ದ.ಕ ಜಿಲ್ಲೆಯ 10 ತಿಂಗಳ ಶಿಶುವಿಗೆ ಕೊರೋನಾ: ಪೋಷಕರಲ್ಲಿ, ವೈದ್ಯರಲ್ಲಿ ಆತಂಕ, ತಜ್ಞರು ಹೇಳುವುದೇನು?

ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಮಗುವಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದು ಪುಟ್ಟ ಮಕ್ಕಳಿರುವ ಪೋಷಕರಲ್ಲಿ ಆತಂಕ ತಂದಿದೆ. ಸಣ್ಣ ಮಕ್ಕಳಿಗೆ ಚಿಕಿತ್ಸೆ ನೀಡುವುದು ನಿಜಕ್ಕೂ ವೈದ್ಯರಿಗೆ ಸವಾಲಾಗಿದೆ.
ದ.ಕ ಜಿಲ್ಲೆಯ 10 ತಿಂಗಳ ಶಿಶುವಿಗೆ ಕೊರೋನಾ: ಪೋಷಕರಲ್ಲಿ, ವೈದ್ಯರಲ್ಲಿ ಆತಂಕ, ತಜ್ಞರು ಹೇಳುವುದೇನು?

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಮಗುವಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದು ಪುಟ್ಟ ಮಕ್ಕಳಿರುವ ಪೋಷಕರಲ್ಲಿ ಆತಂಕ ತಂದಿದೆ. ಸಣ್ಣ ಮಕ್ಕಳಿಗೆ ಚಿಕಿತ್ಸೆ ನೀಡುವುದು ನಿಜಕ್ಕೂ ವೈದ್ಯರಿಗೆ ಸವಾಲಾಗಿದೆ.

ಈ ಸಂದರ್ಭದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡುವುದು ಹೇಗೆ ಎಂಬುದಕ್ಕೆ ವೈದ್ಯರು, ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ

  1. ಎಳೆ ಶಿಶುಗಳನ್ನು ಹೊಂದಿರುವ ಪೋಷಕರು ಸಾಧ್ಯವಾದಷ್ಟು ಅವರನ್ನು ತಬ್ಬಿಕೊಳ್ಳುವುದು, ಮುತ್ತಿಡುವುದು ಮಾಡಬಾರದು, ಬಂಧುಗಳು, ಸ್ನೇಹಿತರಿಂದ ಶಿಶುಗಳನ್ನು ಸಾಧ್ಯವಾದಷ್ಟು ದೂರವಿಡಬೇಕು.
  2. ನವಜಾತ ಶಿಶುಗಳ ಮೇಲೆ ಕೊರೋನಾ ವೈರಸ್ ನ ತೀವ್ರತೆ ಹೆಚ್ಚು.ಜ್ವರ, ಶೀತ, ಕೆಮ್ಮು ತಾಗದಂತೆ ಶಿಶುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.
  3. ಸಾಧ್ಯವಾದಷ್ಟು ಪೋಷಕರು ಮನೆಯಲ್ಲಿಯೇ ಉಳಿದುಕೊಂಡು ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ಎನ್ನುತ್ತಾರೆ ಇಂದಿರಾನಗರ ಮದರ್ ಹುಡ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಪ್ರತಾಪ್ ಚಂದ್ರ.
  4. ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಮಗುವಿಗೆ ಕೊರೋನಾ ವೈರಸ್ ಸೋಂಕು ತಾಗಿರುವುದು ಸಮುದಾಯದಿಂದ ಹಬ್ಬಿರುವುದಾಗಿರಬಹುದು. ಏಕೆಂದರೆ ಈ ಮಗುವಿನ ಪ್ರಯಾಣದ ವಿವರಗಳಿಲ್ಲ.ಮಗುವಿನ ಮನೆಯವರು ಕೇರಳಕ್ಕೆ ಹೋಗಿಬಂದಿದ್ದರು. ಈ ಮಗುವಿನ ತಾಯಿ ಮಾಸ್ಕ್ ಧರಿಸಿ, ಸ್ವ ನಿರ್ಬಂಧದಲ್ಲಿದ್ದು ಎದೆಹಾಲು ಉಣಿಸಬಹುದು. ಮಗುವಿಗೆ ಬೇರೆ ಯಾರ ಸಂಪರ್ಕವೂ ಆಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಬೆಂಗಳೂರಿನ ರಿಚ್ ಮಂಡ್ ರಸ್ತೆಯ ಡಾ ಶ್ರೀನಾಥ್ ಮಣಿಕಾಂತಿ.
  5. ಸದ್ಯ ಭಾರತ ಸೇರಿದಂತೆ ವಿಶ್ವದ ಕೊರೋನಾ ಪೀಡಿತರ ಸಂಖ್ಯೆಯನ್ನು ನೋಡಿದಾಗ 12 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸೋಂಕು ತಗುಲಿರುವ ಪ್ರಮಾಣ ಕಡಿಮೆಯಿದೆ. ಹಾಗೆಂದು ಮಕ್ಕಳು ಸುರಕ್ಷಿತ ಎಂದು ನಿರ್ಲಕ್ಷ್ಯ ವಹಿಸಲು ಸಾಧ್ಯವಿಲ್ಲ. ದಕ್ಷಿಣ ಕನ್ನಡದ ಮಗು ಕೇರಳದಿಂದ ಬಂದಿರಬೇಕು, ಅಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ, ಹೀಗಾಗಿ ಅಲ್ಲಿಂದ ಸೋಂಕು ತಗುಲಿರಬೇಕು ಎನ್ನುತ್ತಾರೆ ಕ್ಲೌಡ್ ನೈನ್ ಗ್ರೂಪ್ ಆಫ್ ಆಸ್ಪತ್ರೆಯ ಡಾ ಕಿಶೋರ್ ಕುಮಾರ್.
  6. ವಿಶ್ವದ ಕೊರೋನಾ ಪೀಡಿತರ ಅಂಕಿಅಂಶ ತೆಗೆದುಕೊಂಡರೆ, ಕೊರಿಯಾದಲ್ಲಿ 9 ಸಾವಿರ ಕೊರೋನಾ ಪೀಡಿತರಲ್ಲಿ ಶೇಕಡಾ 1.1ಕ್ಕಿಂತ ಕಡಿಮೆ ಮಂದಿ 1 ವರ್ಷದೊಳಗಿನ ಶಿಶುಗಳಾಗಿದ್ದಾರೆ. ಐರ್ಲೆಂಡ್ ನಲ್ಲಿ 700 ಮಕ್ಕಳನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ ಮೂವರಲ್ಲಿ ಕಾಣಿಸಿಕೊಂಡಿದೆ. ಇಟಲಿಯಲ್ಲಿ ಕೊರೋನಾ ತಪಾಸಣೆಗೆ ಒಳಗಾದ 400 ಮಕ್ಕಳಲ್ಲಿ ಕೆಲವರಿಗೆ ಮಾತ್ರ ಕಾಣಿಸಿಕೊಂಡಿದ್ದು, ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೋನಾ ಸೋಂಕು ಕಾಣಿಸಿಕೊಂಡ ಚೀನಾ ದೇಶದಲ್ಲಿ ಒಂದು ಮಗುವಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಆ ಮಗುವಿಗೆ ಕಿಬ್ಬೊಟ್ಟೆಯ ನೋವು ಕೂಡ ಇದ್ದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com