ರಾಜ್ಯದಲ್ಲಿ ಕೋವಿಡ್-19 ಚಟುವಟಿಕೆಗೆ 500 ಕಾರುಗಳನ್ನು ನೀಡಿದ ಓಲಾ

ವೈದ್ಯರ, ವೈದ್ಯಕೀಯ ಸೇವೆಗಳಿಗಾಗಿ ಹಾಗೂ ಕೋವಿಡ್ ಸಂಬಂಧಿತ ಸೇವೆಗಳಿಗಾಗಿ ಗಿ 500 ವಾಹನಗಳನ್ನು ಸರ್ಕಾರಕ್ಕೆ ನೀಡಲು ಓಲಾ ಕ್ಯಾಬ್ಸ್ ಒಪ್ಪಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ ಸೋಮವಾರ ಹೇಳಿದ್ದಾರೆ.  
ಓಲಾ
ಓಲಾ

ಬೆಂಗಳೂರು: ವೈದ್ಯರ, ವೈದ್ಯಕೀಯ ಸೇವೆಗಳಿಗಾಗಿ ಹಾಗೂ ಕೋವಿಡ್ ಸಂಬಂಧಿತ ಸೇವೆಗಳಿಗಾಗಿ ಗಿ 500 ವಾಹನಗಳನ್ನು ಸರ್ಕಾರಕ್ಕೆ ನೀಡಲು ಓಲಾ ಕ್ಯಾಬ್ಸ್ ಒಪ್ಪಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ ಸೋಮವಾರ ಹೇಳಿದ್ದಾರೆ. 

"ಕರ್ನಾಟಕದಲ್ಲಿ ಕೋವಿಡ್19 ಸಂಬಂಧಿತ ಚಟುವಟಿಕೆಗಳಿಗಾಗಿ 500 ಓಲಾ ವಾಹನಗಳನ್ನು ನೀಡಲು ಓಲಾಕಾಬ್ಸ್ ಒಪ್ಪಿಕೊಂಡಿದೆ. ಈ ವಾಹನಗಳನ್ನು ಸರ್ಕಾರವು ವೈದ್ಯರು ಮತ್ತು ಕೋವಿಡ್ 19 ಸಂಬಂಧಿತ ಚಟುವಟಿಕೆಗಳಿಗಾ ಬಳಸಲು ಬಯಸುತ್ತದೆ. " ಅಶ್ವತ್ ನಾರಾಯಣ ಟ್ವಿಟ್ ಮಾಡಿದ್ದಾರೆ.

ಕರೋನವೈರಸ್ ಹರಡುವಿಕೆಯ ವಿರುದ್ಧ ಹೋರಾಡುವ ಉದ್ದೇಶದಿಂದ ಲಾಕ್‌ಡೌನ್ ಘೋಷಿಸಿದ ನರೇಂದ್ರ ಮೋದಿ ಆದೇಶವನ್ನು ಕರ್ನಾಟಕ ಸರ್ಕಾರ ಸಹ ಪಾಲಿಸುತ್ತಿದೆ.  ಓಲಾ, ಉಬರ್, ಟ್ಯಾಕ್ಸಿಗಳು, ಆಟೋರಿಕ್ಷಾಗಳು ಮತ್ತು ಇತರ ಬಾಡಿಗೆ ಸೇವೆಗಳನ್ನು ರದ್ದುಪಡಿಸಿದೆ. ಬದಲಾಗಿ ಅಗತ್ಯ  ಸರಕುಗಳು ಮತ್ತು ವೈದ್ಯಕೀಯ ತುರ್ತು ಸಲಕರಣೆ ಸಾಗಾಟಕ್ಕೆ ಹೊರತಾಗಿ ಅವನ್ನು ಬಳಕೆಗೆ ಅನುಮತಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com