ಕೊರೋನಾ ವೈರಸ್ ಬಂದಾಕ್ಷಣ‌ ಸಾಯಲ್ಲ: ಶ್ರೀರಾಮುಲು‌ ಸ್ಪಷ್ಟನೆ

ಕೊರೋನಾ‌ ವೈರಸ್ ತಗುಲಿದರೆ‌ ಸಾಯುತ್ತೇವೆ ಎಂಬ ಭಾವ ಬೇಡ ಎಂದು ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ಕೊರೋನಾ‌ ವೈರಸ್ ತಗುಲಿದರೆ‌ ಸಾಯುತ್ತೇವೆ ಎಂಬ ಭಾವ ಬೇಡ ಎಂದು ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

ಮೇಲ್ಮನೆಯಲ್ಲಿ ಮಾತನಾಡಿದ ಅವರು, ವೈರಸ್ ತಗುಲಿದ ತಕ್ಷಣ ಸಾಯುವುದಿಲ್ಲ. ರೋಗ ನಿರೋಧಕ ಶಕ್ತಿ ಇಲ್ಲದಿದ್ದರೆ ಮಾತ್ರ ಸಾವು ಬರುತ್ತದೆ. ಕೊರೊನಾದಿಂದ ಸಾವಿನ ಸಂಖ್ಯೆ ಶೇ. 2.6ರಷ್ಟು ಮಾತ್ರ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿವರಿಸಿದರು.

ಕೊರೋನಾ ಲಕ್ಷಣ ಪತ್ತೆಗೆ ಇಂದಿನಿಂದ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಆರಂಭ ಮಾಡುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಇದೂವರೆಗೆ 5 ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗಿದೆ. 

ಬೆಂಗಳೂರು 2, ಶಿವಮೊಗ್ಗ, ಹಾಸನ ಮತ್ತು ಮೈಸೂರುಗಳಲ್ಲಿ ತಲಾ 1 ಪರಿಕ್ಷಾ ಲ್ಯಾಬ್ ಗಳು ಇವೆ. ಉಳಿದ ಜಿಲ್ಲೆಗಳಲ್ಲೂ ಸದ್ಯದಲ್ಲೇ ಪರೀಕ್ಷಾ ಲ್ಯಾಬ್ ತೆರೆಯುತ್ತೇವೆ. ಬೆಳಗಾವಿ, ಮಂಗಳೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ರಾಯಚೂರು ಗಳಲ್ಲೂ ಶೀಘ್ರದಲ್ಲೇ ಲ್ಯಾಬ್‍ಗಳು ಬರಲಿವೆ. ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಉಪಕರಣ ಖರೀದಿಗೆ ಅನುಮತಿ ನೀಡಿದ್ದೇವೆ ಎಂದು ವಿವರಿಸಿದ್ದಾರೆ. 

ಕಲಬುರಗಿಯಲ್ಲಿ ಸಿದ್ದಿಕ್ ಸಾವು ಬಳಿಕ ಭೀತಿ ಹೆಚ್ಚಳವಾಗಿದೆ. ಕೆಮ್ಮು, ನೆಗಡಿ ಬಂದವರೆಲ್ಲ ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ತಿದ್ದಾರೆ. ಹೀಗಾಗಿ ಕಲಬುರಗಿಯಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ತಿದ್ದೇವೆ. ಬಹಳಷ್ಡು ಜನರನ್ನು ಪರೀಕ್ಷಗೆ ಒಳಪಡಿಸುತ್ತಿದ್ದೇವೆ. ಏರ್ ಪೋರ್ಟ್ ಗಳಲ್ಲಿ ಇದೂವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com