ಅಕ್ಷಯ ಪಾತ್ರ ಪ್ರತಿಷ್ಠಾನವನ್ನು ಆಡಳಿತಾಧಿಕಾರಿಗೆ ವಹಿಸಿ: ಲಹರ್ ಸಿಂಗ್

ಅಕ್ಷಯ ಪಾತ್ರ ಪ್ರತಿಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಧಿಕಾರ, ಸಂಪನ್ಮೂಲ ದುರುಪಯೋಗ ಮತ್ತು ಲೆಕ್ಕಪತ್ರದಲ್ಲಿ ಬದಲಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಾನವನ್ನು ಆಡಳಿತಾಧಿಕಾರಿಗೆ ವಹಿಸಬೇಕೆಂದು ಬಿಜೆಪಿ ಎಂಎಲ್ ಸಿ ಲಹರ್ ಸಿಂಗ್ ಸಿರೋಯ ಹೇಳಿದ್ದಾರೆ.
ಅಕ್ಷಯ ಪಾತ್ರ (ಸಂಗ್ರಹ ಚಿತ್ರ)
ಅಕ್ಷಯ ಪಾತ್ರ (ಸಂಗ್ರಹ ಚಿತ್ರ)

ಬೆಂಗಳೂರು: ಅಕ್ಷಯ ಪಾತ್ರ ಪ್ರತಿಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಧಿಕಾರ, ಸಂಪನ್ಮೂಲ ದುರುಪಯೋಗ ಮತ್ತು ಲೆಕ್ಕಪತ್ರದಲ್ಲಿ ಬದಲಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಾನವನ್ನು ಆಡಳಿತಾಧಿಕಾರಿಗೆ ವಹಿಸಬೇಕೆಂದು ಬಿಜೆಪಿ ಎಂಎಲ್ ಸಿ ಲಹರ್ ಸಿಂಗ್ ಸಿರೋಯ ಹೇಳಿದ್ದಾರೆ. 

ಅಕ್ಷಯ ಪಾತ್ರ ಪ್ರತಿಷ್ಠಾನ ದಲ್ಲಿ ನಡೆದಿದೆ ಎನ್ನಲಾದ ಅಧಿಕಾರ, ಸಂಪನ್ಮೂಲ ದುರುಪಯೋಗ ಮತ್ತು ಲೆಕ್ಕಪತ್ರದಲ್ಲಿ ಬದಲಾವಣೆ ಆರೋಪದ ಕಾರಣ ಪ್ರತಿಷ್ಠಾನದ ಆಡಳಿತ ಸೂತ್ರವನ್ನು ಸ್ವತಂತ್ರ ವ್ಯಕ್ತಿಗಳಿಗೆ ನೀಡಬೇಕು’ ಎಂದು ಲಹರ್‌ ಸಿಂಗ್‌ ಅವರು ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್‌ ದಾಸ್ ಅವರಿಗೆ ಪತ್ರ ಬರೆದಿದ್ದಾರೆ.

‘ಅಕ್ಷಯಪಾತ್ರ ಪ್ರತಿಷ್ಠಾನದ ನಿಮ್ಮ ಮಾಜಿ ಸಹೋದ್ಯೋಗಿಗಳೇ ಈ ಎಲ್ಲ ಆರೋಪಗಳನ್ನು ಮಾಡಿದ್ದಾರೆ.  ಈ ಆರೋಪ ನನ್ನನ್ನು ಆತಂಕಕ್ಕೀಡುಮಾಡಿದೆ, ನಿಮ್ಮ ಬಗ್ಗೆ ಜನರಲ್ಲಿ ಸಂಶಯ ಮೂಡಿರುವುದರಿಂದ, ಸಂಶಯ ಹೋಗಲಾಡಿಸಬೇಕು. ಹೀಗಾಗಿ ಇಸ್ಕಾನ್‌ಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದ ವ್ಯಕ್ತಿಗಳಿಂದ ತನಿಖೆ ನಡೆಸುವುದು ಸೂಕ್ತ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮಾಜಿ ಮುಖ್ಯ ವಿಚಕ್ಷಣಾ ಆಯುಕ್ತ ಕೆ.ವಿ.ಚೌಧರಿ ಮತ್ತು ಥರ್ಮಾಕ್ಸ್‌ನ ಸಿಇಒ ಎಂ.ಎಸ್‌.ಉನ್ನಿಕೃಷ್ಣನ್ ಅವರಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದೀರಿ. ಇವರ ವಿಶ್ವಾಸಾರ್ಹತೆಯ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ಆದರೆ, ಇವರು ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ. ಇದು ಹಿತಾಸಕ್ತಿಯ ಸಂಘರ್ಷವಾಗುತ್ತದೆ’ ಎಂದು ಲಹರ್‌ ಸಿಂಗ್‌ ಪತ್ರದಲ್ಲಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com