ರವಿ ಬೆಳಗೆರೆ
ರಾಜ್ಯ
ಸಾವಿಗೂ ಮುನ್ನ ರವಿ ಬೆಳಗೆರೆ ಬರೆದ ಕೊನೇ ಸಾಲುಗಳಿವು!
ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿನ್ನೆ(ಗುರುವಾರ) ತಡರಾತ್ರಿ ನಿಧನವಾಗಿದ್ದಾರೆ. ಇವರು ಕಟ್ಟಿ ಬೆಳೆಸಿದ "ಹಾಯ್ ಬೆಂಗಳೂರು" ಹಾಗೂ "ಓ ಮನಸೆ" ಪತ್ರಿಕೆಗಳು ಲಕ್ಷಾಂತರ ಓದುಗರನ್ನು ಸೃಷ್ಟಿಸಿದೆ.
ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿನ್ನೆ(ಗುರುವಾರ) ತಡರಾತ್ರಿ ನಿಧನವಾಗಿದ್ದಾರೆ. ಇವರು ಕಟ್ಟಿ ಬೆಳೆಸಿದ "ಹಾಯ್ ಬೆಂಗಳೂರು" ಹಾಗೂ "ಓ ಮನಸೆ" ಪತ್ರಿಕೆಗಳು ಲಕ್ಷಾಂತರ ಓದುಗರನ್ನು ಸೃಷ್ಟಿಸಿದೆ.
ಹಲವು ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದ ರವಿ ಬೆಳಗೆರೆ ಅವರ "ಹಾಯ್ ಬೆಂಗಳೂರು" ಪತ್ರಿಕೆಯ "ಖಾಸ್ ಬಾತ್" ಅಂಕಣಕ್ಕಾಗಿನ ಅವರ ಕಡೆಯ ಸಾಲುಗಳು ಹೀಗಿದ್ದವು-
"ಮನಸ್ಸನ್ನು 40 ದಾಟದಂತೆ ನೋಡಿಕೊಳ್ಳುವುದರಲ್ಲಿ ಸುಖವಿದೆ. ಬರವಣಿಗೆ ಎಂಥಾವರನ್ನೂ ಒಳ್ಳೆಯವರನ್ನಾಗಿ ಮಾಡುತ್ತದಾ? ಕನಸು ಏಕಾಂತದಲ್ಲಿ ಹುಟ್ಟಬೇಕು, ಜನಜಂಗುಳಿಯಲ್ಲಿ ಬೆಳೆಯಬೇಕು."
ಬೆಳಗೆರೆ ಅವರ ಬರವಣಿಗೆಯನ್ನೇ ಸ್ಪೂರ್ತಿಯಾಗಿರಿಸಿಕೊಂಡಿದ್ದ ಅವರ ಲಕ್ಷಾಂತರ ಅಭಿಮಾನಿಗಳಿಗೆ ಅವರ ನಿಧನ ಅಪಾರ ಶೋಕಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ