ಕೋವಿಡ್-19 ಭಯಕ್ಕೆ ಹಿರಿಯ ನಾಗರಿಕರೇ, ನಿಮಗೆ ನೀವೇ ಔಷಧಿ ತೆಗೆದುಕೊಳ್ಳುತ್ತಿದ್ದೀರಾ, ಎಚ್ಚರ!

ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರ ಮಧ್ಯೆ ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಹಲವು ಹಿರಿಯ ನಾಗರಿಕರು ವೈದ್ಯರುಗಳ ಸಲಹೆ ಇಲ್ಲದೆ ಸತತವಾಗಿ ಐದಕ್ಕಿಂತ ಹೆಚ್ಚು ಮಾತ್ರೆಗಳನ್ನು ಸೇವಿಸುತ್ತಿದ್ದು, ಇದರಿಂದ ತೀವ್ರ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರ ಮಧ್ಯೆ ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಹಲವು ಹಿರಿಯ ನಾಗರಿಕರು ವೈದ್ಯರುಗಳ ಸಲಹೆ ಇಲ್ಲದೆ ಸತತವಾಗಿ ಐದಕ್ಕಿಂತ ಹೆಚ್ಚು ಮಾತ್ರೆಗಳನ್ನು ಸೇವಿಸುತ್ತಿದ್ದು, ಇದರಿಂದ ತೀವ್ರ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಕೋವಿಡ್-19 ಹಲವರಲ್ಲಿ ಮಾನಸಿಕವಾಗಿ ಭಯ ಮತ್ತು ಆತಂಕವವನ್ನುಂಟುಮಾಡುತ್ತಿದೆ. ಹಲವರು ರೋಗ ಲಕ್ಷಣ ಕಂಡುಬಂದರೂ ವೈದ್ಯರಲ್ಲಿ ಪರೀಕ್ಷೆಗೆ ಹೋಗದೆ ತಾವೇ ಮನೆಯಲ್ಲಿ ಮದ್ದು ಮಾಡಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ನಲ್ಲಿ ಬಂದ ಸಂದೇಶಗಳು, ಫಾರ್ಮಸಿಗಳ ಜಾಹೀರಾತುಗಳು, ತಮ್ಮ ಮಕ್ಕಳ ಉಚಿತ ಸಲಹೆಗಳನ್ನು ಪಡೆದು ಔಷಧ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅವರ ಆರೋಗ್ಯ ಸಮಸ್ಯೆಗೆ ಸರಿಯಾದ ಔಷಧಿ ದೇಹಕ್ಕೆ ಸಿಗದೆ, ಅನುಪಯುಕ್ತ ಔಷಧಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುವುದರಿಂದ ಅವುಗಳು ದೇಹಕ್ಕೆ ಒಳ್ಳೆಯದು ಮಾಡುವುದಕ್ಕಿಂತ ಹಾಳು ಮಾಡುವುದೇ ಅಧಿಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇತ್ತೀಚೆಗೆ 60 ವರ್ಷದವರೊಬ್ಬರಿಗೆ ಮೈಕೈ ನೋವು, ಜ್ವರ, ಬೇಧಿ ಉಂಟಾಗಿತ್ತು. ಆಗ ವೈದ್ಯರನ್ನು ಸಂಪರ್ಕಿಸದೆ ತಮ್ಮಷ್ಟಕ್ಕೆ ಔಷಧ ತೆಗೆದುಕೊಳ್ಳಲು ಆರಂಭಿಸಿದರು. ಅವರ ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು, ನಂತರ ಹೋಗಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂತು. ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಏಸ್ಟರ್ ಸಿಎಂಐ ಆಸ್ಪತ್ರೆಯ ಆಂತರಿಕ ವಿಭಾಗದ ಹಿರಿಯ ಸಲಹೆಗಾರ್ತಿ ಡಾ ಬಿಂದುಮತಿ ಪಿ ಎಲ್, ಯಾರಾದರೂ ಹುಷಾರಿಲ್ಲದಾದರೆ ಗೂಗಲ್ ನಲ್ಲಿ ಹುಡುಕಿ ಚಿಕಿತ್ಸೆ ಏನು ಪಡೆಯುವುದು ಎಂದು ನೋಡಿಕೊಂಡು ಅದರಂತೆ ಮಾಡುತ್ತಾರೆ ಎನ್ನುತ್ತಾರೆ.

ಆದರೆ ತಮ್ಮಷ್ಟಕ್ಕೆ ಮಾಡಿದ ಔಷದೋಪಚಾರ ಪ್ರತಿಸಲ ಸರಿಯಾಗುವುದಿಲ್ಲ. ದೀರ್ಘಕಾಲದಲ್ಲಿ ಬೇರೆ ಆರೋಗ್ಯ ಸಮಸ್ಯೆಯನ್ನು ತರಬಹುದು ಎನ್ನುತ್ತಾರೆ ಅಪೊಲೊ ಆಸ್ಪತ್ರೆಯ ಡಾ ರವೀಂದ್ರ ಎಂ ಮೆಹ್ತಾ. ಕೋವಿಡ್-19ಗೆ ಹೆದರಿ ಸೋಂಕು ತಗಲಬಾರದೆಂದು ವಿಟಮಿನ್ ಸಿ ಮತ್ತು ಝಿಂಕ್ ಮಾತ್ರೆಗಳನ್ನು ಸೇವಿಸುತ್ತಾರೆ.ಹಲವು ದಿನಗಳವರೆಗೆ ಸೇವಿಸುತ್ತಾರೆ. ಆದರೆ ಇದರಿಂದ ದೇಹಕ್ಕೆ ದುಷ್ಪರಿಣಾಮಗಳೇ ಹೆಚ್ಚು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com