ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ಸೋಂಕಿತರ ಡಯಾಲಿಸಿಸ್ ಗೆ ಅಧಿಕ ವೆಚ್ಚ: ಡಯಾಲಿಸಿಸ್ ಸ್ಕಿಪ್ ಮಾಡುತ್ತಿರುವ ರೋಗಿಗಳು!

ಡಯಾಲಿಸಿಸ್ ಅವಶ್ಯಕತೆಯಿರುವ ಕೊರೋನಾ ರೋಗಿಗಳು ಅಧಿಕ ಚಿಕಿತ್ಸಾ ವೆಚ್ಚದ ಕಾರಣ ಡಯಾಲಿಸಿಸ್ ಮಾಡಿಸಿಕೊಳ್ಳುವುದನ್ನೆ ನಿಲ್ಲಿಸಿದ್ದಾರೆ.  
Published on

ಬೆಂಗಳೂರು: ಡಯಾಲಿಸಿಸ್ ಅವಶ್ಯಕತೆಯಿರುವ ಕೊರೋನಾ ರೋಗಿಗಳು ಅಧಿಕ ಚಿಕಿತ್ಸಾ ವೆಚ್ಚದ ಕಾರಣ ಡಯಾಲಿಸಿಸ್ ಮಾಡಿಸಿಕೊಳ್ಳುವುದನ್ನೆ ನಿಲ್ಲಿಸಿದ್ದಾರೆ.  ಖಾಸಗಿ ಆಸ್ಪತ್ರೆಗಳಲ್ಲಿ ನಾರ್ಮಲ್ ಡಯಾಲಿಸಿಸ್ ರೋಗಿಗಳಿಗಿಂತ ಕೊರೋನಾ ಸೋಂಕಿತರ ಡಯಾಲಿಸಿಸ್ ವೆಚ್ಚ ಅಧಿಕವಾಗಿದೆ.

ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಮಾಡಬೇಕಾಗುತ್ತದೆ, ಆದರೆ ಕೆಲವರು ಮಾಡಿಸಿಕೊಳ್ಳುತ್ತಿಲ್ಲ, ಹೀಗಾಗಿ ಅದಕ್ಕೆ ಗಮನ ನೀಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ನಿಕ್ ಥಾಮಸ್ ಎಂಬುವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು, ಇತ್ತೀಚೆಗೆ ಅವರಿಗೆ ಕೊರೋನಾ ಸೋಂಕು ತಗುಲಿತ್ತು, ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ದರ ನೋಡಿ ಅವರು ಡಯಾಲಿಸಿಸ್  ಮಾಡಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ, ಸಾಮಾನ್ಯ ರೋಗಿಗಳಿಗೆ ಡಯಾಲಿಸಿಸ್ ಮಾಡಲು 3ರಿಂದ 5 ಸಾವಿರ ರು ವೆಚ್ಚ ತಗಲುತ್ತದೆ, ಆದರೆ ಕೊರೋನಾ ರೋಗಿಗಳಿಗೆ ಸುಮಾರು 10 ಸಾವಿರ ರು ಹಣ ನೀಡಬೇಕಾಗಿದೆ.

ನಿಕ್ಕಿ ಅಂತಹ ಹಲವರು ಇತ್ತೀಚೆಗೆ ಡಯಾಲಿಸಿಸ್ ಸ್ಕಿಪ್ ಮಾಡುತ್ತಿದ್ದಾರೆ, ಆದರೆ ಹೀಗೆ ಮಾಡುವುದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಎಂದು ರೇಗಲ್ ಆಸ್ಪತ್ರೆ ವೈದ್ಯ ಡಾ.ಸುರಿ ರಾಜು ಹೇಳಿದ್ದಾರೆ.

ಸಿಬ್ಬಂದಿ ಮತ್ತು ಉಪಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿರುವ ಕಾರಣ ಹೆಚ್ಚಿನ ದರ ವಿಧಿಸಲಾಗುತ್ತಿದೆ. ನಿರ್ವಹಣೆ ಕೂಡ ಅಧಿಕವಾಗುತ್ತಿದೆ, ಒಂದು ಡಯಾಲೈಸರ್ ಅನ್ನು ಐದರಿಂದ ಆರು  ರೋಗಿಗಳಿಗೆ ಬಳಕೆ ಮಾಡಬಹುದಾಗಿದೆ, ಆದರೆ ಕೋವಿಡ್-19 ರೋಗಿಗಳಿಗೆ ಒಮ್ಮೆ ಬಳಸಿದರೇ ಮತ್ತೆ ಉಪಯೋಗಿಸಲಾಗದು, ಹೀಗಾಗಿ ಹಲವು ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ನಿರಾಕರಿಸುತ್ತಿದ್ದಾರೆ.

ಡಯಾಲಿಸಿಸ್ ಚಿಕಿತ್ಸೆ ನಿರಾಕರಿಸುವುದರಿಂದ ರೋಗಿಗಳು ಅಪಾಯ ತಂದೊಡ್ಡಿಕೊಳ್ಳುವ ಸಾಧ್ಯತೆಯಿದೆ, ಕೊರೋನಾ ರೋಗಿಗಳಿಗೆ ಡಯಾಲಿಸಿಸ್ ಗೆ 11 ರಿಂದ 15 ಸಾವಿರ ರು ದರ ವಿಧಿಸಲಾಗುತ್ತದೆ ಎಂದು ಮಲ್ಲೇಶ್ವರಂನಲ್ಲಿರುವ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಜಿಕೆ ಪ್ರಕಾಶ್ ತಿಳಿಸಿದ್ದಾರೆ. 

ಇಡೀ ತಂಡವು ಪ್ರತ್ಯೇಕತೆ, ಸಿಬ್ಬಂದಿ ಮತ್ತು ಪಿಪಿಇ ಕಿಟ್‌ಗಳ ಬಳಕೆಯಿಂದಾಗಿ. ಖಾಸಗಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಡಯಾಲಿಸಿಸ್ ಮಾಡಿಸಿಕೊಳ್ಳದೇ ಸ್ಕಿಪ್ ಮಾಡುತ್ತಿರುವವರು ಹೆಚ್ಚಿನ ಕೇರ್ ತೆಗೆದುಕೊಳ್ಳಬೇಕಾಗಿದೆ, ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com