ಮಲಪ್ರಭೆ ಉಳಿವುಗಾಗಿ 17 ವರ್ಷಗಳಿಂಡ ಹೋರಾಡುತ್ತಿರುವ ವೈದ್ಯೆ

ರಾಮದುರ್ಗಾದ ಮಹಿಳಾ ವೈದ್ಯೆ-ಪರಿಸರವಾದಿ ಮಲಪ್ರಭಾ ನದಿಯನ್ನು ರಕ್ಷಿಸಲು 17 ವರ್ಷಗಳಿಂದ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.  ಡಾ.ಪೂರ್ಣಿಮಾ ಗೌರೋಜಿ ಅವರು ನದಿಯ ಮೇಲಿನ  ಮಾನವನ ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ಹೂಳು ಮುಕ್ತವಾಗಿಸಲು ದಣಿವರಿರಿಯದೆ  ಕೆಲಸ ಮಾಡುತ್ತಿದ್ದಾರೆ. ಸಬರಮತಿಯ  ಮಾದರಿಯಲ್ಲಿ  ಮಲಪ್ರಭವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಪೂರ್
ಡಾ. ಪೂರ್ಣಿಮಾ
ಡಾ. ಪೂರ್ಣಿಮಾ

ಬಾಗಲಕೋಟೆ: ರಾಮದುರ್ಗಾದ ಮಹಿಳಾ ವೈದ್ಯೆ-ಪರಿಸರವಾದಿ ಮಲಪ್ರಭಾ ನದಿಯನ್ನು ರಕ್ಷಿಸಲು 17 ವರ್ಷಗಳಿಂದ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.  ಡಾ.ಪೂರ್ಣಿಮಾ ಗೌರೋಜಿ ಅವರು ನದಿಯ ಮೇಲಿನ  ಮಾನವನ ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ಹೂಳು ಮುಕ್ತವಾಗಿಸಲು ದಣಿವರಿರಿಯದೆ  ಕೆಲಸ ಮಾಡುತ್ತಿದ್ದಾರೆ. ಸಬರಮತಿಯ  ಮಾದರಿಯಲ್ಲಿ  ಮಲಪ್ರಭವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಪೂರ್ಣಿಮಾ ಅವರು ರಾಮದುರ್ಗ ಪಟ್ಟಣಕ್ಕೆ ಕುಡಿಯಲು ಯೋಗ್ಯವಾದ ನೀರು ಮತ್ತು ಮಲಪ್ರಭಾ ಪುನಶ್ಚೇತನಕ್ಕೆ ಕೋರಿ 2003 ರಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು

ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗೇಂದ್ರ ಕುಮಾರ್ ಜೈನ್ ಅವರು ನದಿಗೆ ಪುನಶ್ಚೇತನ ಮತ್ತು ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ನದಿಯನ್ನು ಸ್ವಚ್ಚಗೊಳಿಸಿಉವ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಳು, ಒಂದು ವರ್ಷದೊಳಗೆ ರಾಮದುರ್ಗದಲ್ಲಿ ಸುಮಾರು 5 ಕೋಟಿ ರೂ ವೆಚ್ಚದನೀರಿನ ಶುದ್ಧೀಕರಣ ಘಟಕವನ್ನು ಸ್ಥಾಪಿಸಿತು.

ನ್ಯಾಯಾಲಯದ ಆದೇಶದ ಮೇರೆಗೆ, ಪಟ್ಟಣದ ಹೊರವಲಯದಲ್ಲಿರುವ ನದಿಯ ಪುನಶ್ಚೇತನ  ಕಾರ್ಯವನ್ನು ಸಹ ಮೊದಲ ಹಂತದಲ್ಲಿ 7 ಕೋಟಿ ರೂ. ನಲ್ಲಿ ಕೈಗೊಳ್ಳಲಾಗಿತ್ತು.  ಆದಾಗ್ಯೂ, ಅಗತ್ಯವಿರುವ 172 ಕಿ.ಮೀ  ಬದಲು ಕೇವಲ  7 ಕಿ.ಮೀ ದೂರ ಕ್ರಮಿಸಿದ ನಂತರ ಅದೇ ವರ್ಷ ಸ್ಥಗಿತಗೊಂಡಿದ್ದ ಕೆಲಸವನ್ನು ಪೂರ್ಣಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. "ಅಧಿಕಾರಿಗಳು ಕೇವಲ 7 ಕಿ.ಮೀ ದೂರದ ನದಿಯನ್ನು ಮಾತ್ರ ಸ್ವಚ್ಚಗೊಳಿಸಿದ್ದಾರೆ. ಅದೂ ಅಷ್ಟೊಂದು ಉತ್ತಮವಾಗಿರಲಿಲ್ಲ ಈ ಸಂಬಂಧ ನಾನು 2017 ರಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ”ಎಂದು ಡಾ.ಪೂರ್ಣಿಮಾ ಪತ್ರಿಕೆಗೆ ಹೇಳಿದ್ದಾರೆ.

ಲೋಕಾಯುಕ್ತರು ಸ್ವಚ್ಚತಾ ಕಾರ್ಯಾನುಷ್ಟಾನದ ಪ್ರಾಧಿಕಾರಕ್ಕೆ ನೋಟಿಸ್‌ಗಳನ್ನು ಸಲ್ಲಿಸಿದರು ಮತ್ತು ನೀರಾವರಿ ಇಲಾಖೆಯಿಂದ ನವಿಲುತೀರ್ಥ ಅಣೆಕಟ್ಟಿನಿಂದ ಕೂಡಲಸಂಗಮಕ್ಕೆ ನದಿ ಅತಿಕ್ರಮಣ ಕುರಿತು ವರದಿಯನ್ನು ಕೋರಿದರು, ನಂತರ ಅದನ್ನು ಬೆಳಗಾವಿಯ  ಪ್ರಾದೇಶಿಕ ಆಯುಕ್ತರಿಂದ ಕೋರಿದರು. ನಂತರದವರು ಸಮೀಕ್ಷೆಯ ವರದಿಯನ್ನು ಸಲ್ಲಿಸುವಂತೆ ಗದಗ, ಬೆಳಗಾವಿ ಹಾಗೂ ಬಾಗಲಕೋಟೆ  ಡಿಸಿಗಳಿಗೆ ನಿರ್ದೇಶನ ನೀಡಿದರು. ಮೂಲಗಳ ಪ್ರಕಾರ, "ಪ್ರಾದೇಶಿಕ ಆಯುಕ್ತರು ಲೋಕಾಯುಕ್ತಕ್ಕೆ ವರದಿಯನ್ನು ಸಲ್ಲಿಸಿದ್ದು, ಆಯಾ ಜಿಲ್ಲಾಡಳಿತಗಳು ಇತ್ತೀಚೆಗೆ ಸಮೀಕ್ಷಾ ವರದಿಯನ್ನು ಸಲ್ಲಿಸುವಲ್ಲಿ ವಿಫಲವಾಗಿವೆ."

“ನೂರಾರು ಎಕರೆ ನದಿ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಲಾಗಿದೆ. ಇದೇ ಕೆಲಸಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ಕಿ.ಮೀ.ಗೆ 1 ಕೋಟಿ ರೂ ನೀಡಲಿದ್ದು ಇದು ಸರ್ಕಾರಕ್ಕೆ ಹೊರೆಯಾಗಿದ್ದರೆ ಅವರು ಕೇಂದ್ರದ ಸಹಾಯವನ್ನು ಪಡೆಯಬಹುದು, ”ಎಂದು ಡಾ.ಪೂರ್ಣಿಮಾ ಹೇಳಿದರು. ಅವರು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರೂ ಕಳೆದ 15 ವರ್ಷಗಳಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಅವರು ತಮ್ಮ ಆಳಲು ತೋಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com