ಕೋವಿಡ್-19: ಮನೆಯಲ್ಲೇ 'ಬಂಧಿ'ಯಾದ ಹಿರಿಯರಿಗೆ ಬಿದ್ದು ಮೂಳೆ ಮುರಿದುಕೊಳ್ಳುವ ಅಪಾಯ ಹೆಚ್ಚು

ಸಾಂಕ್ರಾಮಿಕ ರೋಗವು ಜನರನ್ನು ಮನೆಯಿಂದ ಹೊರಹೋಗದಂತೆ ಮಾಡಿದೆ. ವಿಶೇಷವಾಗಿ ವೃದ್ಧರಿಗೆ ಮನೆಯಲ್ಲೇ ಉಳಿದು ಒಂದು ಬಗೆಯಲ್ಲಿ "ಬಂಧನ"ದಲ್ಲಿರುವಂತಾಗಿದೆ.  ಕೋವಿಡ್ -19 ಭಯದಿಂದ ಮನೆಯೊಳಗೇ ಉಳಿದ ಹಿರಿಯ ನಾಗರಿಕರಿಗೆ ಅವರ ದೈನಂದಿನ ವ್ಯಾಯಾಮ ಚಟುವಟಿಕೆಯನ್ನು ನಿರ್ಬಂಧಿಸಿದೆ. ಇದಲ್ಲದೆ ಈ ಚಟುವಟಿಕೆಗಳ ನಿರ್ಬಂಧದ ಕಾರಣ ಅವರಲ್ಲಿ ಪೈಲ್ಸ್  ಸೊಂಟ ಮತ್ತು ಬೆನ್ನುಮೂಳೆಯ ಮುರಿ
ಕೋವಿಡ್-19: ಮನೆಯಲ್ಲೇ 'ಬಂಧಿ'ಯಾದ ಹಿರಿಯರಿಗೆ ಬಿದ್ದು ಮೂಳೆ ಮುರಿದುಕೊಳ್ಳುವ ಅಪಾಯ ಹೆಚ್ಚು

ಬೆಂಗಳೂರು: ಸಾಂಕ್ರಾಮಿಕ ರೋಗವು ಜನರನ್ನು ಮನೆಯಿಂದ ಹೊರಹೋಗದಂತೆ ಮಾಡಿದೆ. ವಿಶೇಷವಾಗಿ ವೃದ್ಧರಿಗೆ ಮನೆಯಲ್ಲೇ ಉಳಿದು ಒಂದು ಬಗೆಯಲ್ಲಿ "ಬಂಧನ"ದಲ್ಲಿರುವಂತಾಗಿದೆ.  ಕೋವಿಡ್ -19 ಭಯದಿಂದ ಮನೆಯೊಳಗೇ ಉಳಿದ ಹಿರಿಯ ನಾಗರಿಕರಿಗೆ ಅವರ ದೈನಂದಿನ ವ್ಯಾಯಾಮ ಚಟುವಟಿಕೆಯನ್ನು ನಿರ್ಬಂಧಿಸಿದೆ. ಇದಲ್ಲದೆ ಈ ಚಟುವಟಿಕೆಗಳ ನಿರ್ಬಂಧದ ಕಾರಣ ಅವರಲ್ಲಿ ಪೈಲ್ಸ್  ಸೊಂಟ ಮತ್ತು ಬೆನ್ನುಮೂಳೆಯ ಮುರಿತದಂತಹಾ ಸಮಸ್ಯೆಗಳು ಕಾಣಿಸಿಕೊಳ್ಳುವುದು ಪ್ರಾರಂಭವಾಗಿದೆ.

ಇಂಟರ್ನ್ಯಾಷನಲ್ ಆಸ್ಟಿಯೊಪೊರೋಸಿಸ್ ಫೌಂಡೇಶನ್‌ನ ಇತ್ತೀಚಿನ ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ರೋಗವು ಆಸ್ಟಿಯೊಪೊರೋಸಿಸ್ ನಿರ್ವಹಣೆಯ ಮೇಲೆ ಮಹತ್ವದ ಪರಿಣಾಮ ಬೀರಿದೆ.  ಮುಂದಿನ 10 ವರ್ಷಗಳಲ್ಲಿ ಆಸ್ಟಿಯೊಪೊರೋಸಿಸ್ ಇರುವವರಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ಅಳೆಯಲು  ಶೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿದ ಸಾಧನ ನೆರವಾಗಲಿದೆ. ಈ ವರ್ಷ ಫೆಬ್ರವರಿಯಲ್ಲಿ 2,10,656 ಚಿಕಿತ್ಸಾ ಗಂಟೆಗಳು  ದಾಖಲಾಗಿದೆ ಎಂದು ಕಂಡುಬಂದಿದ್ದು ಇದರಲ್ಲಿ ಫಿಜಿಯೋಥೆರಪಿ, ಔಷಧಿ ಹಾಗೂ ಚುಚ್ಚುಮದ್ದುಗಳೂ ಸೇರಿದೆ.

ಅದಾಗ್ಯೂ, ಮಾರ್ಚ್ ಮತ್ತು ಏಪ್ರಿಲ್ ನಲ್ಲಿ , ಈ ಸಂಖ್ಯೆ ಕ್ರಮವಾಗಿ 23% ಮತ್ತು 58% ರಷ್ಟು ಕುಸಿಯಿತು, ಕಳೆದ ತಿಂಗಳು, 70 ವರ್ಷದ ವ್ಯಕ್ತಿಯೊಬ್ಬರು ಸ್ನಾನಗೃಹದಲ್ಲಿ ಬಿದ್ದ ನಂತರ ಸೊಂಟ ಮುರಿತಕ್ಕೆ ಒಳಗಾದರು. ಅವರು ತಕ್ಷಣ  ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಅವರಿಗೆ ಆರು ವಾರಗಳ ಕಾಲ ಬೆಡ್ ರೆಸ್ಟ್ ನೀಡಬೇಕೆಂದು ಸೂಚಿಸಲಾಯಿತು, ಇದು ಆಸ್ಟಿಯೊಪೊರೋಸಿಸ್ ಇರುವವರಿಗೆ ಕೆಟ್ಟ ಪರಿನಾಮ ಬೀರುತ್ತದೆ, ಏಕೆಂದರೆ ಆಸ್ಟಿಯೊಪೊರೋಸಿಸ್ ಇರುವವರು ಯಾವಾಗಲೂ ಸಕ್ರಿಯವಾಗಿರಬೇಕು

"ಅನೇಕ ಜನರು ಮನೆ ಕೆಲಸದವರು , ದಾದಿಯರು ಮತ್ತು ಫಿಜಿಯೋಥೆರಪಿಸ್ಟ್ ಗಳನ್ನು ಮನೆಗಳಿಗೆ ಭೇಟಿ ಕೊಡುವುದನ್ನು ನಿರ್ಬಂಧಿಸಿದ್ದಾರೆ. ಇವರಾರ ಯಾವುದೇ ಬೆಂಬಲವಿಲ್ಲದೆ, ಆಸ್ಟಿಯೊಪೊರೋಸಿಸ್ ರೋಗಿಗಳಲ್ಲಿ ಹೆಚ್ಚಿದ ಕುಸಿತದ ಪ್ರಮಾಣವನ್ನು ನಾವು ನೋಡುತ್ತೇವೆ. ಮನೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅರ್ಧ ಗಂಟೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಹಿರಿಯ ನಾಗರಿಕರಿಗೆ ಅಗತ್ಯವಾಗಿದೆ. ”ಎಂದು ಆಸ್ಟರ್ ಆರ್ ವಿ ಆಸ್ಪತ್ರೆಯ ಮೂಳೆಚಿಕಿತ್ಸಕ ಡಾ. ಜೆ ವಿ ಶ್ರೀನಿವಾಸ್ ಹೇಳಿದರು.

ಚಲನೆ ಮತ್ತು ಸ್ನೇಹ ಮಿಲನಗಳ ಮೇಲಿನ ನಿರ್ಬಂಧವು ಅವರ ಯೋಗಕ್ಷೇಮದ ಮೇಲೂ ಪರಿಣಾಮ ಬೀರಿದೆ ಎಂದು ಏಸ್ ಸುಹಾಸ್ ಆಸ್ಪತ್ರೆಯ ಸಿಇಒ ಡಾ.ಜಗದೀಶ್ ಹಿರೆಮಠ್ ಹೇಳ್ಳೀದ್ದಾರೆ.

“ಜಿಮ್‌ಗಳು ಮತ್ತು ಗ್ತೂಪ್ ಎಕ್ಸರ್ಸೈಸ್  ತರಗತಿಗಳಂತಹ ದೊಡ್ಡ ಕೂಟಗಳನ್ನು ತಪ್ಪಿಸುವುದು ಮೂಳೆ ಮುರಿತದಂತಹಾ  ಸಹಜ ಅಪಾಯವನ್ನು ಹೆಚ್ಚಿಸಿದೆ. "ಆಸ್ಟಿಯೊಪೊರೋಸಿಸ್ ರೋಗಿಗಳು ಕೋವಿಡ್ -19  ಅಪಾಯವನ್ನು ಹೊಂದಿರುತ್ತಾರೆ. ಅಂತಹವರಿಗೆ ಮನೆಯ ವಾತಾವರಣವು ಗೊಂದಲ ಮತ್ತು ಅಡೆತಡೆಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಹೊರಾಂಗಣದಲ್ಲಿ ನಡೆಯುವಾಗ ಕಾಳಜಿ ವಹಿಸಬೇಕು. ಅಲ್ಲದೆ ಯಾರೂ ತಮಗೆ ಸೂಚಿಸಲಾಗಿರುವ ಸೂಚಿಸಲಾದ ಚಿಕಿತ್ಸೆಯನ್ನು ನಿಲ್ಲಿಸಬಾರದು"

"ಜಂಕ್ ಫುಡ್ ಸೇವನೆ, ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯಿಂದ ತೂಕ ಹೆಚ್ಚಾಗುವುದರಿಂದ ಸಾಂಕ್ರಾಮಿಕ ರೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ" ಎಂದು ಬೆಂಗಳೂರಿನ ರಾಧಾ ಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿದ್ಯಾ ವಿ ಭಟ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com