ಬೆಂಗಳೂರು: ದಂಪತಿಗಳಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಫೈನಾನ್ಶಿಯರ್ ಅರೆಸ್ಟ್

 ದಂಪತಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ ಆರೋಪದ ಹಿನ್ನೆಲೆಯಲ್ಲಿ ಫೈನಾನ್ಶಿಯರ್ ಒಬ್ಬನನ್ನು ಬೆಂಗಳೂರು ವಿಜಯನಗರ ಪೋಲೀಸರು ಬಂಧಿಸಿದ್ದಾರೆ. ಫೈನಾನ್ಶಿಯರ್ ಪ್ರಕಾಶ್ ಎಂಬಾತನನ್ನು  ಮಂಗಳವಾರ ಬಂಧಿಸಿದ್ದಾರೆ. ಪ್ರಕಾಶ್ ಕಿರುಕುಳ ನೀಡಿದ ಕಾರಣ ದಂಪತಿ ಗಳಾದ  ಧರ್ಮರಾಜ್ (55) ಮತ್ತು ಭಾಗ್ಯ (50) ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಂಪತಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ ಆರೋಪದ ಹಿನ್ನೆಲೆಯಲ್ಲಿ ಫೈನಾನ್ಶಿಯರ್ ಒಬ್ಬನನ್ನು ಬೆಂಗಳೂರು ವಿಜಯನಗರ ಪೋಲೀಸರು ಬಂಧಿಸಿದ್ದಾರೆ. ಫೈನಾನ್ಶಿಯರ್ ಪ್ರಕಾಶ್ ಎಂಬಾತನನ್ನು  ಮಂಗಳವಾರ ಬಂಧಿಸಿದ್ದಾರೆ. ಪ್ರಕಾಶ್ ಕಿರುಕುಳ ನೀಡಿದ ಕಾರಣ ದಂಪತಿ ಗಳಾದ  ಧರ್ಮರಾಜ್ (55) ಮತ್ತು ಭಾಗ್ಯ (50) ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದರು.

ದಂಪತಿಗಳು ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿದ್ದು ಹೊಸಹಳ್ಳಿ ನಿವಾಸಿ ಪ್ರಕಾಶ್ ಅವರು ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದಾರೆ ಅವರೇ ತಮಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದರೆಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕಾಟನ್‌ಪೇಟೆಯಲ್ಲಿ  ದಂಪತಿ ಬೇಕರಿ ಹೊಂದಿದ್ದು, ಆಸ್ತಿಯನ್ನು ಜಾಮೀನಿಗೆ ಇರಿಸಿದ ಬಳಿಕ  60 ಲಕ್ಷ ರೂ. ವ್ಯವಹಾರವು ನಷ್ಟವನ್ನು ಅನುಭವಿಸಿದಾಗ, ಧರ್ಮರಾಜ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ.

ಅತಿಯಾದ ಬಡ್ಡಿದರಗಳನ್ನು ವಿಧಿಸುವ ಮೂಲಕ ಪ್ರಕಾಶ್ ಅವರ ಆಸ್ತಿಯನ್ನು ತನ್ನ ಹೆಸರಿನಲ್ಲಿ ನೋಂದಾಯಿಸಲು ಒತ್ತಾಯಿಸಿದ್ದಾರೆ. ಅದಕ್ಕಾಗಿ ಪ್ರಕಶ್ ತಮ್ಮವರ ಗ್ಯಾಂಗಿನೊಡನೆ  ಬೇಕರಿಯ ಮುಂದೆ ಬಂದು ದಾಂಧಲೆ ಸಹ ಮಾಡಿದ್ದರು.ಇದರಿಂದ ಬೇಸರಗೊಂಡ ದಂಪತಿಗಳು ಆತ್ಮಹತ್ಯೆಗೆ ನಿರ್ಧಾರ ತೆಗೆದುಕೊಂಡರು.

ದಂಪತಿಯ ಪುತ್ರ ದರ್ಶನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಸಧ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com