ಕಾಗದ ಬಳಕೆ ತಪ್ಪಿಸಿ ಪರಿಸರ ಉಳಿಸಿ: ನ್ಯಾಯಾಲಯದಲ್ಲಿ ಕಾಗದ ಬಳಕೆಯ ವಿರುದ್ಧ ಪ್ರಕರಣ ಗೆದ್ದ ಕಾನೂನು ವಿದ್ಯಾರ್ಥಿಗಳು

ಕಾಗದಗಳ ಬಳಕೆ ಕಡಿಮೆ ಮಾಡಿ ಅದರ ಮೂಲಕ ಹೆಚ್ಚಿನ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಮೂವರು ವಿದ್ಯಾರ್ಥಿಗಳು ಮಾಡಿದ ಪ್ರಯತ್ನ ಸಫಲವಾಗಿದೆ. ರಾಜ್ಯ ಹೈಕೋರ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎ4 ಗಾತ್ರದ ಹಾಳೆಯ ಎರಡೂ ಬದಿಗಳಲ್ಲಿ ಮುದ್ರಿಸುವ ಮೂಲಕ ಹೆಚ್ಚುವರಿ ಕಾಗದ ಬಳಕೆ ಕಡಿತಗೊಳಿಸಲು ತೀರ್ಮಾನಿಸಿದ್ದು ಕಾಗದದ ಬಳಕೆಯನ್ನು ಕಡ್ಡಾಯಗೊಳಿಸುವ ನಿಯಮಗಳಿ
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಕಾಗದಗಳ ಬಳಕೆ ಕಡಿಮೆ ಮಾಡಿ ಅದರ ಮೂಲಕ ಹೆಚ್ಚಿನ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಮೂವರು ವಿದ್ಯಾರ್ಥಿಗಳು ಮಾಡಿದ ಪ್ರಯತ್ನ ಸಫಲವಾಗಿದೆ. ರಾಜ್ಯ ಹೈಕೋರ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎ4 ಗಾತ್ರದ ಹಾಳೆಯ ಎರಡೂ ಬದಿಗಳಲ್ಲಿ ಮುದ್ರಿಸುವ ಮೂಲಕ ಹೆಚ್ಚುವರಿ ಕಾಗದ ಬಳಕೆ ಕಡಿತಗೊಳಿಸಲು ತೀರ್ಮಾನಿಸಿದ್ದು ಕಾಗದದ ಬಳಕೆಯನ್ನು ಕಡ್ಡಾಯಗೊಳಿಸುವ ನಿಯಮಗಳಿಗೆ ತಿದ್ದುಪಡಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠವು 2019 ರ ಆಗಸ್ಟ್ 22 ರಂದು ನ್ಯಾಯಾಲಯವು ಎ4 ಗಾತ್ರದ ಕಾಗದವನ್ನು ಬಳಸಲು ಕರ್ನಾಟಕ ಹೈಕೋರ್ಟ್ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ತೀರ್ಮಾನಿಸಿದೆ ಎಂದು ಹೇಳಿದರು. 2020 ರ ನವೆಂಬರ್ 17 ರಂದು ಅಧಿಸೂಚನೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ತಿದ್ದುಪಡಿಯನ್ನು ಅಂಗೀಕರಿಸಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರು ನ್ಯಾಯಾಲಯವು ಎ4 ಕಾಗದವನ್ನು ಬಳಸಲು ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನಗಳನ್ನು ನೀಡುವಂತೆ ಪ್ರಾರ್ಥಿಸಿದ್ದರು. ಆ ನಿಟ್ಟಿನಲ್ಲಿ ಅರ್ಜಿಯಲ್ಲಿರುವ ಬೇಡಿಕೆ ಸಮಂಜಸವಾಗಿದ್ದು ಇದಕ್ಕಾಗಿ ಯಾವ ಮನವಿ ಅಥವಾ ಪ್ರಾರ್ಥನೆ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಆದರೆ, ರಿಜಿಸ್ಟ್ರಾರ್ ಜನರಲ್ ಸಂಬಂಧಪಟ್ಟ ಸಮಿತಿಯ ಗಮನವನ್ನು ಸೆಳೆಯಲಿದ್ದಾರೆಎಂದು ಅದು ಹೇಳಿದೆ.

ನ್ಯಾಯಾಲಯದಲ್ಲಿ ಬಳಸಲ್ಪಡುವ ಫುಲ್‌ಸ್ಕೇಪ್ ಕಾಗದದ ಸಿಂಗಲ್ ಸೈಡ್ ಪ್ರಿಂಟಿಂಗ್ ಪರಿಸರಕ್ಕೆ ಹಾನಿಕಾರಕವಾಗಿದೆ ಎಂದು ಲಖನೌನ ಕಾನೂನು ವಿದ್ಯಾರ್ಥಿಗಳಾದ ಅಕೃತಿ ಅಗರ್ವಾಲ್, ಬೆಂಗಳೂರಿನ ಭಾವನಾ ಎಂ ಮತ್ತು ಉದಯಪುರದ ಲಕ್ಷ್ಯ ಪುರೋಹಿತ್ ಅವರುಗಳು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com