ಕಾನೂನು ವಿದ್ಯಾರ್ಥಿಯ ರಕ್ಷಣೆಗೆ ನಿಂತ ಹೈಕೋರ್ಟ್: ಪ್ರಾಜೆಕ್ಟ್ ಅಂಕ ನೀಡುವಂತೆ ನ್ಯಾಷನಲ್ ಲಾ ವಿವಿಗೆ ಆದೇಶ
ಬೆಂಗಳೂರು: ಪ್ರಾಜೆಕ್ಟ್ ಕೆಲಸ ಮತ್ತು ಅವಾರ್ಡ್ ಮಾರ್ಕ್ಸ್ ನ್ನು ಮೌಲ್ಯಮಾಪನ ಮಾಡುವಂತೆ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ(ಎನ್ಎಲ್ಎಸ್ ಐಯು) ವಿದ್ಯಾರ್ಥಿಯ ಸಹಾಯಕ್ಕೆ ರಾಜ್ಯ ಹೈಕೋರ್ಟ್ ಬಂದಿದೆ.
ಯೂನಿವರ್ಸಿಟಿಯ ವಿದ್ಯಾರ್ಥಿ ಪಿ ಬಿ ಹೃದಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ದೀಕ್ಷಿತ್ ಕೃಷ್ಣ ಶ್ರೀಪಾದ್ ಈ ಆದೇಶ ಹೊರಡಿಸಿದ್ದಾರೆ. ಪ್ರಾಜೆಕ್ಟ್ ವರ್ಕ್ ನಲ್ಲಿ ಕೃತಿಚೌರ್ಯವಾಗಿದೆ ಎಂದು ಆರೋಪಿಸಿ ವಿಶ್ವವಿದ್ಯಾಲಯ ಅವರಿಗೆ 4ನೇ ವರ್ಷದ ಎಲ್ ಎಲ್ ಬಿಗೆ ಪ್ರವೇಶ ನಿರಾಕರಿಸಿತ್ತು. 3ನೇ ವರ್ಷದ ಟ್ರೈಸೆಮಿಸ್ಟರ್ ನ ವಿಶೇಷ ಮರು ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಶ್ವವಿದ್ಯಾಲಯ ಅವರಿಗೆ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಕಳೆದ ಮಾರ್ಚ್ 2ರಂದು ವಿದ್ಯಾರ್ಥಿ ಇ ಮೇಲ್ ಮೂಲಕ ಲಿಖಿತ ಮನವಿ ಸಲ್ಲಿಸಿದ್ದರೂ ಕೂಡ ವಿಶ್ವವಿದ್ಯಾಲಯ ಅವಕಾಶ ನೀಡದೆ ಅನ್ಯಾಯ ಮಾಡಿದೆ ಎಂದು ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು.
ದೇಶಮಟ್ಟದಲ್ಲಿ ಪ್ರತಿಷ್ಠೆಯ ಶಿಕ್ಷಣಸಂಸ್ಥೆಯಾಗಿರುವ ಕಾನೂನು ವಿಶ್ವವಿದ್ಯಾಲಯ ನಮ್ಮ ಮಕ್ಕಳನ್ನು ನಿಭಾಯಿಸುತ್ತದೆಯೇ ಹೊರತು ಚರಾಸ್ತಿಯನ್ನಲ್ಲ. ಕೃತಿಚೌರ್ಯಕ್ಕಾಗಿ ಸಂಕೋಚಕ ಕ್ರಮ ತೆಗೆದುಕೊಳ್ಳದಿರುವಲ್ಲಿ ಅದು ಮೃದುತ್ವವನ್ನು ತೋರಿಸಿದೆ. ಪ್ರಾಜೆಕ್ಟ್ ವರ್ಕ್ ಗೆ ಯಾವುದೇ ಅವಾರ್ಡ್ ಕೊಡದಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿ ವಿದ್ಯಾರ್ಥಿ ಪರವಾದ ತೀರ್ಪು ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ