ಬೇಡಿಕೆ ಈಡೇರಿಸದಿದ್ದರೆ ಕಾಂಗ್ರೆಸ್-ಜೆಡಿಎಸ್ ಸ್ಥಿತಿ ನಿಮಗೂ ಕಟ್ಟಿಟ್ಟ ಬುತ್ತಿ: ಬಿಜೆಪಿಗೆ ಸ್ವಾಮೀಜಿ ಎಚ್ಚರಿಕೆ

ತಾವು ನೀಡಿರುವ ಬೇಡಿಕೆಗಳನ್ನು ಈಡೇರಿಸದಿದ್ದರೇ ಕಾಂಗ್ರೆಸ್-ಜೆಡಿಎಸ್ ಅನುಭವಿಸಿದ ಸ್ಥಿತಿಯೇ ನಿಮಗೂ ಬರಲಿದೆ ಎಂದು ಬಿಜೆಪಿ ಸರ್ಕಾರಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಪ್ರಸನ್ನಾನಂದ ಸ್ವಾಮೀಜಿ
ಪ್ರಸನ್ನಾನಂದ ಸ್ವಾಮೀಜಿ

ದಾವಣಗೆರೆ: ತಾವು ನೀಡಿರುವ ಬೇಡಿಕೆಗಳನ್ನು ಈಡೇರಿಸದಿದ್ದರೇ ಕಾಂಗ್ರೆಸ್-ಜೆಡಿಎಸ್ ಅನುಭವಿಸಿದ ಸ್ಥಿತಿಯೇ ನಿಮಗೂ ಬರಲಿದೆ ಎಂದು ಬಿಜೆಪಿ ಸರ್ಕಾರಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ವಾಲ್ಮೀಕಿ ಸಮುದಾಯಕ್ಕೆ 7.5 ರಷ್ಟು ಮೀಸಲಾತಿಯನ್ನು ಹೆಚ್ವಳ ಮಾಡಿದೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಜಸ್ಟಿಸ್ ನಾಗಮೋಹನದಾಸ ಅವರ ಕಮಿಟಿ ರಚಿಸಿ.‌ ಜು.2 ರಂದು ವರದಿ ನೀಡಿದೆ. ನಮ್ಮಸಮುದಾಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ 7.5 ಕ್ಕೆ ಹೆಚ್ವಿಸಲು ಸರ್ಕಾರಕ್ಕೆ ಒತ್ತಾಯವನ್ನು ಮಾಡಲು ರಾಯಚೂರು ಮತ್ತು
‌ಬಳ್ಳಾರಿ ಜಿಲ್ಲಾ ಮಟ್ಟದ ಸಭೆ‌ ಮಾಡಲಾಗುತ್ತಿದೆ ನಂತರ ಹೊರಾಟ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ 24 ಜಿಲ್ಲೆಯಲ್ಲಿ ಸಂಚಾರ ಮಾಡುತ್ತೇವೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಯಾವುದೇ ಹಂತದ ಹೋರಾಟಕ್ಕೂ ನಮ್ಮ ಸಮಾಜ ಸಿದ್ಧವಾಗಿದೆ ಹೋರಾಟ ಕೈಗೆತ್ತಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಸಚಿವ ಸಂಪುಟ ಕರೆದು ಕೇಂದ್ರದ ಮಾದರಿ ಜಾರಿಗೆ‌ ತರಲಿ.ಎಸ್ಸಿ, ಎಸ್ಟಿಗೆ ಸೇರಲು ಸಂವಿಧಾನದ ಅಡಿ ಹೋರಾಟ ಮಾಡುತ್ತಿದ್ದಾರೆ ಕೇಳುವುದು ತಪ್ಪು ಅಲ್ಲ. ಕೇಂದ್ರದ ವಿವೇಚನೆ ಗೆ ಬಿಟ್ಟ ವಿಚಾರ ಎಂದು ಹೇಳಿದರು. ನಮ್ಮ ಮೀಸಲಾತಿ ಹೆಚ್ಚಳ ಮಾಡಲಿ ಬಿಜೆಪಿಯ ಮುಖಂಡರ,ಶಾಸಕರಾದ ರಮೇಶ್ ಜಾರಕಿಹೊಳಿ‌, ಶ್ರೀರಾಮುಲು ನೇತೃತ್ವದಲ್ಲಿ ಸಭೆ ಮಾಡಿ ಸಿಎಂ ಭೇಟಿಯಾಗಿದ್ದೇವೆ. ವಿಳಂಬ ಮಾಡಿದ್ದರಿಂದ ಪುನಃ ಸಭೆ ಸೇರಿ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

ನಮ್ಮ ಸಮಾಜಕ್ಕೆ ಡಿಸಿಎಂ ಹುದ್ದೆ ಕೊಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಈಡೇರಿಸಬೇಕು, ಭವಿಷ್ಯದಲ್ಲಿ ನಾವು ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com