ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಬಸವರಾಜ ಹೊರಟ್ಟಿ

ಉತ್ತರ ಕರ್ನಾಟಕವೆಂದರೆ ಅಸಡ್ಡೆ ಮಾಡುತ್ತಿರುವುದನ್ನು ಬಹಳ ಕಾಲ ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯಮುಖಂಡ, ಮಾಜಿ ಸಚಿವ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಕುಳಿತಿತ ಅಧಿಕಾರಿಗಳಿಗೆ ಉತ್ತರ ಕರ್ನಾಟಕವೆಂದರೆ ಅಲರ್ಜಿ. ಕಛೇರಿಗಳನ್ನು ಸ್ಥಳಾಂತರಿಸುವುದಾಗಲೀ ಉಪಕುಲಪತಿಗಳನ್ನು ನೇಮಕವಾಗಲಿ, ಅಭಿವೃದ್ದಿ ಕೆಲಸಗಳನ್ನು ಮಾಡದೆ ಕಡೆಗಣಿಸಲಾಗುತ್ತಿದೆ ಹೀಗೆಯೇ ತಾರತಮ್ಯ, ಅನ್ಯಾಯ ಮಾಡುತ್ತಿರುವುದನ್ನು ಬಹಳ ಕಾಲ ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯ
ಮುಖಂಡ, ಮಾಜಿ ಸಚಿವ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಉತ್ತರ ಕರ್ನಾಟಕ ದವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಪಟ್ಟ ಕಟ್ಟಬೇಕು ಎಂಬ ಕೂಗು ಕೇಳಿ ಬರುತ್ತಿರುವ ಸಮಯದಲ್ಲೇ ಹೊರಟ್ಟಿ ಅವರು, ಗೃಹಸಚಿವರಿಗೆ ದೀರ್ಘ ಪತ್ರ ಬರೆದು ತಮ್ಮ ನೋವು ,ತೋಡಿಕೊಂಡು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಧಾರವಾಡದ ಉಚ್ಛ ನ್ಯಾಯಾಲಯಕ್ಕೆ ನೇಮಕ ಮಾಡುವದಾಗಲಿ; ಬೋರ್ಡ್, ಕಾರ್ಪೋರೇಶನ್ನಿಗೆ ನೇಮಕ ಮಾಡುವುದಾಗಲಿ, ಕೆ.ಪಿ.ಎಸ್.ಸಿ ಸದಸ್ಯರನ್ನು ನೇಮಿಸುವುದಾಗಲೀ, ಕೆ.ಪಿ.ಎಸ್.ಸಿ. ಯಿಂದ ಕೆ.ಎ.ಎಸ್. ಅಧಿಕಾರಿಗಳನ್ನು ನೇಮಕ ಮಾಡುವುದಾಗಲೀ ಯಾವುದಕ್ಕೂ ಸ್ಪಂದನೆಯೇ ಇಲ್ಲ. ಇದೆ ಕಾರಣಕ್ಕಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲೆಂದು ಅನೇಕ ಜನರ ಹೋರಾಟದ ಕೂಗು ಹುಟ್ಟಲು ಸರ್ಕಾರ ಮತ್ತು ಜಡ್ಡಗಟ್ಟಿದ ಅಧಿಕಾರಿಗಳ ವರ್ತನೆಯೇ ಕಾರಣ ಎಂದು ಅವರು ದೂರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com