40 ಸಾವಿರ ಬಿಡಿಎ ನಿವೇಶನಗಳ ಸಕ್ರಮಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವ ಹಣವೆಷ್ಟು ಗೊತ್ತೆ?

ರಾಜ್ಯದ ಬೊಕ್ಕಸ ತುಂಬಿಸುವ ಸಲುವಾಗಿ ಸುಮಾರು 40 ಸಾವಿರ ಬಿಡಿಎ ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಎದುರು ನೋಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಬೊಕ್ಕಸ ತುಂಬಿಸುವ ಸಲುವಾಗಿ ಸುಮಾರು 40 ಸಾವಿರ ಬಿಡಿಎ ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಎದುರು ನೋಡುತ್ತಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ  ಬಿಡಿಎ ಕಾಯ್ದೆಯ ಪ್ರಕಾರ ಕಾನೂನು ಬದ್ದವಾಗಿ ಸಕ್ರಮಗೊಳಿಸುವ ಸಲುವಾಗಿ ,ಸಭೆಯಲ್ಲಿ  ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

12 ವರ್ಷಗಳಿಗಿಂತ ಹೆಚ್ಚಿನ ಕಾಲ ಬಿಡಿಎ ನಿವೇಶನದಲ್ಲಿ ವಾಸಿಸುತ್ತಿರುವ  ಜನರಿಗೆ 40 ರಿಂದ 50 ಸಾವಿರ ರು ನಿಗದಿ ಪಡಿಸಿ ಸಕ್ರಮ ಗೊಳಿಸಲು ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ.

20*30 ಅಥವಾ 30*40 ಅಳತೆಯ ನಿವೇಶನಗಳ ಸಕ್ರಮಕ್ಕೆ 40 ರಿಂದ 50 ಸಾವಿರ ನಿಗದಿ ಪಡಿಸಿ ಅನಧಿಕೃತವಾಗಿ ಆಕ್ರಮಿಸಿಕೊಂಡಿರುವ ನಿವೇಶನಗಳನ್ನು  ಸಕ್ರಮ ಗೊಳಿಸಲಾಗುತ್ತದೆ. ಸಭೆಯಲ್ಲಿ ಈ ಸಂಬಂದ ಅಧಿಕಾರಿಗಳು ಸಿಎಂ ಮಾಹಿತಿ ನೀಡಿದ್ದಾರೆ.

ಅತಿಕ್ರಮವಾಗಿರುವ ನಿವೇಶನಗಳಿಗೆ ದಂಡ ವಿಧಿಸಿ ನಿಯಮಬದ್ಧಗೊಳಿಸಿದರೇ ಅಪಾರ ಪ್ರಮಾಣದ ಹಣ ಸಂಗ್ರಹವಾಗಲಿದೆ ಎಂದು ಆಯುಕ್ತ ಸಿಎಂಗೆ ತಿಳಿಸಿದ್ದಾರೆ, ಸುಮಾರು 75 ಸಾವಿರ ಕೋಟಿ ರು ಹಣ ಹರಿದು ಬರಲಿದೆ ಎಂದು ತಿಳಿಸಿದ್ದಾರೆ.

ಆದರೆ ಈ ನಿಯಮವನ್ನು ಜಾರಿಗೆ ತರಲು ಸುಪ್ರಿಂಕೋರ್ಟ್ ನ ಕಾನೂನು ಅಡ್ಡಿಯಿದೆ, ಅದನ್ನು ನಿವಾರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com