ಬೆಂಕಿ ಅನಾಹುತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಶಾಲೆಯಿಂದ ನೆರವು

ತಿಂಗಳ ಹಿಂದೆ ಲಿಂಗರಾಜಪುರದ ಕೊಳೆಗೇರಿಯೊಂದರಲ್ಲಿ ನಡೆದಿದ್ದ ಬೆಂಕಿ ಅನಾಹುತದಲ್ಲಿ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು. ಇದರಲ್ಲಿ ಓರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತನ್ನ ಬೋರ್ಡ್ ಪರೀಕ್ಷೆಗಳಿಗೆ ಬೇಕಾದ ಎಲ್ಲಾ ಪುಸ್ತಕಗಳು ಮತ್ತು  ನೋಟ್ಸ್ ಗಳನ್ನು  ಕಳೆದುಕೊಂಡಿದ್ದ. ಆದರೆ ಇದೀಗ ಆ ವಿದ್ಯಾರ್ಥಿಗೆ  ಪರೀಕ್ಷೆಗೆ ಸಿದ್ಧವಾಗಲು ತನ್ನ ಶಾಲೆಯಲ್ಲಿ ವಸತಿ, ಆಹಾರ ಮ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ತಿಂಗಳ ಹಿಂದೆ ಲಿಂಗರಾಜಪುರದ ಕೊಳೆಗೇರಿಯೊಂದರಲ್ಲಿ ನಡೆದಿದ್ದ ಬೆಂಕಿ ಅನಾಹುತದಲ್ಲಿ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು. ಇದರಲ್ಲಿ ಓರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತನ್ನ ಬೋರ್ಡ್ ಪರೀಕ್ಷೆಗಳಿಗೆ ಬೇಕಾದ ಎಲ್ಲಾ ಪುಸ್ತಕಗಳು ಮತ್ತು  ನೋಟ್ಸ್ ಗಳನ್ನು  ಕಳೆದುಕೊಂಡಿದ್ದ. ಆದರೆ ಇದೀಗ ಆ ವಿದ್ಯಾರ್ಥಿಗೆ  ಪರೀಕ್ಷೆಗೆ ಸಿದ್ಧವಾಗಲು ತನ್ನ ಶಾಲೆಯಲ್ಲಿ ವಸತಿ, ಆಹಾರ ಮತ್ತು ಪುಸ್ತಕಗಳನ್ನು ಒದಗಿಸಲಾಗಿದೆ.

"ಆತ ಅತ್ಯಂತ ಬುದ್ದಿವಂತ ವಿದ್ಯಾರ್ಥಿ. ಅವನು ಅಧ್ಯಯನ ಮಾಡುವ ಜ್ಯೋತಿ ಪ್ರೌಢಶಾಲೆ ಆಡಳಿತಾಧಿಕಾರಿ ಅವನನ್ನು ಕರೆದೊಯ್ದು ಅಗತ್ಯ ಆಹಾರ, ವಸತಿ ಮತ್ತು ಪುಸ್ತಕಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗೆ ಆತನ  ಪರೀಕ್ಷೆಯನ್ನು ಬರೆಯಲು ಸಹ ಅಲ್ಲಿಯೇ ಅವಕಾಶವಿರಲಿದೆ. ”ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ. 

ಇದೇ ವೇಳೆ ಇನ್ನೋರ್ವ ಪಿಯು ವಿದ್ಯಾರ್ಥಿ ತನ್ನ ಬೋರ್ಡ್ ಪರೀಕ್ಷೆಗೆ ತನ್ನ ತವರೂರಾದ ರಾಯಚೂರಿನಿಂದಲೇ ಉತ್ತರ ಬರೆಯಲಿದ್ದಾನೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಲಿಂಗರಾಜಪುರ ಕೊಳೆಗೇರಿಯಲ್ಲಿ ವಾಸಿಸುವ ಮಕ್ಕಳ ಹಕ್ಕುಗಳ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳನ್ನು ಸಂಪರ್ಕಿಸಿದೆ. ಬೆಂಕಿಯಿಂದ ಮನೆಗಳನ್ನು ಕಳೆದುಕೊಂಡ ಸುಮಾರು ಒಂದು ತಿಂಗಳ ನಂತರ, 18 ವರ್ಷ ವಯಸ್ಸಿನ ಮಕ್ಕಳಿಗೆ ಹಣಕಾಸಿನ ನೆರವು ಪಡೆಯುವ ಭರವಸೆ ಇದೆ.

ಕೆಎಸ್ಸಿಪಿಸಿಆರ್ ಈಗ ರಾಜ್ಯದಿಂದ, ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಮಾಸಿಕ ಪ್ರಾಯೋಜಕರಿಗಾಗಿ ಹುಡುಕುತ್ತಿದೆ.  18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 50 ವಿದ್ಯಾರ್ಥಿಗಳಿದ್ದು, ಅದರ ಆರೈಕೆಗೆ  ಮಾಸಿಕ 1,000 ರೂ ಪ್ರಾಯೋಜಕತ್ವವನ್ನು ನೀಡುವ ನಿಬಂಧನೆಯಲ್ಲಿ ಅವರನ್ನು ಸೇರಿಸಲಾಗುವುದು.

ಪರೀಕ್ಷಾ ಕೇಂದ್ರದಲ್ಲಿ ಬದಲಾವಣೆ

ಪರೀಕ್ಷಾ ಕೇಂದ್ರದ ಬದಲಾವಣೆಗೆ ಅರ್ಜಿ ಸಲ್ಲಿಸುವ ದಿನಾಂಕಗಳು ಮುಕ್ತಾಯಗೊಳ್ಳುತ್ತಿದ್ದು ಸರಿಸುಮಾರು 15,000 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಬದಲಾವಣೆಯನ್ನು ಬಯಸಿದ್ದಾರೆಂದು ಪದವಿ ಪೂರ್ವ ಶಿಕ್ಷಣ ನಿರ್ದೇಶಕ ಎಂ.ಕನಗವಲ್ಲಿ ಪತ್ರಿಕೆಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com