ಬೆಳ್ತಂಗಡಿ: ನದಿಗೆ ಈಜಲು ಹೋದ ಬಾಲಕ ಸೇರಿ ಇಬ್ಬರು ನೀರುಪಾಲು
ರಾಜ್ಯ
ಬೆಳ್ತಂಗಡಿ: ನದಿಗೆ ಈಜಲು ಹೋದ ಬಾಲಕ ಸೇರಿ ಇಬ್ಬರು ನೀರುಪಾಲು
ನದಿಗೆ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಬೆಳ್ತಂಗಡಿ ತಾಲೂಕಿನ ಕೊಡಿಂಗೇರಿ ಎಂಬಲ್ಲಿ ನಡೆದಿದೆ.
ಮಂಗಳೂರು: ನದಿಗೆ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಬೆಳ್ತಂಗಡಿ ತಾಲೂಕಿನ ಕೊಡಿಂಗೇರಿ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿಯ ಫಲ್ಗಣಿ ನದಿಗೆ ಈ ಇಬ್ಬರು ಇಂದು ಬೆಳಗ್ಗೆ ಈಜಾಡಲು ತೆರಳಿದ್ದರು ಎನ್ನಲಾಗಿದೆ.
ಮೃತರನ್ನು ಶಿರ್ತಾಡಿ ಗ್ರಾಮದ ಪಣಪಿಲ್ ದರ್ಖಾಸು ನಿವಾಸಿ ಮಹಾಬಲ ಪೂಜಾರಿ ಎಂಬವರ ಪುತ್ರ ವಾಸುದೇವ (22) ಹಾಗೂ ಅದೇ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಎಂಬವರ ಪುತ್ರ ಇಶಾನ್ (8) ಮೃತಪಟ್ಟವರು ಎಂದು ತಿಳಿದುಬಂದಿದೆ.
ಇಬ್ಬರ ಮೃತದೇಹಗಳು ಹೊಸಂಗಡಿ ಗ್ರಾಮದ ಸುನೀಲ್ ಎಂಬುವವರ ತೋಟದ ಪಕ್ಕ ಹರಿಯುವ ನದಿಯ ಬಂಡೆಗಲ್ಲಿನ ಕೆಳಗೆ ಪತ್ತೆಯಾಗಿದೆ. ಸ್ಥಳಕ್ಕೆ ವೇಣೂರು ಪೋಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

