ಶೇ 88ರಷ್ಟು ದೇಶೀಯ ಮಾರ್ಗಗಳಲ್ಲಿ ಹಾರಾಟ ಪುನಾರಂಭಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೋವಿಡ್ ಬರುವುದಕ್ಕೆ ಮುಂಚೆ ಹಾರಾಟ ನಡೆಸುತ್ತಿದ್ದ ಮಾರ್ಗಗಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೇಕಡಾ 88ರಷ್ಟು, ಹಾಗೂ ವಿಮಾನಗಳ ಆಗಮನ-ನಿರ್ಗಮನ ಶೇಕಡಾ 53ರಷ್ಟಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Updated on

ಬೆಂಗಳೂರು: ಕೋವಿಡ್ ಬರುವುದಕ್ಕೆ ಮುಂಚೆ ಹಾರಾಟ ನಡೆಸುತ್ತಿದ್ದ ಮಾರ್ಗಗಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೇಕಡಾ 88ರಷ್ಟು, ಹಾಗೂ ವಿಮಾನಗಳ ಆಗಮನ-ನಿರ್ಗಮನ ಶೇಕಡಾ 53ರಷ್ಟಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಾಹಕರು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ವಿಮಾನ ನಿಲ್ದಾಣ 51 ದೇಶೀಯ ವಿಮಾನಗಳ ಮರು ಸಂಪರ್ಕ ಗುರಿಯನ್ನು ಪೂರ್ವ ಕೋವಿಡ್ ಮಾರ್ಗಗಳಿಗೆ ಶೇಕಡಾ 88ರಷ್ಟು ಸಂಪರ್ಕವನ್ನು ಸಾಧಿಸಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೊರೋನಾ ಲಾಕ್ ಡೌನ್ ಸಡಿಲಿಕೆಯಾದ ನಂತರ ವಂದೇ ಭಾರತ್ ಮಿಷನ್ ನಡಿ ಮತ್ತು ಏರ್ ಬಬ್ಲ್ ಕಾರ್ಯಕ್ರಮದಡಿ ಬೆಂಗಳೂರು ವಿಮಾನ ನಿಲ್ದಾಣದಿಂದ 22 ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸಂಪರ್ಕವನ್ನು ಕಲ್ಪಿಸಿತ್ತು. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ವಿಮಾನಗಳ ಹಾರಾಟ ಸುಧಾರಿಸುತ್ತಾ ಹೋಗಿ ಕಳೆದ ವರ್ಷದ ಶೇಕಡಾ 53ರಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ ಮೆಟ್ರೊ ನಗರಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ದೇಶದಲ್ಲಿ ಅತಿಹೆಚ್ಚು ಸರಕು ವಿಮಾನಗಳ ಹಾರಾಟವಾಗಿದೆ.

ಈ ಹಣಕಾಸು ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ, ವಿಮಾನ ನಿಲ್ದಾಣದ ಸರಕು ಟರ್ಮಿನಲ್‌ಗಳು 131,603 ಮೆಟ್ರಿಕ್ ಟನ್ (ಎಂಟಿ) ಸರಕು ಸಾಗಣೆಯನ್ನು ಸಂಸ್ಕರಿಸಿದವು. ಸೆಪ್ಟೆಂಬರ್‌ನಲ್ಲಿ ಸಂಸ್ಕರಿಸಿದ ಸರಕು 32,449 ಮೆ.ಟನ್, ಇದು 0.3% ಬೆಳವಣಿಗೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ತಿಂಗಳು ಅಂತರರಾಷ್ಟ್ರೀಯ ಸರಕುಗಳಲ್ಲಿ 4.5% ಬೆಳವಣಿಗೆಯನ್ನು ಕಂಡಿದೆ, ಅದರಲ್ಲಿ ರಫ್ತು ಸರಕು 7.6% ರಷ್ಟು ಹೆಚ್ಚಾಗಿದೆ. ಈ ಮಧ್ಯೆ, ದೇಶೀಯ ಸರಕು ನಿಧಾನಗತಿಯ ಚೇತರಿಕೆ ತೋರಿಸುತ್ತಿದೆ ಮತ್ತು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.2% ಕಡಿಮೆಯಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಈ ಅವಧಿಯಲ್ಲಿ ವಿಮಾನ ನಿಲ್ದಾಣವು 17,212 ಮೆಟ್ರಿಕ್ ಟನ್ ಸಂಸ್ಕರಣೆಯೊಂದಿಗೆ ಹಾಳಾಗಬಹುದಾದ ಸರಕು ವಿಮಾನಗಳ ಹಾರಾಟದಲ್ಲಿ ಪ್ರಮುಖ ಬೆಳವಣಿಗೆಯನ್ನು ಕಂಡಿದೆ. ರಫ್ತು ಮಾಡಿದ ವಸ್ತುಗಳ ಪೈಕಿ ದಾಳಿಂಬೆ, ಸಿದ್ಧ ಉಡುಪುಗಳು, ಎಂಜಿನಿಯರಿಂಗ್ ವಸ್ತುಗಳು, ಫಾರ್ಮಾ ಮತ್ತು ವೈದ್ಯಕೀಯ ಸಾಮಗ್ರಿಗಳು ಸೇರಿವೆ. ತಿರುಪುರ್, ಕೊಯಮತ್ತೂರು, ಅಂಬೂರ್, ಸೇಲಂ, ಈರೋಡ್, ಹೈದರಾಬಾದ್ ಮತ್ತು ಚೆನ್ನೈನಂತಹ ನಗರಗಳನ್ನು ಸಂಪರ್ಕಿಸಲು ರಸ್ತೆ ಫೀಡರ್ ಸೇವೆ, ಸ್ಥಳೀಯ ಸಂಪರ್ಕವನ್ನು ಹೆಚ್ಚಿಸಿತು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಖಿಲ ಭಾರತ ಮಾರುಕಟ್ಟೆ ವಾಯು ಸರಕುಗಳನ್ನು ಶೇಕಡಾ 11% ರಿಂದ ಶೇಕಡಾ 14% ಗೆ ಹೆಚ್ಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com