ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಗೆ ಪೆಟ್ರೋಲ್ ಬಂಕ್ ಮಾಲೀಕರ ಅಡ್ಡಗಾಲು; ಭೂಸ್ವಾಧೀನಕ್ಕೆ ಅಡ್ಡಿ!

ಬಹು ನಿರೀಕ್ಷಿತ 117.3 ಕಿಮೀ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ,100 ಕಿಮೀ ವೇಗದಲ್ಲಿ ವಾಹನಗಳು ಚಲಿಸಲು ಅನುಕೂಲವಾಗುವ ಕಾಮಗಾರಿ ಇದಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹು ನಿರೀಕ್ಷಿತ 117.3 ಕಿಮೀ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ,100 ಕಿಮೀ ವೇಗದಲ್ಲಿ ವಾಹನಗಳು ಚಲಿಸಲು ಅನುಕೂಲವಾಗುವ ಕಾಮಗಾರಿ ಇದಾಗಿದೆ. 

ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಗಗಾಗಿ ಭೂ ಸ್ವಾದೀನ ಮತ್ತು ಮಾರ್ಗದಲ್ಲಿ ಟೋಲ್ ಪ್ಲಾಜಾ ನಿರ್ಮಿಸಲು ಅಡ್ಡಿ ಎದುರಾಗಿದೆ, 

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನ ಪೆಟ್ರೋಲ್ ಬಂಕ್ ನ ಡೀಲರ್ ಮತ್ತು ಎಜೆನ್ಸಿಗಳು ಜಾಗ ಬಿಟ್ಟು ಕೊಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಇರುವ ಚತುಷ್ಪಥ ಹೆದ್ದಾರಿಯಲ್ಲಿ ಎರಡು ಸರ್ವೀಸ್ ಲೇನ್ ಸೇರಿದಂತೆ ಒಟ್ಟು 10 ಲೇನ್ ರಸ್ತೆಗಳನ್ನಾಗಿ ಮಾರ್ಪಡಿಸಲು ಇಂಟೆಂಡ್ ನೀಡಲಾಗಿದೆ. 

ಕೊರೋನಾ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸದ್ಯ ಯೋಜನೆಯ ಅವಧಿಯನ್ನು ವಿಸ್ತರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಹಂತದ ಕಾಮಗಾರಿಯನ್ನು ನವೆಂಬರ್ 2021 ರಿಂದ ಫೆಬ್ರವರಿ 2022ರ ವರೆಗೆ ಪೂರ್ಣಗೊಳಿಸಲು ಸಮಯ ನಿಗದಿ ಮಾಡಿತ್ತು, ಸದ್ಯ ಸೆಪ್ಟಂಬರ್ 22 ರವರೆಗೆ ಅವಧಿ ವಿಸ್ತರಿಸಿದೆ.

ಸುಮಾರು 8 ಸಾವಿರ ಕೋಟಿ  ರು ವೆಚ್ಚದ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ.

ಪೆಟ್ರೋಲ್ ಪಂಪ್ ಔಟ್‌ಲೆಟ್‌ಗಳಿಗೆ ಸಂಬಂಧಿಸಿದ ವಿಷಯವು ನಿರ್ಣಾಯಕವಾಗಿದೆ. ಏಕೆಂದರೆ ಅವುಗಳು ಎರಡು ಪ್ಲಾಜಾಗಳ ಮುಂದೆ ಇರುವುದರಿಂದ ಹೆದ್ದಾರಿ ಕಾರ್ಯಾಚರಣೆ
ಪ್ರಾರಂಭಿಸಿದಾಗ ಅಲ್ಲಿ  ಆದಾಯವನ್ನು ಸಂಗ್ರಹಿಸುವ ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.

ಒಂದು ಪೆಟ್ರೋಲ್ ಬಂಕ್ ಕಣಿಮಿಣಿಕೆ ಮತ್ತೊಂದು ಮಂಡ್ಯದಲ್ಲಿದೆ, ಎರಡು ಬಂಕ್ ಗಳನ್ನು ಬೇರೆಡೆ ವರ್ಗಾಯಿಸಿ 50 ಕೋಟಿ ರು ಪರಿಹಾರ ಘೋಷಿಸಿದ್ದರೂ ಪೆಟ್ರೋಲ್ ಬಂಕ್ ಅದನ್ನು ನಿರಾಕರಿಸಿದೆ, ಹಾಗಾಗಿ ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಒಂದು ಅಥವಾ ಎರು ತಿಂಗಳಲ್ಲಿ ಅವರನ್ನು ಖಾಲಿ ಮಾಡಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ಪ್ರವೇಶ ಮತ್ತು ಮುಕ್ತಾಯ ಪಾಯಿಂಟ್ ಗಳು ಬೈಪಾಸ್ ನಲ್ಲಿದ್ದು, ಬಿಡದಿ, ರಾಮನಗರ, ಚನ್ನಪಟ್ಟಣ,ಮದ್ದೂರು, ಮಂಡ್ಯಗಳಲ್ಲಿ ನಿರ್ಮಾಣವಾದರೇ ಉತ್ತಮವಾಗಿರುತ್ತದೆ, ರಾಮನಗರದಿಂದ ಎಕ್ಸ್ ಪ್ರೆಸ್ ಹೆದ್ದಾರಿಗೆ ತಲುಪಲು 7 ಕಿಮೀ ಆಗುತ್ತದೆ.  ಮೊದಲ ಹಂತದಲ್ಲಿ ಶೇ.52.5 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com