ನಾಗಮಂಗಲ: ಕೊರೊನಾ ಕ್ವಾರಂಟೈನ್ನಲ್ಲಿದ್ದ ಮಹಿಳೆ ಸಾವು

ನಾಗಮAಗಲ ತಾಲ್ಲೂಕಿನ ಸೋಮನಾಳಮ್ಮ ದೇವಾಲಯದ ಬಳಿಯ ವಸತಿ ಶಾಲೆಯ  ಕ್ವಾರಂಟೈನ್ನಲ್ಲಿದ್ದ ಮಹಿಳೆಯೊಬ್ಬರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ:ನಾಗಮAಗಲ ತಾಲ್ಲೂಕಿನ ಸೋಮನಾಳಮ್ಮ ದೇವಾಲಯದ ಬಳಿಯ ವಸತಿ ಶಾಲೆಯ  ಕ್ವಾರಂಟೈನ್ನಲ್ಲಿದ್ದ ಮಹಿಳೆಯೊಬ್ಬರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೂಲತಃ ನಾಗಮಂಗಲ ತಾಲ್ಲೂಕು ಹೊಣಕೆರೆ ಹೋಬಳಿ ಜುಟ್ಟನಹಳ್ಳಿ ಗ್ರಾಮದ 60 ವರ್ಷದ ಮಹಿಳೆಯೇ ಮೃತಪಟ್ಟಿದ್ದಾರೆ.

ಹಲವು ವರ್ಷಗಳಿಂದ ಪತಿ ಮತ್ತು ಮಕ್ಕಳೊಂದಿಗೆ ಬಾಂಬೆಯಲ್ಲಿ ವಾಸವಿದ್ದ ಈಕೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಪತಿ ಜೊತೆ ಇದೇ ಮೇ.17ರಂದು ಕೆ.ಆರ್.ಪೇಟೆಯ ಆನಗೊಳ ಚೆಕ್ ಪೋಸ್ಟ್ಗೆ ಆಗಮಿಸಿದ್ದರು.ಅಂದೇ ಈಕೆಯೂ ಸೇರಿದಂತೆ ಪತಿ,ಜೊತೆಯಲ್ಲಿಯೇ ಬಂದಿದ್ದ ಮತ್ತೊಬ್ಬ ವ್ಯಕ್ತಿಯೂ ಸೇರಿದಂತೆ ಮೂವರನ್ನು ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಸೋಮನಳ್ಳಮ್ಮ ದೇವಾಲಯದ ಬಳಿಯ ವಸತಿ ಶಾಲೆಯ  ಕ್ವಾರಂಟೈನ್ನಲ್ಲಿರಿಸಲಾಗಿತ್ತು.

ಇಂದು ಮಧ್ಯಾಹ್ನವಷ್ಟೇ ಈಕೆಯೂ ಸೇರಿದಂತೆ ಜೊತೆಯಲ್ಲಿದ್ದವರಿಗೆಲ್ಲಾ ಕೊರೊನಾ ಟೆಸ್ಟ್ಗೆ ಗಂಟಲು ದ್ರವವನ್ನು ತೆಗೆಯಲಾಗಿತ್ತು,ಆದರೆ ಸಂಜೆ ಶೌಚಾಲಯಕ್ಕೆ ಹೋಗಿ ಬಂದ ವೇಳೆ ಇದ್ದಕ್ಕಿದಂತೆ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ.ಈಕೆಗೆ ಆಗಾಗ ಹೃದಯ ಸಂಬAಧಿ ಕಾಯಿಲೆಯಿತ್ತೆಂದು ಆಕೆಯ ಪತಿಯೇ ತಿಳಿಸಿದ್ದಾರೆ, ಹೀಗಾಗಿ ಈಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ,ಆದರೂ ಈಕೆಯ ಕೊರೊನಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವೆAಕಟೇಶ್ ಮತ್ತು ಜಿಲ್ಲಾಆರೋಗ್ಯಾಧಿಕಾರಿ ಡಾ..ಕೆ.ಮಂಚೇಗೌಡ ಪತ್ರಿಕೆಗೆ ತಿಳಿಸಿದ್ದಾರೆ.

ಈಕೆಗೆ ಕೊರೊನಾ ಇದೆಯೋ ಇಲ್ಲವೋ ಅನ್ನೋದು ಇನ್ನೋ ಗೊತ್ತಾಗಿಲ್ಲ,ಆದರೂ ಈಕೆ ಕ್ವಾರಂಟೈನ್ನಲ್ಲಿದ್ದಾಗಲೇ ಸಾವನ್ನಪ್ಪಿರುವುದರಿಂದ ಕೋವಿಡ್-19 ನಿಯಮಾನುಸಾರವೇ ಬುಧವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿ ತಿಳಿಯುತ್ತಿದ್ದಂತೆಯೇ ತಾಲ್ಲೂಕು ಆರೋಗ್ಯಾಧಿಕಾರಿ ಧನಂಜಯ ನೇತೃತ್ವದ ತಾಲ್ಲೂಕು ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕ್ವಾರಂಟೈನ್ನಲ್ಲಿದ್ದ ಈ ಮಹಿಳೆ ಮೃತಪಟ್ಟಿರುವುದರಿಂದ ಸ್ಥಳೀಯರಲ್ಲಿ ಸಹಜವಾಗಿಯೇ ಆತಂಕ ಎದುರಾಗಿದೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com