ಡ್ರಗ್ಸ್ ಪ್ರಕರಣ: ಬೆಂಗಳೂರು ಇಡಿ ಎದುರು ಕೇರಳ ಸಿಪಿಐ(ಎಂ) ನಾಯಕನ ಮಗ ಬಿನೀಶ್ ಕೊಡಿಯೇರಿ ಹಾಜರು

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಕಚೇರಿಗೆ ಕೇರಳ ಸಿಪಿಐ(ಎಂ) ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಹಾಜರಾಗಿದ್ದಾರೆ. 
ಡ್ರಗ್ಸ್ ಪ್ರಕರಣ: ಇಡಿ ಎದುರು ಹಾಜರಾದ ಕೇರಳ ಸಿಪಿಐ(ಎಂ) ನಾಯಕನ ಮಗ ಬಿನೀಶ್ ಕೊಡಿಯೇರಿ
ಡ್ರಗ್ಸ್ ಪ್ರಕರಣ: ಇಡಿ ಎದುರು ಹಾಜರಾದ ಕೇರಳ ಸಿಪಿಐ(ಎಂ) ನಾಯಕನ ಮಗ ಬಿನೀಶ್ ಕೊಡಿಯೇರಿ
Updated on

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಕಚೇರಿಗೆ ಕೇರಳ ಸಿಪಿಐ(ಎಂ) ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಹಾಜರಾಗಿದ್ದಾರೆ. 

ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಬಿನೀಶ್ ಕೊಡಿಯೇರಿಗೆ ನೊಟೀಸ್ ಜಾರಿಗೊಳಿಸಲಾಗಿತ್ತು.

ಡ್ರಗ್ಸ್ ಹೊಂದಿರುವ ಆರೋಪದಡಿ ಅಂಕಿತ ಡಿ, ರವೀಂದ್ರನ್ ಹಾಗೂ ಮೊಹಮ್ಮದ್ ಅನೂಪ್ ಅವರನ್ನು ಎನ್ ಸಿಬಿ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಿಂದ ಬಂಧಿಸಿತ್ತು. ಈ ಬಂಧಿತರ ವಿರುದ್ಧ ಕನ್ನಡ ಸಿನಿಮಾ ತಾರೆಯರು ಹಾಗೂ ಹಾಡುಗಾರರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. 

ಕೇರಳ ಸಿಪಿಐ(ಎಂ) ನಾಯಕನ ಪುತ್ರನಿಗೆ ಮೊಹಮ್ಮದ್ ಅನೂಪ್ ಜೊತೆ ನಂಟಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸೆ.09 ರಂದೂ ಸಹ ಇಡಿ ಬಿನೀಶ್ ನ ವಿಚಾರಣೆ ನಡೆಸಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಹ ಬಿನೀಶ್ ಕೊಡಿಯೇರಿಗೆ ಡ್ರಗ್ಸ್ ಜಾಲದ ಸಂಪರ್ಕವಿದೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com