
ಹಾವೇರಿ: ಸುಮಾರು 6.75 ಎಚ್.ಪಿ ವಿದ್ಯುತ್ ಕಳ್ಳತನ ಮಾಡಿದ್ದ ಆರೋಪಿಗೆ ಹೆಸ್ಕಾಂ ಜಾಗೃತದಳ1.36 ಲಕ್ಷ ರೂಪಾಯಿ . ದಂಡ ವಿಧಿಸಿದೆ.ಹೆಸ್ಕಾಂ ಜಾಗೃತದಳ ರಾಣೇಬೆನ್ನೂರು ತಾಲೂಕಿನ ಕಮದೋಡ ಗ್ರಾಮದ ಮಧುಸೂದನ್ ರಾಮಗೋಪಾಲ ಮಾಲು ಅವರ ಸ್ವಸ್ತಿಕ್ ಸಿಮೆಂಟ್ ಘಟಕದ ಮೇಲೆ ಬುಧವಾರ ದಾಳಿಮಾಡಿದೆ.
ಈ ವೇಳೆ ಸುಮಾರು 6.75 ಎಚ್.ಪಿ.ವಿದ್ಯುತ್ ಕಳ್ಳತನ ಮಾಡಿದ್ದ ಆರೋಪಿಗೆ ರೂ.1.36 ಲಕ್ಷ ರೂ. ದಂಡ ವಿಧಿಸಿವಿದ್ಯುತ್ ಕಳ್ಳತನದ ಕುರಿತು ಹಾವೇರಿ ಹೆಸ್ಕಾಂ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಹುಬ್ಬಳ್ಳಿ ಹೆಸ್ಕಾಂನ ಎಸ್ ಪಿ ರವೀಂದ್ರ ಗಡಾದಿ ಹಾಗೂ ಡಿವೈಎಸ್ ಪಿ ವಿಜಯ ಕುಮಾರ ತಳವಾರ ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳಾದ ಬಿ.ನಾಗರಾಜ, ಲಿಂಗನಗೌಡ ನೆಗಳೂರ, ಕೆ.ಪ್ರಸನ್ನಕುಮಾರ,ವಿ.ಎನ್ ಕುರುವತ್ತಿ ದಾಳಿಯಲ್ಲಿ ಭಾಗಿಯಾಗಿದ್ದರು
Advertisement