ಎಸ್ ಟಿ ಮೀಸಲು ಸಿಗುವವರೆಗೂ ಹೋರಾಟ: ಕುರುಬ ಸಮುದಾಯದ ಸಭೆಯಲ್ಲಿ ನಿರ್ಧಾರ

ಕುರುಬ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರಿಸುವವರೆಗೂ ಹೋರಾಟ ನಡೆಸುವ ಮತ್ತು ಈ ಸಂಬಂಧ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ತೀರ್ಮಾನವನ್ನು  ಕುರುಬ ಸಮುದಾಯದ ಸ್ವಾಮೀಜಿಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕುರುಬ ಸಮುದಾಯದ ಸಭೆ
ಕುರುಬ ಸಮುದಾಯದ ಸಭೆ

ಬೆಂಗಳೂರು: ಕುರುಬ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರಿಸುವವರೆಗೂ ಹೋರಾಟ ನಡೆಸುವ ಮತ್ತು ಈ ಸಂಬಂಧ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ತೀರ್ಮಾನವನ್ನು  ಕುರುಬ ಸಮುದಾಯದ ಸ್ವಾಮೀಜಿಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲು ಕೊಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕುರುಬ ಸಮುದಾಯದ ಬೃಹತ್ ಸಭೆಯನ್ನು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. 

ಕುರುಬರು ಇದ್ದ ನಾಡೆ ಕರ್ನಾಟಕವಾಯಿತು. ದೇವರಾಜ ಅರಸು ಕಾಲದಲ್ಲೆ ಎಸ್ಟಿ ಮೀಸಲು ಮಾಡಲು ಶಿಫಾರಸ್ಸು ಮಾಡಿದರು. ಕೇಂದ್ರಕ್ಕೆ ಶಿಫಾರಸ್ಸು ಹೋಯಿತಷ್ಟೆ, ಏನೂ ಆಗಲಿಲ್ಲ ಎಂದು ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಇದೇ ಸಂದರ್ಭದಲ್ಲಿ ಹೇಳಿ, ಅಂದು ಈಶ್ವರಪ್ಪ, ಹೆಚ್.ಎಂ. ರೇವಣ್ಣ, ಎಂಟಿಬಿ ನಾಗರಾಜು ರವರಂತಹವರು ಇರಲಿಲ್ಲ. ಇದ್ದಿದ್ದರೆ ಕುರುಬ ಸಮುದಾಯದ ಅಂದೇ ಎಸ್ಟಿಗೆ ಸೇರ್ಪಡೆಯಾಗುತ್ತಿತ್ತು ಎಂದರು.

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಸಿಗುವವರೆಗೆ ಹೋರಾಟ ಮಾಡುವುದಾಗಿ ಸಚಿವ ಕೆ,ಎಸ್ ಈಶ್ವರಪ್ಪು ಹೇಳಿದ್ದಾರೆ,೧೯೩೫ ರಿಂದ ಸತತ ಹೋರಾಟ ನಡೆಸಿದರೂ ಕುರುಬರಿಗೆ ಇದುವರೆಗೂ ಎಸ್ಟಿ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ಈ ಬಗ್ಗೆ ಕಡತ ಹೋಗಿತ್ತು ಅಷ್ಟೆ. ಏನೂ ಆಗಿಲ್ಲ. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ
ಮುಖೇನ ಎಸ್ಟಿ ಮೀಸಲಾತಿಗೆ ಕಡತ ಸಲ್ಲಿಸುತ್ತೇವೆ. ಎಸ್ಟಿ ಮೀಸಲಾತಿ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು. ಕುರುಬ ಸಮುದಾಯದ ನಾಲ್ವರು ಸ್ವಾಮೀಜಿಗಳ ನೇತೃತ್ವದಲ್ಲಿ ಎಸ್ಟಿ ಮೀಸಲಾತಿ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದರು.

ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದರು. ಸಮುದಾಯದ ಹೋರಾಟ ಎಂದರೆ ಎಲ್ಲರೂ ಒಗ್ಗಟ್ಟಾಗಬೇಕು. ಸಮುದಾಯದ ಹೋರಾಟದ ನೇತೃತ್ವದ ವಹಿಸಿರುವುದು ಸ್ವಾಮೀಜಿಗಳು. ರಾಜಕೀಯ ನಾಯಕರುಗಳಲ್ಲ. ಸಮುದಾಯದ ಹೋರಾಟದ ಸಂದರ್ಭದಲ್ಲಿ ರಾಜಕಾರಣ ಬೇಡ ಎಂದು ಅವರು ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಂಟಿಬಿ ನಾಗರಾಜು ಮತ್ತು ಆರ್. ಶಂಕರ್ ಸಚಿವರಾಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದು
ವಿಶೇಷವಾಗಿತ್ತು.

ಕುರುಬರು ಒಟ್ಟಾಗಿ ಸೇರಿದಾಗ ಯಾವತ್ತು ಅನ್ಯಾಯ ಆಗಿಲ್ಲ.  ನಾವೆಲ್ಲರೂ ಒಟ್ಟಾಗಿದ್ಸೇವೆ ನಮಗೆ ಎಸ್ಟಿಗೆ ಹೋರಾಟಕ್ಕೆ ಎಲ್ಲರದ್ದು ಒಂದೇ ಧ್ವನಿ ಇರಬೇಕು.ಎಲ್ಲಿಯೂ ಭಿನ್ನಾಭಿಪ್ರಾಯ ಬೇಡ ಎಲ್ಲಿಯೂ ಅಪಸ್ವರ ಬೇಡ ಇದು ಸಂವಿಧಾನ ಬದ್ದವಾಗಿ ಸಿಗುವ ಹಕ್ಕು ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಸ್ವಾಮೀಜಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com