್ದಾಣಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲಲಿ 600ಕ್ಕೂ ಹೆಚ್ಚು ಪೋಸ್ಟರ್ ಗಳನ್ನು ಹಾಕಲಾಗಿದೆ. ಕರಪತ್ರಗಳು, ಆಡಿಯೊ, ವಿಡಿಯೊಗಳನ್ನು, ಸಾರ್ವಜನಿಕ ಪ್ರಕಟಣೆಗಳನ್ನು, ಎಲ್ ಇಡಿ/ಎಲ್ ಸಿಡಿ ವಿಡಿಯೊ ಪರದೆ ಮೂಲಕ ಎಚ್ಚರಿಕೆ, ಸ್ವಚ್ಛತೆ ಕ್ರಮಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ.


ಕೊರೋನಾ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹುಬ್ಬಳ್ಳಿ/ಕೇಂದ್ರ ಆಸ್ಪತ್ರೆಯಲ್ಲಿ 16 ಬೆಡ್ ಗಳ ಸುಸಜ್ಜಿತ ರೈಲ್ವೆ ಆಸ್ಪತ್ರೆಯನ್ನು ಮೈಸೂರಿನಲ್ಲಿ 10 ಬೆಡ್ ಗಳಿರುವ ಆಸ್ಪತ್ರೆಯನ್ನು ತೆರೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com