ಹಂಪಿಗೆ ಹೊರಟಿರಾ? ಹಾಗಿದ್ದರೆ ಮೊದಲು ನೀವು ಈಮೇಲ್ ಹೊಂದಿದ್ದೀರೆಂದು ಖಚಿತಪಡಿಸಿಕೊಳ್ಳಿ!

ನೀವು ಯಾವಾಗಲಾದರೂ ಬಳ್ಳಾರಿ ಜಿಲ್ಲೆಯ ಹಂಪಿಯ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡು್ತ್ತೀರಾದರೆ ನಿಮಗೆ ಇಮೇಲ್ ಖಾತೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಅಧಿಕಾರಿಗಳು ಈಗ ಬಾರ್ ಕೋಡ್ ಟಿಕೆಟ್‌ಗಳನ್ನು ನೀಡುತ್ತಿದ್ದು ಅದನ್ನು ಪ್ರವಾಸಿಗರ ಇಮೇಲ್ ಖಾತೆಗಳಿಗೆ ಕಳುಹಿಸಲಾಗುತ್ತದೆ.
ಕಲ್ಲಿನ ರಥ
ಕಲ್ಲಿನ ರಥ

ಬಳ್ಳಾರಿ: ನೀವು ಯಾವಾಗಲಾದರೂ ಬಳ್ಳಾರಿ ಜಿಲ್ಲೆಯ ಹಂಪಿಯ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡು್ತ್ತೀರಾದರೆ ನಿಮಗೆ ಇಮೇಲ್ ಖಾತೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಅಧಿಕಾರಿಗಳು ಈಗ ಬಾರ್ ಕೋಡ್ ಟಿಕೆಟ್‌ಗಳನ್ನು ನೀಡುತ್ತಿದ್ದು ಅದನ್ನು ಪ್ರವಾಸಿಗರ ಇಮೇಲ್ ಖಾತೆಗಳಿಗೆ ಕಳುಹಿಸಲಾಗುತ್ತದೆ.

ಆದರೆ ಕೆಲವು ವಾರಗಳ ಹಿಂದೆ ಪರಿಚಯಿಸಲಾದ ಹೊಸ ವ್ಯವಸ್ಥೆಯು ಹಂಪಿಗೆ ಭೇಟಿ ನೀಡುವವರೆಲ್ಲರ ಬಳಿ  ಸ್ಮಾರ್ಟ್‌ಫೋನ್‌ಗಳಿಲ್ಲದ ಕಾರಣಹಲವಾರು ಪ್ರವಾಸಿಗರನ್ನು ನಿರಾಶೆಗೊಳಿಸಿದೆ. ಇದಲ್ಲದೆ, ಪ್ರವಾಸೀ ತಾಣದಲ್ಲಿ ಕೆಲ ಸ್ಮಾರಕಗಳಿರುವ ಪ್ರದೇಶ  ಕಳಪೆ ಮೊಬೈಲ್ ಸಂಪರ್ಕವನ್ನು ಹೊಂದಿವೆ.  ಇದಲ್ಲದೆ ಕೆಲ ಪ್ರವಾಸಿಗರು ಎಲ್ಲಾ ಸ್ಮಾರಕಗಳನ್ನೂ ವೀಕ್ಷಿಸದೆಯೂ ಹಿಂದಕ್ಕೆ ಕಳುಹಿಸಿದ ಉದಾಹರಣೆಗಳಿದೆ. ಕೆಲ ಪ್ರವಾಸಿಗರು ತಾವು ದೇವಾಲಯಕ್ಕೆ ತೆರಳಲು ಇತರೆ ಪ್ರವಾಸಿಗರ ಬಳಿ ಇದ್ದ ಮೇಲ್ ನಲ್ಲಿರುವ ಟಿಕೆಟ್ ಗಾಗಿ ಬೇಡಿಕೆ ಇಡುತ್ತಿದ್ದದ್ದು ಕಂಡು ಬಂದಿದೆ.

ಪ್ರಸಿದ್ಧ ಕಲ್ಲಿನ ರಥ ಇರುವ ವಿಜಯ ವಿಟ್ಠಲ ದೇವಾಲಯ ಸಂಕೀರ್ಣಕ್ಕೆ ಬರುವ ಪ್ರವಾಸಿಗರು ಈ ಸ್ಥಳದಲ್ಲಿ  ಮೊಬೈಲ್ ಸಿಗ್ನಲ್‌ಗಳು ಕಾರ್ಯನಿರ್ವಹಿಸದ ಕಾರಣ ಹೆಚ್ಚು ತೊಂದರೆಗೆ ಸಿಕ್ಕಿದ್ದಾರೆ. . ಈ ದೇವಾಲಯ ಸಂಕೀರ್ಣವನ್ನು ತಲುಪಲು, ಇಲ್ಲಿ ವಾಹನಗಳಿಗೆ ಅನುಮತಿ ಇಲ್ಲದ ಕಾರಣ ಒಂದು ಮೈಲಿ ನಡೆದು ಹೋಗಬೇಕು ಅಥವಾ ವಿದ್ಯುತ್ ವಾಹನಗಳಲ್ಲಿ ಸವಾರಿ ಮಾಡಬೇಕು. ದೇವಾಲಯದ ಸಂಕೀರ್ಣವನ್ನು ತಲುಪಿದ ನಂತರ, ಪ್ರವಾಸಿಗರ ನಿಜವಾದ ಅಗ್ನಿಪರೀಕ್ಷೆ ಪ್ರಾರಂಭವಾಗುತ್ತದೆ.

"ಇಮೇಲ್‌ಗಳು ಮತ್ತು ಸ್ವೀಕರಿಸುವ ಕೋಡ್ ಬಗ್ಗೆ ನಮಗೆ ತಿಳಿದಿರಲಿಲ್ಲ. ಅಧಿಕಾರಿಗಳು ಎಸ್‌ಎಂಎಸ್  ಮಾಡಿರುವ ಕೋಡ್ ಸಿಸ್ಟಮ್‌ಗಳನ್ನು ಬಳಸಿಕೊಂಡು ಅದನ್ನು ಸರಳೀಕರಿಸಬಹುದಿತ್ತು. ಇದರರ್ಥ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರದವರು ಹಂಪಿ ಸ್ಮಾರಕಗಳನ್ನು ನೋಡಲಾಗುವುದಿಲ್ಲ. ಕೆಲವು ವಾರಗಳ ಹಿಂದೆ ಅಧಿಕಾರಿಗಳು ಟಿಕೆಟ್ ನೀಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಮೊದಲಿನಂತೆಯೇ ನಗದು ಪಾವತಿ ಟಿಕೆಟ್ ವ್ಯವಸ್ಥೆ ಮರುಜಾರಿಯಾಗಬೇಕು ಎಂದು  ನಾವು ಒತ್ತಾಯಿಸುತ್ತೇವೆ "ಎಂದು ವಿಜಯ ವಿಟ್ಠಲ ದೇವಸ್ಥಾನ ನೋಡಲು ಬಂದೂ ನೋಡಲಾಗದೆ  ಕುಟುಂಬದೊಂದಿಗೆ ಮರಳಿದ ಪ್ರವಾಸಿಗರು ಹೇಳಿದ್ದಾರೆ.

"ಸಾಂಕ್ರಾಮಿಕ ರೋಗದ ಮೊದಲು, ಪ್ರತಿ ತಿಂಗಳು ಸುಮಾರು 4,000 ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಈ ಸಂಖ್ಯೆಯು ತೀವ್ರವಾಗಿ ಕುಸಿದಿದೆ.  ಈ ರೀತಿಯ ಹೊಸ ನಿಯಮ ಜಾರಿಯಾದರೆ ಹಂಪಿ ಪ್ರವಾಇಸ್ಗರ ಸಂಖ್ಯೆ ಇನ್ನಷ್ಟು ಕಡಿಮೆಯಾಗುತ್ತದೆ. . ಬೈಸಿಕಲ್, ಆಹಾರ ಮತ್ತು ವಸತಿ ಸೌಕರ್ಯಗಳನ್ನು ನೀಡುವ ಹಲವಾರು ಸ್ಥಳೀಯ ಅಂಗಡಿಗಳು ಪ್ರವಾಸಿಗರಿಲ್ಲದೆ ಮುಚ್ಚಿದೆ. " ಹಂಪಿ ಸ್ಥಳೀಯ ಉದ್ಯಮಿಯೊಬ್ಬರು ಹೇಳಿದ್ದಾರೆ.

ಆದಾಗ್ಯೂ, ಅಧಿಕಾರಿಗಳು ಮಾತ್ರ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು ಮತ್ತು ಸಾಂಕ್ರಾಮಿಕ ರೋಗದ ಮಧ್ಯೆ ಎಎಸ್ಐ ಸ್ಮಾರಕಗಳನ್ನು ಪುನಃ ತೆರೆಯಲು ಕೇಂದ್ರದಿಂದ ಹೊಸ ಮಾರ್ಗಸೂಚಿಗಳು ಬಂದಿವೆ  ಎಂದರು. "ಕೇಂದ್ರದ ಆದೇಶದಂತೆ ಹೊಸ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ. ಪ್ರವಾಸಿಗರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಾವು ಅದನ್ನು ಪರಿಶೀಲಿಸುತ್ತೇವೆ. ಕೆಲವು ಪ್ರದೇಶಗಳಲ್ಲಿ ಮೊಬೈಲ್  ಸಿಗ್ನಲ್ ತೊಂದರೆ ಇದೆ. ಆದ್ದರಿಂದ ಸಂಪರ್ಕ ಹೊಂದಿರುವ ಪ್ರದೇಶಗಳಿಂದ ಟಿಕೆಟ್ ಕಾಯ್ದಿರಿಸಲು ಪ್ರವಾಸಿಗರಿಗೆ ನಾವು ಸಲಹೆ ನೀಡುತ್ತಿದ್ದೇವೆ " ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com