ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾಲೀಕರಿಗೆ ದೋಖಾ: ಕುಖ್ಯಾತ ಸ್ಟ್ಯಾಂಪ್ ವಿನಿ ಬಂಧನ

ತಮ್ಮ ಒಡೆತನದ ಆಸ್ತಿಗಳ ನಕಲಿ  ದಾಖಲೆಗಳನ್ನು ರಚಿಸಿ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದ  30 ವರ್ಷದ ವ್ಯಕ್ತಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿನಯ್ ಕುಮಾರ್ ಅಲಿಯಾಸ್ ಸ್ಟ್ಯಾಂಪ್ ವಿನಿ, ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ಎಂದು ಗುರುತಿಸಲಾಗಿದೆ.. ಇದಲ್ಲದೆ ಪ್ರಕರಣದಲ್ಲಿ ಮಹಿಳೆಒಬ್ಬಳು ಸೇರಿ ಇನ್ನೂ ಐವರನ್ನು ಬಂಧಿಸ
ಸ್ಟ್ಯಾಂಪ್ ವಿನಿ
ಸ್ಟ್ಯಾಂಪ್ ವಿನಿ
Updated on

ಬೆಂಗಳೂರು: ತಮ್ಮ ಒಡೆತನದ ಆಸ್ತಿಗಳ ನಕಲಿ  ದಾಖಲೆಗಳನ್ನು ರಚಿಸಿ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದ  30 ವರ್ಷದ ವ್ಯಕ್ತಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿನಯ್ ಕುಮಾರ್ ಅಲಿಯಾಸ್ ಸ್ಟ್ಯಾಂಪ್ ವಿನಿ, ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ಎಂದು ಗುರುತಿಸಲಾಗಿದೆ.. ಇದಲ್ಲದೆ ಪ್ರಕರಣದಲ್ಲಿ ಮಹಿಳೆಒಬ್ಬಳು ಸೇರಿ ಇನ್ನೂ ಐವರನ್ನು ಬಂಧಿಸಲಾಗಿದೆ.

ಈ ಪ್ರಕರಣವು 2019 ರ ಮಾರ್ಚ್‌ನಲ್ಲಿ ಸಲ್ಲಿಸಿದ ದೂರಿಗೆ ಸಂಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುಎಸ್‌ಎನಲ್ಲಿ ವಾಸವಾಗಿರುವ ರೂಪಲಕ್ಷ್ಮಿ, ಕುರುಬರಹಳ್ಳಿಯ ಕರ್ನಾಟಕ ಲೇಔಟ್ ನಲ್ಲಿರುವ ವಸತಿ ಜಾಗದ ಮಾಲೀಕರಾಗಿದ್ದರು. ಅದೊಮ್ಮೆ ದೃಢೀಕರಣಕ್ಕಾಗಿ ಬ್ಯಾಂಕ್ ಮ್ಯಾನೇಜರ್ ತನ್ನನ್ನು ಸಂಪರ್ಕಿಸಿದಾಗಲೇ ಆಕೆಗೆ ತನ್ನ ಸಿಟ್ ತನಗರಿವಿಲ್ಲದಂತೆ ಇನ್ನೊಬ್ಬರ ಹೆಸರಿಗೆ ವರ್ಗವಾಗಿರುವುದು ತಿಳಿದುಬಂದಿದೆ. ಆಗ ಆಕೆಯ ಪರವಾಗಿ ಆಕೆಯ ಸೋದರ ಪೋಲೀಸರಿಗೆ ದೂರಿತ್ತಿದ್ದರು.

"ಸಂಪೂರ್ಣ ತನಿಖೆಯ ನಂತರ, ಈ ಪ್ರಕರಣದ ಹಿಂದಿನ ಸೂತ್ರಧಾರಿ ವಿನಯ್ ಎಂದು ತಿಳಿದುಬಂದಿದೆ. ಅವರು ಆಸ್ತಿ ಮಾಲೀಕರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಅವರು ಸತ್ತಿದ್ದರೆ ಅಥವಾ ವಿದೇಶಗಳಲ್ಲಿ ವಾಸಿಸುತ್ತಿದ್ದರೆ, ಅವನು ನಕಲಿ ದಾಖಲೆಗಳನ್ನು ರಚಿಸಿ ಆಸ್ತಿಯನ್ನು ಇತರರಿಗೆ ಮಾರುತ್ತಿದ್ದ. ಈ ಪ್ರಕರಣದಲ್ಲಿ ಸಹ  ಮಾಲೀಕರು ಯುಎಸ್ ನಲ್ಲಿದ್ದಾರೆ ಎನ್ನುವುದು ಅರಿತಿದ್ದ ವಿನಯ್ ಭೂಮಿಯನ್ನು ಮಾರಾಟ ಮಾಡಲು ಸಂಚು ಹೂಡಿದ. ಆತ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ರೂಪಲಕ್ಷ್ಮಿ ಎಂದು ನಟಿಸಲು ಆರೋಪಿಗಳಲ್ಲಿ ಒಬ್ಬರಾದ ಶಿವಮ್ಮನನ್ನುಕರೆದೊಯ್ದು ಭೂಮಿಯನ್ನು ಇನ್ನೊಬ್ಬ ಆರೋಪಿ ರಾಜ್ ಚಂದ್ರಶೇಖರ್ ಗೆ ಮಾರಾಟ ಮಾಡಿಸಿದ್ದಾರೆ. ಅಲ್ಲದೆ ಆ ನಂತರ ಗ್ಯಾಂಗ್ ಈ ವಂಚನೆ ಅರಿವಿಲ್ಲದ ಬಸವರಾಜ್ ಯಾರಗಲ್ ಎಂಬ ವ್ಯಕ್ತಿಗೆ ಅದೇ ಜಾಗವನ್ನು ಮಾರಾಟ ಮಾಡಿದೆ. ಹಣವನ್ನು ಅವರ ನಡುವೆ ಸಮಾನವಾಗಿ ಹಂಚಿಕೊಂಡಿದೆ ”ಎಂದು ಪೊಲೀಸರು ತಿಳಿಸಿದ್ದಾರೆ.

ವಿನಯ್ಕಂದಾಯ ಇಲಾಖೆಯ ಅಧಿಕಾರಿಗಳ ರಬ್ಬರ್ ಸ್ಟಾಂಪ್ ಅನ್ನು ನಕಲಿ ದಾಖಲೆಗಳನ್ನು ರಚಿಸಲು ಬಳಸಿದ್ದಾನೆ. ಪೊಲೀಸರು ಆತನ ಮನೆಯಲ್ಲಿ ಶೋಧ ನಡೆಸಿದಾಗ 71 ನಕಲಿ ಸೀಲುಗಳು, ನಂಬರಿಂಗ್ ಯಂತ್ರಗಳು, ಸ್ಟಾಂಪ್ ಪೇಪರ್‌ಗಳು, ಖಾಲಿ ಮರಣ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲ ವೇಳೆ ಘಟನೆಗಳು ಇವರ ಎಣಿಕೆಯಂತೆ ನಡೆಯದೇ ಹೋದದ್ದೂ ಇದೆ. ಆಗ ಆರೋಪಿಗಳು  ತಮ್ಮ ಕೆಲವು ಯೋಜನೆಗಳನ್ನು ಕೈಬಿಡಬೇಕಾಯಿತು. ಅವರು ನೈಸ್ ರಸ್ತೆ ಬಳಿಯ ಲಕ್ಷ್ಮಿಪುರ ಗ್ರಾಮದ ಧರಿತ್ರಿ ಲೇಔಟ್  ನಲ್ಲಿ ಒಂಬತ್ತು ಪ್ಲಾಟ್‌ಗಳಿಗೆ ನಕಲಿ ದಾಖಲೆಗಳನ್ನು ರಚಿಸಿದ್ದರು. ಉಪ-ರಿಜಿಸ್ಟ್ರಾರ್ ಕಚೇರಿಯಿಂದ ಬೇಡಿಕೆಯಿರುವ ಕೆಲವು ದಾಖಲೆಗಳನ್ನು ಅವರು ಸಲ್ಲಿಸಲು ಸಾಧ್ಯವಾಗದಿದ್ದಾಗ, ಅವರು ಯೋಜನೆಯನ್ನು ಕೈಬಿಟ್ಟರು. ಅಂತೆಯೇ,  ಬಗಲಗುಂಟೆ ಬಳಿಯ ಎಂಇಐ ಲೇ ಔಟ್ ನಲ್ಲಿ ವಿನಯ್ ಮತ್ತೊಂದು ಸೈಟ್ ಅನ್ನು ಗುರುತಿಸಿದ್ದಾನೆ, ಭೂಮಿಯ ಮಾಲೀಕರು ಮೃತಪಟ್ಟಿದ್ದಾರೆಂದು ಭಾವಿಸಿದ್ದ ಆತ  ಎಲ್ಲಾ ನಕಲಿ ದಾಖಲೆಗಳನ್ನು ರಚಿಸಿದ ನಂತರ, ಮಾಲೀಕರು ಜೀವಂತವಾಗಿದ್ದಾರೆಂದು  ಅರಿತನು. ತ್ತು ಯೋಜನೆಯನ್ನು ಕೈಬಿಟ್ಟದ್ದಾಗಿ ಪೋಲೀಸರು ಹೇಳೀದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com