ಚುನಾವಣೆ ವಿಳಂಬಕ್ಕೆ ಕರ್ನಾಟಕ ಕುಖ್ಯಾತ!

ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸದೆ ಹಠಮಾರಿ ವರ್ತನೆ ತೋರುತ್ತಿದೆ, ಇದನ್ನು ಗಮನಿಸಿ ಸರ್ಕಾರಕ್ಕೆ ನಿರ್ದೇಶನ ಕೋರಿ ಹಿರಿಯ ವಕೀಲ ಪ್ರೊಫೆಸರ್ ರವಿವರ್ಮ ಕುಮಾರ್ ಅವರು ಕರ್ನಾಟಕ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳುರು: ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸದೆ ಹಠಮಾರಿ ವರ್ತನೆ ತೋರುತ್ತಿದೆ, ಇದನ್ನು ಗಮನಿಸಿ ಸರ್ಕಾರಕ್ಕೆ ನಿರ್ದೇಶನ ಕೋರಿ ಹಿರಿಯ ವಕೀಲ ಪ್ರೊಫೆಸರ್ ರವಿವರ್ಮ ಕುಮಾರ್ ಅವರು ಕರ್ನಾಟಕ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ವರ್ತನೆ ಹಠಮಾರಿ, ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸದಿರುವುದಕ್ಕೆ ಹ್ಸೆಅರುವಾಸಿಯಾಗಿದೆ ಎಂದು ವಕೀಲರು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ನ್ಯಾಯಪೀಠದ ಮುಂದೆ , ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದಾರೆ.

ಜುಲೈ 2018 ರಿಂದ ವಾರ್ಡ್‌ಗಳ ಡಿಲಿಮಿಟೇಶನ್ ಮತ್ತು ಕಾಯ್ದಿರಿಸುವಿಕೆಯ ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸಲು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ರಾಜ್ಯ ಸರ್ಕಾರಕ್ಕೆ ಸುಮಾರು ಒಂದು ಡಜನ್ ಬಾರಿ  ಸಂವಹನ ನಡೆಸಿದೆ ಆದರೆ ಸರ್ಕಾರ ಅದಕ್ಕೆ ಉತ್ತರಿಸಿಲ್ಲ ಆದುದರಿಂದ ಸರ್ಕಾರಕ್ಕೆ ನಿರ್ದೇಶನ ಕೋರಿ ಎಸ್‌ಇಸಿ ಹೈಕೋರ್ಟ್‌ನ್ನು ಸಂಪರ್ಕಿಸಿತ್ತು. ಚುನಾವಣೆ ನಡೆಸಲು ಸಹಕರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಎಸ್‌ಇಸಿ ಅಥವಾ ಅರ್ಜಿದಾರರು ಪ್ರತಿ ಬಾರಿಯೂ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಅವರು ವಾದಿಸಿದರು,

2015 ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಾಗ ಅನುಸರಿಸಿದ್ದ ವಿಳಂಬವನ್ನು ಅವರು ಉಲ್ಲೇಖಿಸಿದ್ದು ಇದೀಗ ಗ್ರಾಮ ಪಂಚಾಯತ್ ಚುನಾವಣೆಗಳ ವಿಚಾರದಲ್ಲಿಯೂ ಅದೇ ರೀತಿ ನಡೆದುಕೊಳ್ಲಲಾಗುತ್ತಿದೆ ಎಂದು ಆರೋಪ್ಸಿದ್ದಾರೆ.

ಸೆಪ್ಟೆಂಬರ್ 10, 2020 ರಂದು ಬಿಬಿಎಂಪಿ ಅವಧಿ ಕೊನೆಗೊಂಡಿತು ವಾಸ್ತವವಾಗಿ, ನಿರ್ವಾಹಕರನ್ನು ನೇಮಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಆದರೆ ಹಾಗೆಯೇ ಮಾಡಲಾಗಿದೆ.ಮತ್ತು ಅವರ ಅವಧಿ ಜನವರಿಯಲ್ಲಿ ಕೊನೆಗೊಳ್ಳುತ್ತದೆ, ಮತ್ತೆ ಅವರ ಅವಧಿ ವಿಸ್ತರಣೆಗೆ ಅವಕಾಶವಿಲ್ಲ ಎಂದು ಅರ್ಜಿದಾರ ಕುಮಾರ್ ವಾದಿಸಿದ್ದಾರೆ.

"ಕೆಎಂಸಿ ಕಾಯ್ದೆಯ ತಿದ್ದುಪಡಿಯು 198 ರಿಂದ ವಾರ್ಡ್‌ಗಳ ಸಂಖ್ಯೆಯನ್ನು 243 ಕ್ಕೆ ಹೆಚ್ಚಿಸುತ್ತದೆ, ಮತ್ತು ಪ್ರಸ್ತುತ ವಿಚಾರಗಳು ಸನ್ನಿವೇಶಗಳಿಗೆ ಯಾವುದೇ ಅನ್ವಯವಾಗುವುದಿಲ್ಲ"ಎಂದು ಅವರು ವಾದಿಸಿದರು. ಎಸ್‌ಇಸಿ ಪ್ರತಿನಿಧಿಸುವ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ಚುನಾವಣೆಗಳು ಅನಿರ್ದಿಷ್ಟವಾಗಿರುತ್ತದೆ ಮತ್ತು ರಾಜ್ಯ ಸರ್ಕಾರವು ನಿರ್ಧರಿಸುವಂತೆ ತೆ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ವಾದಿಸಿದರು. ಚುನಾವಣೆಗಳನ್ನು ಮುಂದೂಡಲು ಬರುವುದಿಲ್ಲಮತದಾರರ ಪಟ್ಟಿ ತಯಾರಿಸಲು ಸುಮಾರು 3 ಕೋಟಿ ರೂ. ಖರ್ಚು ಮಾಡಲಾಗಿದೆ. ಚುನಾವಣೆ ಮುಂದೂಡಲ್ಪಟ್ಟರೆ ಸಮಯ ಮತ್ತು ಸಾರ್ವಜನಿಕ ಹಣ ಎರಡೂ ವ್ಯರ್ಥವಾಗುತ್ತದೆ, ಎಂದು ಅವರು ಕೋರ್ಟ್ ಗೆ ಅರಿಕೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com