ಕೊರಾನಾ ಲಾಕ್ ಡೌನ್ ಸಮಯದಲ್ಲಿ ಸರಳ ವಿವಾಹವಾದ ರೈತ ಮುಖಂಡ!

ಗುಂಡ್ಲುಪೇಟೆಯ  ರೈತ ಮುಖಂಡ ಕಡಬೂರು ಮಂಜುನಾಥ ಎನ್ನುವವರು ಕೊರೋನಾ ಸಂಕಷ್ಟದ ವೇಳೆ ಸರಳ ವಿವಾಹವಾಗಿರುವುದು ಮಾತ್ರವಲ್ಲದೆ ವಿವಾಹದ ಹೆಚ್ಚುವರಿ ಖರ್ಚಿನ ಹಣವನ್ನು ಮುಖ್ಯಮಂತ್ರಿ ಗಳ ಕೊರಾನಾ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗುಂಡ್ಲುಪೇಟೆ: ಗುಂಡ್ಲುಪೇಟೆಯ  ರೈತ ಮುಖಂಡ ಕಡಬೂರು ಮಂಜುನಾಥ ಎನ್ನುವವರು ಕೊರೋನಾ ಸಂಕಷ್ಟದ ವೇಳೆ ಸರಳ ವಿವಾಹವಾಗಿರುವುದು ಮಾತ್ರವಲ್ಲದೆ ವಿವಾಹದ ಹೆಚ್ಚುವರಿ ಖರ್ಚಿನ ಹಣವನ್ನು ಮುಖ್ಯಮಂತ್ರಿ ಗಳ ಕೊರಾನಾ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೊರಾನಾ ಲಾಕ್ ಡೌನ್ ಸಮಯದಲ್ಲಿ ಸರಳ ವಿವಾಹವಾದ ರೈತ ಮುಖಂಡ ಮಂಜುನಾಥ ಕೊರಾನಾ ಪರಿಹಾರ ನಿಧಿಗೆ ಒಂದು ಲಕ್ಷ ರು. ನಿಡಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಈ ವಿಶೇಷ ವಿವಾಹ ಸಮಾರಂಭ ನಡೆದಿದೆ.

ರೈತ ಮುಖಂಡ ಕಡಬೂರು ಮಂಜುನಾಥ ಹಾಗೂ ಇದೇ ಗ್ರಾಮದ ಮಾದಲಾಂಬಿಕೆ ದಾಂಪತ್ಯ ಜೀವನಕ್ಕೆ ಕಾಲಿಟ್ತರು. ಬೆರಳೇಣಿಕೆಯಷ್ಟು ಮಂದಿಯ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ವಿವಾಹ ನೆರವೇರಿತು.

ಮಂಜುನಾಥ ಅವರು ತಹಸೀಲ್ದಾರ್ ಎಂ ನಂಜುಂಡಯ್ಯ ರವರ ಮೂಲಕ ಸಿಎಂ ರಿಲೀಫ್ ಫಂಡ್ ಗೆ ಚಕ್ ಹಸ್ತಾಂತರ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com