ರಾಜ್ಯಾದ್ಯಂತ ಪದವಿ ಕಾಲೇಜುಗಳ ಪುನಾರಂಭ: ಮೊದಲ ದಿನ ಹಾಜರಾತಿಗೆ ವಿದ್ಯಾರ್ಥಿಗಳ ನಿರುತ್ಸಾಹ

ಎಂಟು ತಿಂಗಳ ನಂತರ, ಇಂದಿನಿಂದ ರಾಜ್ಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಕಾಲೇಜುಗಳು ಪ್ರಾರಂಭವಾಗಿದೆ. ಮಂಗಳವಾರ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಬಾಗಿಲು ತೆರೆದಿದೆ. ಆದರೆ ಮೊದಲ ದಿನ ಕಾಲೇಜಿಗೆ ಬರಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉತ್ಸಾಹ ತೋರಿಸಿಲ್ಲ.
ರಾಜ್ಯಾದ್ಯಂತ ಪದವಿ ಕಾಲೇಜುಗಳ ಪುನಾರಂಭ: ಮೊದಲ ದಿನ ಹಾಜರಾತಿಗೆ ವಿದ್ಯಾರ್ಥಿಗಳ ನಿರುತ್ಸಾಹ
Updated on

ಬೆಂಗಳೂರು: ಎಂಟು ತಿಂಗಳ ನಂತರ, ಇಂದಿನಿಂದ ರಾಜ್ಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಕಾಲೇಜುಗಳು ಪ್ರಾರಂಭವಾಗಿದೆ. ಮಂಗಳವಾರ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಬಾಗಿಲು ತೆರೆದಿದೆ. ಆದರೆ ಮೊದಲ ದಿನ ಕಾಲೇಜಿಗೆ ಬರಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉತ್ಸಾಹ ತೋರಿಸಿಲ್ಲ.

ಕಡಿಮೆ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನ್ ಗೆ ಒಳಪಡಿಸಿ ಬಳಿಕ ಹ್ಯಾಂಡ್ ಸ್ಯಾನಿಟ್ರೈಸರ್ ಕೊಟ್ಟ ನಂತರ ತರಗತಿಗಳಿಗೆ ಪ್ರವೇಶಿಸಲು ಅನುಮತಿಸಲಾಗಿದೆ.

ಆದರೆ ನಿರೀಕ್ಷಿಸಿದಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಆಗಮಿಸಿರಲಿಲ್ಲ. ಬೆಂಗಳೂರು ನಗರದಾದ್ಯಂತ ಕಾಲೇಜುಗಳ ಬಳಿ 450 ಸ್ವ್ಯಾಬ್ ಸಂಗ್ರಹ ಕೇಂದ್ರಗಳಿಗೆ ವ್ಯವಸ್ಥೆ ಮಾಡಿರುವ ಬಿಬಿಎಂಪಿ, ಮೊದಲ ದಿನದ ದಾಖಲಾತಿಗಳು 30 ಪ್ರತಿಶತವನ್ನು ಮೀರುವುದಿಲ್ಲ ಎಂದು ಅಂದಾಜಿಸಿದೆ.

ಕೋವಿಡ್ ಗಾಗಿ ಕಡ್ಡಾಯ ಪರೀಕ್ಷಾ ವರದಿಯ ಬಗ್ಗೆ ಇತ್ತೀಚಿನ ಸೂಚನೆ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕೋವಿಡ್ ಋಣಾತ್ಮಕ ಪ್ರಮಾಣಪತ್ರಗಳನ್ನು ಹೊಂದಿರದ ಹಲವಾರು ಜನರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳುವುದು ಕಂಡುಬಂದಿದೆ.

ಅಂತೆಯೇ ಕೋವಿಡ್ ಋಣಾತ್ಮಕ ವರದಿಗಳಿಲ್ಲದ ಸ್ವಾಮಿ ವಿವೇಕಾನಂದ ಕಾಲೇಜಿಗೆ ಆಗಮಿಸಿದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಟ್ಟೂ 450 ಅಂತಿಮ ವರ್ಷದ ವಿದ್ಯಾರ್ಥಿಗಳ ಪೈಕಿ ಕೇವಲ 15 ಪ್ರತಿಶತದಷ್ಟು ವಿದ್ಯಾರ್ಥಿಗಳಷ್ಟೇ ಹಾಜರಾಗಿದ್ದಾರೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ಭಾಸ್ಕರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ತರಗತಿಗಳನ್ನು ನಡೆಸುವಾಗ ಕಾಲೇಜುಗಳಲ್ಲಿ ಉಪನ್ಯಾಸಕರು ಮಾಸ್ಕ್ ಧರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ಮುಂದುವರೆದಿದ್ದರೂ, ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕರು ಮಾಸ್ಕ್ ಧರಿಸಿರುವುದು ಕಂಡುಬಂತು. ಆದಾಗ್ಯೂ, ಮಂಗಳವಾರ ದೊಡ್ಡ ಪ್ರಮಾಣದಲ್ಲಿ ಯಾವ ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳೂ ಆಗಮಿಸಿಲ್ಲ.

 "ಹೆಚ್ಚಿನ ತರಗತಿಗಳು ಆನ್‌ಲೈನ್‌ನಲ್ಲಿ ಮುಗಿದಿದೆ, ಅಗತ್ಯವಿದ್ದರೆ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಿಗಾಗಿ ಕ್ಯಾಂಪಸ್‌ಗೆ ಬರುತ್ತಾರೆ. ಅವರಿಗೆ ಅತಿಥಿಗೃಹ ಮತ್ತು ವಸತಿ ನಿಲಯಗಳಲ್ಲಿಯೂ ಸಹ ವಸತಿ ಕಲ್ಪಿಸಲಾಗುವುದು" ಎಂದು ಕ್ರೈಸ್ತ್ ಇನ್ಸ್ಟಿಟ್ಯೂಟ್ ನ ರಿಜಿಸ್ಟ್ರಾರ್ ಅನಿಲ್ ಪಿಂಟೊ ಹೇಳಿದರು ಈ ಸಂಸ್ಥೆ ಈಗಾಗಲೇ ತನ್ನ ಆನ್‌ಲೈನ್ ಪರೀಕ್ಷೆಗಳನ್ನು ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2 ರಂದು ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 12 ರಂದು ನಿಗದಿಪಡಿಸಿದೆ. ಮುಂದಿನ ಸೆಮಿಸ್ಟರ್‌ಗೆ ಜನವರಿಯಲ್ಲಿ ಪ್ರಾಯೋಗಿಕ ತರಗತಿಗಳನ್ನು ತೆರೆಯಲು ಸಂಸ್ಥೆ ಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com