ಚಿತ್ರದುರ್ಗ: ಮದ್ಯದಂಗಡಿಗೆ ಎನ್ಒಸಿಗೆ ಒತ್ತಾಯಿಸಿ ಅಬಕಾರಿ ಕಚೇರಿ ಎದುರು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ

ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ಎಂಎಸ್ ಐಎಲ್ ಅಂಗಡಿಗೆ ಎನ್ ಒಸಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಅಬಕಾರಿ ಕಚೇರಿ ಎದುರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ನಡೆಸಿದರು
ಗೂಳಿಹಟ್ಟಿ ಶೇಖರ್
ಗೂಳಿಹಟ್ಟಿ ಶೇಖರ್

ಚಿತ್ರದುರ್ಗ: ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ಎಂಎಸ್ ಐಎಲ್ ಅಂಗಡಿಗೆ ಎನ್ ಒಸಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಅಬಕಾರಿ ಕಚೇರಿ ಎದುರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ನಡೆಸಿದರು.

ಚಿತ್ರದುರ್ಗ ಹೊಸದುರ್ಗ ಪಟ್ಟಣ ಹಾಗೂ ಶ್ರೀರಾಂಪುರ ಗ್ರಾಮಕ್ಕೆ ಕಳೆದ ಎಂಟು ತಿಂಗಳ ಹಿಂದೆ ಎಂಎಸ್ ಐಎಲ್‌ ಮಂಜೂರಾಗಿತ್ತು. ಎನ್ ಒಸಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಅಬಕಾರಿ ಅಧಿಕಾರಿಗಳ ಕ್ರಮಕ್ಕೆ ಸ್ವತಃ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ಧರಣಿ ವಿಷಯ ತಿಳಿದ ಅಬಕಾರಿ ಜಿಲ್ಲಾ ಅಧಿಕಾರಿ ಧರಣಿ ಸ್ಥಳಕ್ಕೆ ದೌಡಾಯಿಸಿದರು.ಕೂಡಲೇ ಕೆಲಸ ಮಾಡಿ ಕೊಡುವುದಾಗಿ ಹೇಳಿ, ಅಬಕಾರಿ ಜಿಲ್ಲಾ ಅಧಿಕಾರಿ ನಾಗಶಯನ ಶಾಸಕರ ಬಳಿ ಕ್ಷಮೆ ಕೇಳಿದ್ದಾರೆ. 

ಅಧಿಕಾರಿ ಕ್ಷಮೆ ಕೇಳಿದ್ದರಿಂದ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ಕೈಬಿಟ್ಟರು, ಹೊಸದುರ್ಗ ಮತ್ತು ರಾಮಪುರಗಳಲ್ಲಿರುವ ಅಂಗಡಿಗಳು ಬಡಜನರನ್ನು ಸುಲಿಗೆ ಮಾಡುತ್ತಿವೆ, ಹೀಗಾಗಿ ಹೊಸದುರ್ಗ ಮತ್ತು ಶ್ರೀರಾಂಪುರಗಳಲ್ಲಿ ಎಂಎಸ್ ಐಎಲ್ ಮಳಿಗೆ ಸ್ಥಾಪಿಸಬೇಕೆಂದು ಗೂಳಿಹಟ್ಟಿ ಶೇಖರ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com