ಸದ್ಯದಲ್ಲಿಯೇ ಹಳ್ಳಿಗಳಿಗೂ ಟೆಲಿಮೆಡಿಸಿನ್ ಸೌಲಭ್ಯ: ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ ನಾರಾಯಣ

ಮೈಸೂರು ಮೂಲದ ಸ್ಕಾನ್ ರೇ ಹೆಲ್ತ್ ಕೇರ್ ಕಂಪೆನಿಗೆ ಎಲ್ಲಾ ರೀತಿಯ ಟೆಲಿ ಮೆಡಿಸಿನ್ ಸೌಲಭ್ಯ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.
ಡಾ ಸಿ ಎನ್ ಅಶ್ವಥ ನಾರಾಯಣ
ಡಾ ಸಿ ಎನ್ ಅಶ್ವಥ ನಾರಾಯಣ

ಮೈಸೂರು: ಮೈಸೂರು ಮೂಲದ ಸ್ಕಾನ್ ರೇ ಹೆಲ್ತ್ ಕೇರ್ ಕಂಪೆನಿಗೆ ಎಲ್ಲಾ ರೀತಿಯ ಟೆಲಿ ಮೆಡಿಸಿನ್ ಸೌಲಭ್ಯ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ನಿನ್ನೆ ಅವರು ಮೈಸೂರಿನಲ್ಲಿ ಕಂಪೆನಿಗೆ ಭೇಟಿ ನೀಡಿ ಉನ್ನತ ಮಟ್ಟದ ತಂಡದೊಂದಿಗೆ ಮಾತುಕತೆ ನಡೆಸಿದರು. ಗ್ರಾಮೀಣ ಪ್ರದೇಶಗಳಿಗೆ ಟೆಲಿಮೆಡಿಸಿನ್ ಸೌಲಭ್ಯವನ್ನು ಕೊಂಡೊಯ್ಯಲು ಸರ್ಕಾರ ಎಲ್ಲಾ ರೀತಿಯ ಯೋಜನೆ ಹಾಕುತ್ತಿದೆ ಎಂದರು. ಐಟಿ ಕಂಪೆನಿಗಳ ಜೊತೆ ಸೇರಿ ಟೆಲಿಮೆಡಿಸಿನ್ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದರು.

ಟೆಲಿಮೆಡಿಸಿನ್ ಸೌಲಭ್ಯಗಳನ್ನು ವಿಸ್ತರಿಸಲು ಕಿಯೋನಿಕ್ಸ್‌ನ ಸಹಯೋಗದೊಂದಿಗೆ ದೂರಸಂಪರ್ಕ ಕೇಂದ್ರವನ್ನು ತೆರೆಯಲು ಬೆಂಬಲ ನೀಡುವಂತೆ ಕಂಪನಿ ಸರ್ಕಾರಕ್ಕೆ ಮನವಿ ಮಾಡಿತ್ತು. "ಹಳ್ಳಿಗಳಿಗೆ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಕೊಂಡೊಯ್ಯಲು ಖುಷಿಯಾಗುತ್ತಿದೆ ಎಂದರು.

ವೈದ್ಯಕೀಯ ಪರಿಣತಿಯನ್ನು ಹೊರತುಪಡಿಸಿ, ನೈಸರ್ಗಿಕ ವಿಪತ್ತುಗಳು ಮತ್ತು ಸಾಂಕ್ರಾಮಿಕ ಸಂದರ್ಭಗಳಲ್ಲಿ ಜನರ ಅಗತ್ಯತೆಗಳನ್ನು ಪರಿಹರಿಸುವಂತಹ ಬೆಂಬಲ ತಂತ್ರಜ್ಞಾನದ ಅವಶ್ಯಕತೆಯಿದೆ. ರಾಜ್ಯ ಸರ್ಕಾರವು ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದೆ, ಮಾಸ್ಕ್, ಸ್ಯಾನಿಟೈಜರ್‌ಗಳು, ವೆಂಟಿಲೇಟರ್‌ಗಳು, ಪರೀಕ್ಷಾ ಕಿಟ್‌ಗಳು, ಪಿಪಿಟಿ ಕಿಟ್‌ಗಳ ಕೊರತೆಯಿಲ್ಲ, ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಕಾರ್ಯಕ್ರಮದಡಿ ಸ್ಥಳೀಯವಾಗಿ ತಯಾರಿಸಲಾಗುತ್ತಿದೆ ಎಂದರು.

ವೆಂಟಿಲೇಟರ್‌ಗಳನ್ನು ತಯಾರಿಸುವಲ್ಲಿ ಸ್ಕನ್‌ರೇ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ.  1 ಲಕ್ಷ ವೆಂಟಿಲೇಟರ್‌ಗಳಿಗೆ ಸರ್ಕಾರ ಆದೇಶ ನೀಡಿತ್ತು. ಈ ಪೈಕಿ 35,000 ವೆಂಟಿಲೇಟರ್‌ಗಳನ್ನು ಈಗಾಗಲೇ ಗಡುವಿಗೆ ಮುಂಚೆಯೇ ಸರಬರಾಜು ಮಾಡಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com