ರಾಜ್ಯ
ವಿಜಯಪುರ: ಪುತ್ರನ ಜೀವ ಉಳಿಸಲು ಮುಂದಾಗಿದ್ದ ತಾಯಿಯೂ ನೀರುಪಾಲು
ಪುತ್ರನ ಜೀವ ಉಳಿಸಲು ಮುಂದಾಗಿದ್ದ ತಾಯಿಯೂ ಮಗನೊಂದಿಗೆ ಮೃತಪಟ್ಟಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಂಡಾ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ವರದಿಯಾಗಿದೆ.
ವಿಜಯಪುರ: ಪುತ್ರನ ಜೀವ ಉಳಿಸಲು ಮುಂದಾಗಿದ್ದ ತಾಯಿಯೂ ಮಗನೊಂದಿಗೆ ಮೃತಪಟ್ಟಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಂಡಾ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ವರದಿಯಾಗಿದೆ.
ನಿಡಗುಂದಿಯ ನಿವಾಸಿಗಳಾದ ಅಂಜನಾ ಕೊಂಚಿಕೊರವರ(28) ನಾಗೇಶ್(8) ಮೃತ ದುರ್ದೈವಿಗಳು.
ಬಟ್ಟೆ ತೊಳೆಯಲು ಹೋದಾಗ ದುರ್ಘಟನೆ ಸಂಭವಿಸಿದ್ದು ಕಾಲುವೆಯಲ್ಲಿ ಈಜಲು ಮುಂದಾದ ನಾಗೇಶ್ ನೀರಲ್ಲಿ ಮುಳಿಗಿದಾಗ ತಾಯಿ ಅಂಜನಾ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ರಕ್ಷಣೆ ಸಾಧ್ಯವಾಗದೆ ಆಕೆಯೂ ನೀರುಪಾಲಾಗಿದ್ದಾಳೆ.


