ರೆಡ್ ಝೋನ್ ಪಟ್ಟಿಗೆ ಮಂಡ್ಯ: ಶವ ಸಂಸ್ಕಾರದಿಂದಾಗಿ ಪಾಂಡವಪುರಕ್ಕೂ ವಕ್ಕರಿಸಿದ ಕೊರೋನಾ

ಮಹಾರಾಷ್ಟ್ರದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಮಂಡ್ಯ ಜಿಲ್ಲೆಗೆ ತಂದು ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸುವ ಮೂಲಕ ಅಧಿಕಾರಿಗಳೇ ಮಂಡ್ಯ ಜಿಲ್ಲೆಯನ್ನು ಕೊರೋನಾ ಗ್ರೀನ್‌ ಜೋನ್‌ನಿಂದ ರೆಡ್‌ಝೋನ್‌ ಪಟ್ಟಿಗೆ ಸೇರಿಸಿರುವ ಆತಂಕಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಹಾರಾಷ್ಟ್ರದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಮಂಡ್ಯ ಜಿಲ್ಲೆಗೆ ತಂದು ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸುವ ಮೂಲಕ ಅಧಿಕಾರಿಗಳೇ ಮಂಡ್ಯ ಜಿಲ್ಲೆಯನ್ನು ಕೊರೋನಾ ಗ್ರೀನ್‌ ಜೋನ್‌ನಿಂದ ರೆಡ್‌ಝೋನ್‌ ಪಟ್ಟಿಗೆ ಸೇರಿಸಿರುವ ಆತಂಕಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ

ಇದರ ಪರಿಣಾಮವಾಗಿ, ಪಾಂಡವಪುರ ತಾಲೂಕಿನ ಮೇಲುಕೋಟೆಯ ಕೊಡಗಹಳ್ಳಿಯಲ್ಲಿ ಒಂದೇ ಗ್ರಾಮದ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ

ಮೇಲುಕೋಟೆಯಿಂದ 3 ಕಿ.ಮೀ. ದೂರದಲ್ಲಿರುವ ಕೊಡಗಹಳ್ಳಿಗೆ ಮುಂಬೈಯಿಂದ 10 ದಿನಗಳ ಹಿಂದೆ ಶವವೊಂದನ್ನು ತಂದು ಅಂತ್ಯಕ್ರಿಯೆ ಮಾಡಲಾಗಿತ್ತು. ವ್ಯಕ್ತಿಯೊಬ್ಬರು ಮುಂಬೈಯಲ್ಲಿ ಮೃತಪಟ್ಟಿದ್ದು, ಅವರ ಶವವನ್ನು ಲಾಕ್ ಡೌನ್ ನಡುವೆಯೂ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com