ರಾಮ ನವಮಿಯಂದು ಶ್ರೀರಾಮನ ವಿಗ್ರಹದ ಮೇಲೆ ಸೂರ್ಯ ಕಿರಣಗಳು ಸ್ಪರ್ಶಿಸುವಂತೆ ಮಂದಿರ ನಿರ್ಮಾಣವಾಗಲಿ: ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮಮಂದಿರದ ರಾಮನ ವಿಗ್ರಹದ ಮೇಲೆ ಶ್ರೀರಾಮ ನವಮಿಯ ದಿನ ಸೂರ್ಯನ ಕಿರಣಗಳು ಬೀಳುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ 
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ಮಂಗಳುರು: ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮಮಂದಿರದ ರಾಮನ ವಿಗ್ರಹದ ಮೇಲೆ ಶ್ರೀರಾಮ ನವಮಿಯ ದಿನ ಸೂರ್ಯನ ಕಿರಣಗಳು ಬೀಳುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ 

ಶ್ರೀರಾಮ ನವಮಿಯಂದು ಭಗವಾನ್ ರಾಮನ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವ ರೀತಿಯಲ್ಲಿ ರಾಮ ಮಂದಿರ ವಿನ್ಯಾಸಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು 15 ಸದಸ್ಯರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಸದಸ್ಯರಾದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಇದರ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದೆ. ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಕ್ತರಿಗೆ 3ಡಿ ಅನುಭವ ನೀಡುವ ಕೆಲಸ ಮಾಡುವಂತೆ ಮೋದಿ ಸಲಹೆ ನೀಡಿದರು. 3ಡಿ  ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವಹಿಸಲಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.

ರಾಮ ಮಂದಿರವನ್ನು ನಿರ್ಮಿಸಲಿರುವ ಜಮೀನಿನ ಸಾಮರ್ಥ್ಯ ಪರೀಕ್ಷೆಯನ್ನು 200 ಅಡಿ ಆಳದವರೆಗೆ ಅಗೆಯುವ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದ ಶ್ರೀಗಳು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದು ಭೂಮಿಯನ್ನು ಹಸನುಗೊಳಿಸುವ ಕೆಲಸವನ್ನು ಗಮನಿಸಿದ್ದಾರೆ.

ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ತೆರವುಗೊಳಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಸಿದ್ಧವಾಗಿರುವ ಕಂಬಗಳನ್ನು ನಿರ್ಮಾಣ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಮಂದಿರದ ಕೆಲಸವನ್ನು ಎಲ್ ಅಂಡ್ ಟಿ ಮತ್ತು ಟಾಟಾ ಕಂಪನಿ ಜಂಟಿಯಾಗಿ ಕೈಗೆತ್ತಿಕೊಂಡಿವೆ. ರಾಮ ಮಂದಿರದ ಕೆಲಸದ ಕುರಿತು ಸಲಹೆಯನ್ನು ಕೋರಲು ವೇದ ಶಿಲ್ಪಿಗಳ ತಂಡವನ್ನು ರಚನೆ ಮಾಡಲಾಗುತ್ತಿದೆ. "ನಾವು ಈ ಭಾಗದ ಕೃಷ್ಣರಾಜ್ ತಂತ್ರಿ ಹಾಗೂ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಅವರ ಹೆಸರನ್ನು ಸೂಚಿಸಿದ್ದೇವೆ."

ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಜನವರಿ 15ಕ್ಕೆ ಚಾಲನೆ

ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಜನವರಿ 15ಕ್ಕೆ ಚಾಲನೆ ಸಿಕ್ಕಲಿದೆ. ಎಂದ ಸ್ವಾಮೀಜಿ . ಹಣವನ್ನು ಸಂಗ್ರಹಿಸಲು ಸ್ವಯಂಸೇವಕರು ಮನೆಗಳಿಗೆ ಭೇಟಿ ನೀಡುತ್ತಾರೆ. ಫಂಡ್ ಡ್ರೈವ್ ಗಾಗಿನ ಸಿದ್ದತೆಗಳು ಪ್ರಾರಂಭವಾಗಿದೆ. . ದೇವಾಲಯದ ಕಂಬಗಳ ಪ್ರದೇಶ್ವನ್ನು ಚ್ಚಿಸಲು ಟ್ರಸ್ಟ್ ನಿರ್ಧರಿಸಿದೆ. ಕೆಲಸ ಪ್ರಾರಂಭವಾದ ನಂತರ ಮಂದಿರದ ಕೆಲಸ ಪೂರ್ಣಗೊಳ್ಳಲು ಮೂರೂವರೆ ವರ್ಷ ತೆಗೆದುಕೊಳ್ಳಬಹುದು ಎಂದರು. "ರಾಮ ಮಂದಿರವು ದೇವಾಲಯದ ನಿರ್ಮಾಣ ಮಾತ್ರವಲ್ಲ, ಭೂಮಿಯ ಸಂಸ್ಕೃತಿಯ ಪುನರುಜ್ಜೀವನವೂ ಆಗಿದೆ" ಎಂದು ಅವರು ಒತ್ತಿಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com