ಕೊರೋನಾ ಎಫೆಕ್ಟ್: ಬೆಳಗಾವಿಯಲ್ಲಿ 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳ ಜೀವಂತ ಸಮಾಧಿ!

ಕೊರೋನಾ ವೈರಸ್ ಎಫೆಕ್ಟ್ ಬಡ ರೈತನ ಸುಮಾರು 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಾಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಕೋಳಿಗಳ ಜೀವಂತ ಸಮಾಧಿ
ಕೋಳಿಗಳ ಜೀವಂತ ಸಮಾಧಿ

ಕಾಗವಾಡ/ಬೆಳಗಾವಿ: ಕೊರೋನಾ ವೈರಸ್ ಎಫೆಕ್ಟ್ ಬಡ ರೈತನ ಸುಮಾರು 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಾಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಕೋಳಿ ಫಾರಂ ಮಾಲೀಕ ಜೆಸಿಬಿ ಮೂಲಕ ತೆಗ್ಗು ತೆಗೆದು ಕೋಳಿಗಳನ್ನು ಜೀವಂತ ಸಮಾಧಿ‌ ಮಾಡಿದ್ದಾರೆ. ಕೋಳಿಗಳು ೫೦ ದಿನದಲ್ಲಿ ಮೂರು ಕೆಜಿ ಅಷ್ಟು ಬೆಳೆದಿದ್ದು, ಈಗ ಅವು ಮಾರಾಟವಾಗದೆ ಇರುವುದರಿಂದ ರೈತ ಕಣ್ಣೀರಿಟ್ಟು ಜೀವಂತ ಸಮಾಧಿ ಮಾಡಿದ್ದಾರೆ.

ಕೋಳಿ ಫಾರ್ಮ ಮಾಲೀಕ ಜಗದೀಶ್ ಮರಾಠೆ ಮಾತನಾಡಿ, ಕೊರೋನಾ ವೈರಸ್ ನನ್ನ ಕುಟುಂಬವನ್ನು ತಿಂದು ಹಾಕಿದೆ, ನಾನು ದಿನನಿತ್ಯ ಕಷ್ಟಪಟ್ಟು ಸಾಕಾಣಿಕೆ ಮಾಡಿದ ಸುಮಾರು 2 ಸಾವಿರ ಕೋಳಿಗಳನ್ನು ಮಣ್ಣಲ್ಲಿ ಮುಚ್ಚಿ ಹಾಕುತ್ತಿದ್ದೇನೆ. 
ಉಚಿತವಾಗಿ ಕೊಡುತ್ತೇನೆ ಬನ್ನಿ ಎಂದು ಕೇಳಿದರು, ನನ್ನ ಕೋಳಿ ಯಾರೂ ತೆಗೆದುಕೊಳ್ಳುತ್ತಿಲ್ಲ. ಇದೇ ಶೇಡ್ ನಲ್ಲಿ ಕೋಳಿಗಳು ಸಾವನಪ್ಪಿದ್ದರೆ ರೋಗ ಹರಡಬಹುದು. ಈ ಉದ್ದೇಶದಿಂದ ಜೆಸಿಬಿ ಮುಖಾಂತರ ತೆಗ್ಗು ತೋಡಿ ಕೋಳಿಗಳನ್ನು ಮುಚ್ಚಿ ಹಾಕುತ್ತಿದ್ದೇನೆ ಸಾರ್ ಎಂದು ತಮ್ಮ ಅಳಲು ತೋಡಿಕೊಂಡರು.

ಕಳೆದ 50 ದಿನಗಳಿಂದ 2 ಸಾವಿರ ಕೋಳಿ ಸಾಕಾಣಿಕೆ ಮಾಡಿದ್ದ ಜಗದೀಶ್ ಅವರು ಇನ್ನೇನು ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ವದಂತಿ ಹಬ್ಬಿಸಲಾಗಿದೆ. ಕಳೆದ ಒಂದು ತಿಂಗಳಿಂದ ಕೊರೋನಾ ವೈರಸ್ ಹಾವಳಿ ಹಬ್ಬಿದ್ದು, ಈ ರೋಗ ಕೋಳಿಯಿಂದ ಬಂದಿದೆ ಎಂಬ ವದಂತಿ ಹಬ್ಬಿದ್ದರಿಂದ ಅನೇಕರು ಈ ಕಾಯಿಲೆಗೆ ಹೆದರಿ ಚಿಕನ್ ಸೇವನೆ ಬಂದ್ ಮಾಡಿದ್ದಾರೆ. ಇದರ ಪರಿಣಾಮ ಜಗದೀಶ್ ಮರಾಠೆ ಸಾಕಾಣಿಕೆ ಮಾಡಿದ ಕೋಳಿಗಳನ್ನು ಯಾರೂ ಖರಿದೀಸಲು ಮುಂದೆ ಬರುತ್ತಿಲ್ಲ.

ಕೋಳಿ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜಗದೀಶ್ ಮರಾಠೆ ಅವರು ಗ್ರಾಮಗಳಿಗೆ ಹೋಗಿ, ನನ್ನ ಬಳಿಯಿರುವ ಕೋಳಿ ಉಚಿತವಾಗಿ ಕೋಡುತ್ತೇನೆ, ಬನ್ನಿರಿ ಎಂದು ಕರೆದಾಗ ಯಾರೂ ಬರಲಿಲ್ಲ. ಹೀಗಾಗಿ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com