ರಾಜ್ಯದ 15 ಜಿಲ್ಲೆಗಳಲ್ಲಿ ಕೊರೋನಾ ಸಾವಿನ ಸಂಖ್ಯೆ ಶೇ.1ಕ್ಕಿಂತ ಹೆಚ್ಚು: ಕೋವಿಡ್ ವಾರ್ ರೂಂ ಮಾಹಿತಿ

ಕೋವಿಡ್-19 ವಾರ್ ರೂಂನಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ, ರಾಜ್ಯದ 15 ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಜಾಸ್ತಿಯಿದೆ ಎಂದು ಇತ್ತೀಚಿನ ಪರಾಮರ್ಶೆ ಸಭೆಯಲ್ಲಿ ತಿಳಿಸಿದೆ.
ಕೋವಿಡ್ ಕಿಯೊಸ್ಕ್ ನಲ್ಲಿ ಪರೀಕ್ಷೆಗೊಳಪಡುತ್ತಿರುವ ವ್ಯಕ್ತಿ(ಸಾಂದರ್ಭಿಕ ಚಿತ್ರ)
ಕೋವಿಡ್ ಕಿಯೊಸ್ಕ್ ನಲ್ಲಿ ಪರೀಕ್ಷೆಗೊಳಪಡುತ್ತಿರುವ ವ್ಯಕ್ತಿ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೋವಿಡ್-19 ವಾರ್ ರೂಂನಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ, ರಾಜ್ಯದ 15 ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಜಾಸ್ತಿಯಿದೆ ಎಂದು ಇತ್ತೀಚಿನ ಪರಾಮರ್ಶೆ ಸಭೆಯಲ್ಲಿ ತಿಳಿಸಿದೆ.

ಕೋವಿಡ್-19 ವಾರ್ ರೂಂನಿಂದ ಕಳೆದ 5 ದಿನಗಳಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ, ಕೊರೋನಾ ಪೀಡಿತರು ಅಧಿಕವಾಗಿ ಕೊಪ್ಪಳ(ಶೇಕಡಾ 4.8), ಧಾರವಾಡ (ಶೇ 3.4), ಮೈಸೂರು (ಶೇ 3.9) ಬೀದರ್ (ಶೇ 3.3) ಮತ್ತು ದಕ್ಷಿಣ ಕನ್ನಡ(ಶೇ 3ರಷ್ಟು) ಮೃತಪಟ್ಟಿದ್ದಾರೆ.

ಮಣಿಪಾಲ ಆಸ್ಪತ್ರೆಯ ವೈಜ್ಞಾನಿಕ ಮಂಡಳಿ ಮತ್ತು ಅಧ್ಯಕ್ಷ ಡಾ ಅನೂಪ್ ಅಮರ್ ನಾಥ್, ಕೆಲವು ಜಿಲ್ಲೆಗಳಲ್ಲಿ ಕೊರೋನಾ ರೋಗಿಗಳು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ತಡವಾಗಿ ಸೋಂಕಿನ ಅಂತಿಮ ಹಂತದಲ್ಲಿ ವೈದ್ಯರ ಬಳಿಗೆ ಹೋಗುವುದು, ಇದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವಿನ ಪ್ರಮಾಣ ಹೆಚ್ಚಾಗುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಉದಾಹರಣೆಗೆ, ಕಿಡ್ನಿ ಸಮಸ್ಯೆ ಹೊಂದಿರುವ ಕೋವಿಡ್-19 ಸೋಂಕಿತರು ಅನೇಕರು ಮೃತಪಡುತ್ತಿದ್ದಾರೆ. ಹೀಗಾಗಿ ಪ್ರತಿ 15 ದಿನಗಳಿಗೊಮ್ಮೆ ಆಶಾ ಕಾರ್ಯಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವಂತೆ ಹೇಳಲಾಗಿದೆ. ಆರಂಭದ ಹಂತದಲ್ಲಿಯೇ ರೋಗಿಗಳನ್ನು ಪತ್ತೆಹಚ್ಚಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹೇಳುತ್ತಾರೆ.

ಚಾಮರಾಜನಗರ ಜಿಲ್ಲೆ ಮಂದಿ ತಾಲ್ಲೂಕು ಆಸ್ಪತ್ರೆಗಳಿಗೆ ಹೋಗದೆ ಮೈಸೂರಿಗೆ ಬರುವುದರಿಂದ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರ್ರಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ಡಾ ಪ್ರದೀಪ್ ರಂಗಪ್ಪ ಹೇಳುತ್ತಾರೆ.

ಇದು ಮೈಸೂರಿನಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ, ಇದು ರೋಗಿಗಳನ್ನು ಅಪಾಯಕ್ಕೆ ದೂಡುತ್ತದೆ. ಸಾವುನೋವುಗಳನ್ನು ಕಡಿಮೆ ಮಾಡಲು, ಕರ್ನಾಟಕ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ 72 ಗಂಟೆಗಳಿಗೊಮ್ಮೆ ಫೆರಿಟಿನ್, ಎಲ್‌ಡಿಹೆಚ್, ಐಎಲ್ 6, ಡಿ-ಡೈಮರ್ - ನಾಲ್ಕು ಕೋವಿಡ್ ಉರಿಯೂತದ ಗುರುತುಗಳನ್ನು ಪತ್ತೆಹಚ್ಚಲು ತಂಡವು ನಿರ್ಧರಿಸಿದೆ ಎಂದು ಡಾ. ಅನೂಪ್ ಅಮರನಾಥ್ ಹೇಳುತ್ತಾರೆ.

ಪ್ರಸ್ತುತ, ಶೇಕಡಾ 50ರಿಂದ ಶೇಕಡಾ 60ರಷ್ಟು ರೋಗಿಗಳು 72 ಗಂಟೆಗಳಲ್ಲಿ ಸಾಯುತ್ತಾರೆ, ಚಿಕಿತ್ಸೆಗೆ ಸ್ವಲ್ಪ ಸಮಯ ಉಳಿದಿದೆ ಎನ್ನುವಾಗಲೇ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರರ್ಥ ಪರೀಕ್ಷೆ ತ್ವರಿತವಾಗಿ ಆಗಬೇಕಾಗಿದ್ದು, ಕ್ಲಿನಿಕಲ್ ಭಾಗದಲ್ಲಿ ಮತ್ತು ಐಸಿಯು ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕಾಗಿದೆ ಎಂದು ಕೋವಿಡ್-19 ತೀವ್ರ ರಕ್ಷಣೆ ಸಮಿತಿಯ ಮುಖ್ಯಸ್ಥ ಡಾ ತ್ರಿಲೋಕ್ ಚಂದ್ರ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com