ಸತತ ಮಳೆ, ಲಾಕ್ ಡೌನ್ ನಿಂದಾಗಿ ಸ್ವಚ್ಛವಾದ ಕಾವೇರಿ ನದಿ

ಅನಿರೀಕ್ಷಿತ ಪೂರ್ವ ಮುಂಗಾರು ಮಳೆ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾವೇರಿ ನದಿ ಗುಣಮಟ್ಟ ಮತ್ತು ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 
ಕಾವೇರಿ ನದಿ
ಕಾವೇರಿ ನದಿ

ಬೆಂಗಳೂರು: ಅನಿರೀಕ್ಷಿತ ಪೂರ್ವ ಮುಂಗಾರು ಮಳೆ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾವೇರಿ ನದಿ ಗುಣಮಟ್ಟ ಮತ್ತು ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಗೆ ಹಾರಂಗಿ, ಹೇಮಾವತಿ, ಭಾರವಿ ಮತ್ತು ಲಕ್ಷ್ಮಣ ತೀರ್ಥ ಸೇರಿದಂತೆ ಹಲವು ಉಪನದಿಗಳಿವೆ, ಬಂಗಾಳ ಕೊಲ್ಲಿ ಸೇರುವ ಮುನ್ನ ಕಾವೇರಿ ಮೂರು ರಾಜ್ಯಗಳಲ್ಲಿ ಹರಿಯಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಮಳೆಗಾಲದ ಪೂರ್ವದಲ್ಲಿ (ಮಾರ್ಚ್ 1 ರಿಂದ) ಸಾಮಾನ್ಯ ಸರಾಸರಿ ಮಳೆ 76 ಮಿ.ಮೀ ಆಗಿರಬೇಕು, ಆದರೆ ಈ ಭಾರಿ ಸರಾಸರಿಗಿಂತ ಅಂದರೆ 83 ಮಿಮಿ, ಶೇ. 8ರಷ್ಟು ಹೆಚ್ಚು ಮಳೆಯಾಗಿದೆ.ವಿಶೇಷವಾಗಿ ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ ಎಂದು ರಾಜ್ಯ ವಿಪತ್ತು
ನಿರ್ವಹಣಾ ಕೇಂದ್ರ ತಿಳಿಸಿದೆ.

ಮಳೆಯಿಂದಾಗಿ ನೀರು ಸ್ವಚ್ಛವಾಗಿದ್ದು, ಕಾವೇರಿ ನದಿ ಮತ್ತು ಜಲಾನಯನ ಪ್ರದೇಶ ಸ್ವಚ್ಛಗೊಂಡಿದೆ ಎಂದು ಭೂಗರ್ಭ ಶಾಸ್ತ್ರಜ್ಞ ಟಿವಿ ರಾಮಚಂದ್ರ ಹೇಳಿದ್ದಾರೆ. ಜೊತೆಗೆ ಲಾಕ್ ಡೌನ್ ಕೂಡ ನದಿ ಮತ್ತಷ್ಟು ಸ್ವಚ್ಛಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com