ಕೊವಿಡ್-19: ಕೈಗಾರಿಕೋದ್ಯಮಿಗಳಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

ಕೊವಿಡ್-19 ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು ಸಹ ಕೈ ಜೋಡಿಸಿದ್ದು, "ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿ"ಗೆ ಕಾರ್ಪೋರೇಟ್‌ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(ಸಿಎಸ್‌ಆರ್) ವತಿಯಿಂದ ಬೃಹತ್‌ ಮೊತ್ತದ ದೇಣಿಗೆ ಘೊಷಿಸಿವೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕೊವಿಡ್-19 ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು ಸಹ ಕೈ ಜೋಡಿಸಿದ್ದು, "ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿ"ಗೆ ಕಾರ್ಪೋರೇಟ್‌ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(ಸಿಎಸ್‌ಆರ್) ವತಿಯಿಂದ ಬೃಹತ್‌ ಮೊತ್ತದ ದೇಣಿಗೆ ಘೊಷಿಸಿವೆ.

ಏಷಿಯನ್ ಪೇಂಟ್‌ ಕಂಪನಿಯು 2 ಕೋಟಿ ರೂಗಳನ್ನು ಈಗಾಗಲೇ ಸಿಎಂ ನಿಧಿಗೆ ಅರ್ಪಿಸಿದ್ದಾರೆ. ಟೊಯೋಟಾ ಇಂಡಸ್ಟ್ರೀಸ್‌ ಎಂಜಿನ್ ವತಿಯಿಂದ 31 ಲಕ್ಷ ರೂ, ಜಿಯೋಮಿ ಟೆಕ್ನಾಲಜಿ, ಜೆ.ಎಂ. ಫಿನಾಶಿಯಲ್ ಕಂಪನಿಯು ತಲಾ 25 ಲಕ್ಷ ರೂ., ಟೊಯೋಟಾ ಕಿರ್ಲೋಸ್ಕರ್ ಆಟೋಪಾರ್ಟ್ಸ್‌ ವತಿಯಿಂದ 23 ಲಕ್ಷ ರೂ., ಕೆನ್ನಾ ಮೆಟಲ್ಸ್ ವತಿಯಿಂದ 15 ಲಕ್ಷ ರೂ, ಬ್ರಿಗೇಡ್‌ ಎಂಟರ್‌ಪ್ರೈಸಸ್ ವತಿಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿವೆ. 

ಜೊತೆಗೆ ಸ್ಯಾಮ್‌ಸಂಗ್ ಆ‌ರ್‌ ಆ್ಯಂಡ್‌ ಡಿ ಕಂಪನಿಯಿಂದ 1 ಕೋಟಿ ರೂ. ಮೊತ್ತದ ಹೆಲ್ತ್‌ ಕಿಟ್‌‌ ಅನ್ನು ಕೊರಿಯಾ ದೇಶದಿಂದ ಆಮದು ಮಾಡಿಕೊಳ್ಳುವುದಾಗಿ ಘೋಷಿಸಿದೆ. 

ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ವತಿಯಿಂದ 30 ಲಕ್ಷ ರೂ, ದೇಣಿಗೆ ಸಹಿತ ವೈದ್ಯರು ಹಾಗೂ ನರ್ಸ್‌ಗಳಿಗೆ 500 ಬಾಡಿ ಸ್ಯೂಟ್, 5 ಸಾವಿರ ಎನ್ 95 ಮಾಸ್ಕ್ ಹಾಗೂ ರಾಮನಗರ ಭಾಗದಲ್ಲಿ ಬಡ ಕುಟುಂಬಗಳಿಗೆ 1200 ಊಟದ ಪೊಟ್ಟಣ ನೀಡುತ್ತಿದೆ.

ಹಿಮಾಟ್ಸಿಂಗ್ ಸೈಡ್ ಲಿಮಿಟೆಡ್‌ ವತಿಯಿಂದ 10 ಕೋಟಿ ರು. ಮೊತ್ತದ ಪಿಲ್ಲೋ ಕವರ್, ಬೆಡ್‌ಶೀಟ್, ಟವಲ್‌ಗಳನ್ನು ನೀಡುವ ಹೊಣೆ ಹೊತ್ತಿದೆ. ಜೊತೆಗೆ ಬ್ರಿಟಾನಿಯಾ ಇಂಡಸ್ಟ್ರೀ, ವಿಪ್ರೋ, ಜೆಎಸ್‌ಕೆ, ಜ್ಯೋತಿಲಾಲ್‌ ಮೆಡಿಸನ್‌ ಕಂಪನಿಗಳು ಸಹ ಇತರೆ ಆರೋಗ್ಯ ಕಿಟ್ ಹಾಗೂ ದೇಣಿಗೆ ಘೋಷಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com