ತುಮಕೂರು ಲ್ಯಾಬ್
ತುಮಕೂರು ಲ್ಯಾಬ್

ಕೊರೋನಾ ವಿರುದ್ಧ ಹೋರಾಡಲು ತುಮಕೂರು ಲ್ಯಾಬ್ ಗಳು ಸರ್ವಸನ್ನದ್ದ

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ನೂತನ ಆರ್‌ಟಿಪಿಸಿಆರ್ ಲ್ಯಾಬ್ ಅನ್ನು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟನೆ ಮಾಡಿದರು.

ತುಮಕೂರು: ಕೊರೋನಾ ವಿರುದ್ಧ ಹೋರಾಡಲು ರಾಜ್ಯದ 35  ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಅದರಲ್ಲಿ ತುಮಕೂರು ಸಹ ಒಂದಾಗಿದೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ನೂತನ ಆರ್‌ಟಿಪಿಸಿಆರ್ ಲ್ಯಾಬ್ ಅನ್ನು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟನೆ ಮಾಡಿದರು.

ಪ್ರತಿದಿನ 280 ಟೆಸ್ಟ್‌ಗಳನ್ನು ಮಾಡುವ ಸೌಲಭ್ಯವಿದ್ದು, ಸದ್ಯಕ್ಕೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುವುದು. ಈ ಪ್ರಯೋಗಾಲಯದಲ್ಲಿ ಚಿಕನ್‌ಗುನ್ಯ, ಹೆಚ್1.ಎನ್1, ಡೆಂಗ್ಯೂ ಟೆಸ್ಟ್‌ಗಳು ಸೇರಿದಂತೆ ವೈರಸ್‌ಗೆ ಸಂಬಂಧಿಸಿದ ರೋಗಗಳನ್ನು ಪರೀಕ್ಷೆ ನಡೆಸಲಾಗುವುದು. 

ಈ ಹಿಂದೆ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಬೆಂಗಳೂರು, ಹಾಸನಕ್ಕೆ ಮಾದರಿಗಳನ್ನು ಕಳುಹಿಸಬೇಕಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಆರಂಭಿಸುವುದರಿಂದ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದರು.

ಸುಮಾರು 64 ಲಕ್ಷ ರುಪಾಯಿ ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ, ಆರು ಗಂಟೆಗಳಲ್ಲಿ ಸುಮಾರು 96 ಮಾದರಿಗಳ ಪರೀಕ್ಷೆ ನಡೆಸಿ ಫಲಿತಾಂಶ ಪಡೆಯಬಹುದಾಗಿದೆ, ಇದಕ್ಕಾಗಿ ಅಲ್ಲಿನ ತಂತ್ರಜ್ಞರಿಗೆ ತರಬೇತಿ ಕೊಡಿಸಲಾಗಿದೆ ಎಂದು ವೀರಭದ್ರಯ್ಯ ಹೇಳಿದ್ದಾರೆ. ಪರೀಕ್ಷೆ ಫಲಿತಾಂಶ ಶೀಘ್ರವಾಗಿ ಬರುವುದರಿಂದ ಕ್ವಾರಂಟೈನ್ ನಲ್ಲಿರುವವರನ್ನು ಡಿಸ್ಚಾರ್ಜ್ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com