ಮೈಸೂರು ಕೊರೋನಾ ಮುಕ್ತ: ಉಸ್ತುವಾರಿ ಸಚಿವರಿಂದ ನಾಡದೇವಿ ಚಾಮುಂಡೇಶ್ವರಿ ದರ್ಶನ

ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ಸಲ್ಲಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲೆಯ ಹಾಗೂ ರಾಜ್ಯದ ಜನತೆಯನ್ನು ಕಾಪಾಡು ಎಂದು ಕೋರಿಕೊಂಡರು.
ಚಾಮುಂಡೇಶ್ವರಿ ದೇವಿಗೆ ಸೋಮಶೇಖರ್ ಪೂಜೆ
ಚಾಮುಂಡೇಶ್ವರಿ ದೇವಿಗೆ ಸೋಮಶೇಖರ್ ಪೂಜೆ

ಮೈಸೂರು: ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ಸಲ್ಲಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲೆಯ ಹಾಗೂ ರಾಜ್ಯದ ಜನತೆಯನ್ನು ಕಾಪಾಡು ಎಂದು ಕೋರಿಕೊಂಡರು.

ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಇಡೀ ಜಗತ್ತಿಗೆ ಮಾದರಿಯಾಗಿದೆ. ಮೈಸೂರಿನ ಎಲ್ಲಾ 90 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ, ಮೈಸೂರು ಇದೀಗ 'ಕೊರೊನಾ ಫ್ರೀ' ಆಗಿದೆ. 

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಾಗ ಮೈಸೂರಿಗೆ ಆಗಮಿಸಿ, ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರನ್ನು ಕೊರೊನಾ ಸಂಕಷ್ಟದಿಂದ ಪಾರು ಮಾಡುವಂತೆ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದರು.

ಇದೀಗ ಮೈಸೂರು ಕೊರೊನಾ ಮುಕ್ತವಾದ ಹಿನ್ನಲೆಯಲ್ಲಿ ಇವತ್ತು ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಎಸ್.ಟಿ.ಸೋಮಶೇಖರ್ ದೇವಿಗೆ ನಮನ ಸಲ್ಲಿಸಿದರು. ಆದಷ್ಟು ಬೇಗ ರಾಜ್ಯ, ದೇಶ ಮತ್ತು ವಿಶ್ವದ ಸಂಕಷ್ಟವನ್ನು ನಿವಾರಿಸುವಂತೆ ಸಚಿವ ಎಸ್.ಟಿ.ಸೋಮಶೇಖರ್ ಇಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು. 

ಮೈಸೂರಿನಂತೆ ರಾಜ್ಯವನ್ನೂ ಕೊರೊನಾ ಮುಕ್ತ ಮಾಡುವಂತೆ ಬೇಡಿಕೊಂಡರು. ಲಾಕ್ ಡೌನ್ ಇರುವ ಕಾರಣ ಎಲ್ಲರೂ, ದೇವಸ್ಥಾನದ ಹೊರಗೆ ನಿಂತು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ''90ಕ್ಕೆ 90 ಪ್ರಕರಣವನ್ನ ಮೈಸೂರು ಗೆದ್ದಿದೆ. ಜನ ಸದ್ಯ ನಿರಾಳ ಆಗಿದ್ದಾರೆ. ಲಾಕ್‌ ಡೌನ್ ನಿಯಮದಿಂದ ನಾವೂ ಕೂಡ ದೇವಾಲಯದ ಹೊರಗೆ ದರ್ಶನ
ಮಾಡಬೇಕಾಗಿದೆ. ಜನಪ್ರತಿನಿಧಿಗಳಾದ ನಾವು ಆದೇಶಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com