ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕಾಂಗ್ರೆಸ್ ನಿಂದ 1 ಕೋಟಿ ರೂ ದೇಣಿಗೆ

ಕೊರೊನಾ ಲಾಕ್‌ಡೌನ್‌ ಸಡಿಲಗೊಂಡ ಪರಿಣಾಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದ ಕಾರ್ಮಿಕರು ಬಸ್‌ ಪ್ರಯಾಣ ದರದ ಹೆಚ್ಚಳದಿಂದಾಗಿ ಕಂಗಾಲಾಗಿದ್ದರು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಸಡಿಲಗೊಂಡ ಪರಿಣಾಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದ ಕಾರ್ಮಿಕರು ಬಸ್‌ ಪ್ರಯಾಣ ದರದ ಹೆಚ್ಚಳದಿಂದಾಗಿ ಕಂಗಾಲಾಗಿದ್ದರು. 

ಸರ್ಕಾರದ ಈ ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದೀಗ ಕಾಂಗ್ರೆಸ್ ಕೂಡಾ ಮುಂದಾಗಿದ್ದು ಕೆಎಸ್‌ಆರ್‌ಟಿಸಿ ಸಂಸ್ಥೆಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಲಾಕ್‌ಡೌನ್ ಸಡಿಲ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯ ಕಾರ್ಮಿಕರು ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ ಬಸ್‌ ದರ ಏರಿಕೆಯಿಂದಾಗಿ ಊರಿಗೆ ತೆರಳಲಾಗದೆ ಕಂಗಾಲಾಗಿದ್ದರು. ಸರ್ಕಾರದ ನಿರ್ಲಕ್ಷ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದರು.

ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ಒಂದು ಕೋಟಿ ರೂ ಚೆಕ್ ನೀಡಿದ್ದಾರೆ.  ಕಾಂಗ್ರೆಸ್ ನಾಯಕರುಗಳು ಕೆಪಿಸಿಸಿ ಕೊರೋನ ಪರಿಹಾರ ನಿಧಿಗಾಗಿ ದೇಣಿಗೆ ನೀಡಿರುವ ಹಣದಿಂದ ಕೆಎಸ್ಆರ್ ಟಿಸಿ ಸಂಸ್ಥೆಗೆ ನೀಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com