ನೆರೆ ಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ, ರಾಜ್ಯ ಸರ್ಕಾರದಿಂದ ಪ್ರಯತ್ನ: ಪ್ರಧಾನಿ ಮೋದಿ

ನೆರೆ ಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ಮೈಸೂರು: ನೆರೆ ಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ನಾಡಹಬ್ಬದ ದಸರಾದ ಪ್ರಯುಕ್ತ ನಾಡಿನ ಜನರಿಗೆ ಶುಭಾಶಯ ಕೋರಿದರು. ಕೋವಿಡ್ 19 ಕಾರಣದಿಂದ ಕೆಲವು ನಿರ್ಬಂಧಗಳಿದ್ದರೂ, ಹಬ್ಬ ಆಚರಣೆಗೆ ಯಾವುದೇ ಉತ್ಸಾಹ ಕುಂದಿಲ್ಲ ಎಂದರು. ಭಾರೀ ಮಳೆ ಹಬ್ಬಗಳ ಆಚರಣೆಗೆ ಸ್ವಲ್ಪ ಮಂಕಾಗಿಸಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ತೀವ್ರ ಸಹಾನೂಭೂತಿಯನ್ನು ವ್ಯಕ್ತಪಡಿಸುವುದಾಗಿ ಮೋದಿ ಹೇಳಿದರು.

 ಈ ದಶಕವನ್ನು ಭಾರತದ ದಶಕವನ್ನಾಗಿ ಮಾಡಲು ಹಾಗೂ ಬೆಳವಣಿಗೆ ಖಚಿತತೆಗಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯ ಬದಲಾವಣೆ ಮಾಡಲಾಗುತ್ತಿದೆ .ಕಳೆದ ಆರೇಳು ತಿಂಗಳುಗಳಲ್ಲಿ ಕೃಷಿ, ಬಾಹ್ಯಾಕಾಶ, ರಕ್ಷಣೆ, ವಾಯುಯಾನ ಅಥವಾ ಕಾರ್ಮಿಕ ಕ್ಷೇತ್ರಗಳಲ್ಲಿ ವೇಗ ಮತ್ತು ಸುಧಾರಣೆಯ ವ್ಯಾಪ್ತಿ ಹೆಚ್ಚಾಗುತ್ತಿರುವುದನ್ನು ನೀವು ನೋಡಿರಬಹುದು ಎಂದರು.

ಪ್ರತಿಯೊಂದು ವಲಯದಲ್ಲೂ ಬೆಳವಣಿಗೆಗೆ ಅಗತ್ಯವಾದ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ದೇಶದ ಕೋಟ್ಯಂತರ ಯುವಕರ ಹಿತದೃಷ್ಟಿಯಿಂದ ಮತ್ತು ಈ ದಶಕವನ್ನು ಭಾರತದ ದಶಕವನ್ನಾಗಿ ಮಾಡಲಾಗುತ್ತಿದೆ.ನಾವು ಅಡಿಪಾಯವನ್ನು ಬಲಪಡಿಸಿದಾಗ ಮಾತ್ರ ಈ ದಶಕವು ಭಾರತದದ್ದಾಗಬಹುದು. ಈ ದಶಕವು ಯುವಕರಿಗೆ ಅಪಾರ ಅವಕಾಶವನ್ನು ತಂದಿದೆ ಎಂದು ಅವರು ಹೇಳಿದರು.

ಕೌಶಲ್ಯ, ಮರುಹಂಚಿಕೆ ಮತ್ತು ಉನ್ನತ ಕೌಶಲ್ಯವು ಪ್ರಸ್ತುತ ಅಗತ್ಯವಾಗಿದ್ದು, ಅದರ ಕಡೆಗೆ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಗಮನ ಕೇಂದ್ರಿಕರಿಸಲಿದೆ. ದೇಶವನ್ನು ಉನ್ನತ ಶಿಕ್ಷಣದ ಜಾಗತಿಕ ಕೇಂದ್ರವನ್ನಾಗಿ ಮಾಡಲು ಮತ್ತು  ನಮ್ಮ ಯುವಕರನ್ನು ಸ್ಪರ್ಧಾತ್ಮಕವಾಗಿಸಲು ಎಲ್ಲಾ ಹಂತದಲ್ಲೂ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ವಾಜುಬಾಯಿ ವಾಲಾ ಮತ್ತು ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com