ಹುಬ್ಬಳ್ಳಿ: ಕೋವಿಡ್ ಪಾಸಿಟಿವ್ ಬಂದ 100ಕ್ಕೂ ಹೆಚ್ಚಿನ ಮಹಿಳೆಯರಿಗೆ ಕಿಮ್ಸ್ ನಲ್ಲಿ ಹೆರಿಗೆ

ಕೋವಿಡ್ -19 ಆಸ್ಪತ್ರೆಯೂ ಆಗಿರುವ ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಇದುವರೆಗೆ 100 ಕ್ಕೂ ಹೆಚ್ಚು ಕೊರೋನಾವೈರಸ್ ಸಕಾರಾತ್ಮಕ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸಿ ಶಿಶುಗಳನ್ನು ಸುರಕ್ಷಿತವಾಗಿ ಕಾಪಾಡಿದೆ. 
ಕಿಮ್ಸ್
ಕಿಮ್ಸ್
Updated on

ಹುಬ್ಬಳ್ಳಿ: ಕೋವಿಡ್ -19 ಆಸ್ಪತ್ರೆಯೂ ಆಗಿರುವ ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಇದುವರೆಗೆ 100 ಕ್ಕೂ ಹೆಚ್ಚು ಕೊರೋನಾವೈರಸ್ ಸಕಾರಾತ್ಮಕ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸಿ ಶಿಶುಗಳನ್ನು ಸುರಕ್ಷಿತವಾಗಿ ಕಾಪಾಡಿದೆ. 

ಸೆಪ್ಟೆಂಬರ್ 13 ರವರೆಗೆ ಕಿಮ್ಸ್ ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ನಿರ್ವಹಿಸಿದ ಇಂತಹ 101ಹೆರಿಗೆಗಳಲ್ಲಿ  35 ಸಾಮಾನ್ಯ ಹೆರಿಗೆಗಳಲ್ಲಿ ಅವಳಿ ಮಕ್ಕಳು ಜನ್ಮಿಸಿದೆ. ಇದಲ್ಲದೆ 66 ಸಿಸೇರಿಯನ್ ಹೆರಿಗೆಗಳು ನಡೆದಿದೆ. ನಾಲ್ಕು ಗಂಭೀರ ಸ್ವರೂಪದ ಹೆರಿಗೆ ನಡೆದಿದ್ದು ಇದರಲ್ಲಿ ಮೂವರು ತಾಯಂದಿರ ಸಾವು ಸಂಭವಿಸಿದೆ.

ಆರಂಭದಲ್ಲಿ, ವೈದ್ಯರಲ್ಲಿ ಕೋವಿಡ್ -19 ಬಗ್ಗೆ ಭಯವಿತ್ತು. ಎಲ್ಲರ ಸುರಕ್ಷತೆಗಾಗಿ ಸಿಸೇರಿಯನ್ ಬಗ್ಗೆ ನಿರ್ಧಾರವನ್ನು ಆಗ ತೆಗೆದುಕೊಳ್ಳಲಾಯಿತು, ಮತ್ತು ಇತರ ಆಸ್ಪತ್ರೆಗಳು ಉಲ್ಲೇಖಿಸಿದ್ದ ತೊಂದರೆಗಳ  ಪ್ರಕರಣಗಳ ಸಂಖ್ಯೆಯೂ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಹೆರಿಗೆಗಳ ಸಂಖ್ಯೆ ಹೆಚ್ಚಾಗಿದೆ.  ಒಂದು ನವಜಾತ ಶಿಶು ಮಾತ್ರ ಕೋವಿಡ್ -19 ಪಾಸಿಟಿವ್ ವರದಿ ಪಡೆದಿದೆ. ಎಂದು  ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂತರತಾನಿ ಹೇಳಿದ್ದಾರೆ.

ಕೋವಿಡ್ ಪೂರ್ವದಲ್ಲಿ, ಕಿಮ್ಸ್ ತಿಂಗಳಿಗೆ 1,000 ಹೆರಿಗೆಗಳನ್ನು ನಿರ್ವಹಿಸುತ್ತಿತ್ತು ಕೊರೋನಾ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡುತ್ತಿರುವುದರಿಂದ ಕೆಲವು ಜನರು ಈಗ ಕಿಮ್ಸ್‌ಗೆ ಬರಲು ಹೆದರುತ್ತಿದ್ದಾರೆ, ಈ ಸಂಖ್ಯೆ ಈಗ 800 ಆಗಿದೆ, ಸಂಕೀರ್ಣ ಸಮಸ್ಯೆಗಳಿರುವ ರೋಗಿಗಳನ್ನು ಸುತ್ತಮುತ್ತಲಿನ ಜಿಲ್ಲೆಗಳಿಂದ ಇಲ್ಲಿಗೆ ಕರೆತರಲಾಗುತ್ತದೆ. ಹಾಗಾಗಿ ಕೋವಿಡ್ -19 ಸಾವುಗಳು ಕಿಮ್ಸ್‌ನಲ್ಲಿ ತುಲನಾತ್ಮಕವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. 

10 ಹೌಸ್ ಸರ್ಜನ್ ಗಳು ಎಂಟು ಸ್ನಾತಕೋತ್ತರ ವಿದ್ಯಾರ್ಥಿಗಳು, ಮೂವರು ಸಿಬ್ಬಂದಿ ದಾದಿಯರು ಮತ್ತು ಇಲಾಖೆಯ ಇತರ ಇಬ್ಬರು ಸಿಬ್ಬಂದಿಗಳು ಈ ವೈರಸ್‌ಗೆ ತುತ್ತಾಗಿದ್ದಾರೆ ಮತ್ತು ಅವರು ಚೇತರಿಸಿಕೊಂಡ ನಂತರ ಮತ್ತೆ ಕರ್ತವ್ಯಕ್ಕೆ ಬಂದಿದ್ದಾರೆ ಎಂದು ಕಿಮ್ಸ್ ಒಬಿಜಿ ವಿಭಾಗದ ಮುಖ್ಯಸ್ಥ ಕಸ್ತೂರಿ ಡೊನಿಮಠ್ ಹೇಳಿದ್ದಾರೆ.

ಕಿಮ್ಸ್ ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ವಾರಿ ಅವರು, 66 ಕೋವಿಡ್ -19 ಸಕಾರಾತ್ಮಕ ಮಕ್ಕಳಿಗೆ ಈವರೆಗೆ ಚಿಕಿತ್ಸೆ ನೀಡಲಾಗಿದ್ದು, ಸೌಮ್ಯ ಲಕ್ಷಣಗಳಿರುವ 10 ಮಕ್ಕಳು ಸೇರಿದಂತೆ ಎಲ್ಲರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕೋವಿಡ್ -19 ರಕ್ತ ಹೆಪ್ಪುಗಟ್ಟಿಸುವಿಕೆ ಕಾರಣ ಗ್ಯಾಂಗ್ರೀನ್ ಉಂಟಾಗುತ್ತದೆ, ಮತ್ತು ಇದು ಕೋವಿಡ್ ನಿಂದ  ಚೇತರಿಸಿಕೊಂಡ ನಂತರವೂ ಕಾಣಿಸಿಕೊಳ್ಲುತ್ತದೆ ಎಂದು ಶಸ್ತ್ರಚಿಕಿತ್ಸೆ ವಿಭಾಗದ ಡಾ. ಉಲ್ಲಾಸ್ ಬಿಸಲೆರಿ  ಹೇಳಿದ್ದಾರೆ. ಇಂತಹ ಕೆಲವು ಪ್ರಕರಣಗಳನ್ನು ಕಿಮ್ಸ್‌ನಲ್ಲಿ ನಿರ್ವಹಿಸಲಾಗಿದೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com