ಕಾರವಾರ: ಅಳಿವಿನಂಚಿನಲ್ಲಿರುವ  ಪೆಸಿಫಿಕ್ ರಿಡ್ಲೆ ಆಮೆ ಮೃತದೇಹ ಪತ್ತೆ

ಅಳಿವಿನಂಚಿನಲ್ಲಿರುವ ಅಪರೂಪದ ಪೆಸಿಫಿಕ್ ರಿಡ್ಲೆ ಕಡಲಾಮೆಯ ಮೃತದೇಹವೊಂದು ಕಾರವಾರದಲ್ಲಿ ಪತ್ತೆಯಾಗಿದೆ. ಮೀನುಗಾರರು ಬೀಸಿದ್ದ ಬಲೆಗೆ ಸಿಕ್ಕು ಕಾರವಾರದ ಕೋಡಿಭಾಗ್ ಬ್ರಿಡ್ಜ್  ಸಮೀಪ ಆಮೆ ಮೃತದೇಹ ಸಿಕ್ಕಿದೆ. 
ಪೆಸಿಫಿಕ್ ರಿಡ್ಲೆ ಆಮೆ
ಪೆಸಿಫಿಕ್ ರಿಡ್ಲೆ ಆಮೆ

ಕಾರವಾರ: ಅಳಿವಿನಂಚಿನಲ್ಲಿರುವ ಅಪರೂಪದ ಪೆಸಿಫಿಕ್ ರಿಡ್ಲೆ ಕಡಲಾಮೆಯ ಮೃತದೇಹವೊಂದು ಕಾರವಾರದಲ್ಲಿ ಪತ್ತೆಯಾಗಿದೆ. ಮೀನುಗಾರರು ಬೀಸಿದ್ದ ಬಲೆಗೆ ಸಿಕ್ಕು ಕಾರವಾರದ ಕೋಡಿಭಾಗ್ ಬ್ರಿಡ್ಜ್  ಸಮೀಪ ಆಮೆ ಮೃತದೇಹ ಸಿಕ್ಕಿದೆ. 

ಭಾರತದ ಪೂರ್ವ ಕರಾವಳಿ ರಾಜ್ಯ ಒಡಿಶಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಡಲಾಮೆಗಳು ಕಾಣಿಸಿಕೊಳ್ಳುತ್ತದೆ. ಇವನ್ನು ಸಮುದ್ರ ಕಲ್ಮಶಗಳನ್ನು ಶುದ್ದೀಕರಿಸುವ ಆಮೆಗಳು ಎಂದೇ ಗುರುತಿಸಲಾಗುತ್ತದೆ. ಲೆಪಿಡೊಕೆಲಿಸ್ ಓಲಿವೆಸಿ ಎಂಬ ವೈಜ್ಞಾನಿಕ ಹೆಸರುಳ್ಳ ಈ ಕಡಲಾಮೆ ಸಂತತಿ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದು ಅಪರೂಪ.

ರಾಜ್ಯದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಈ ಕಡಲಾಮೆಗಳ ಸಂತತಿ ನಾಶವಾಗುತ್ತಿದೆ ಎನ್ನಲಾಗಿದೆ. ಜತೆಗೆ ಜನರು ಈ ಆಮೆಗಳನ್ನು ತಿನ್ನುವುದಕ್ಕಾಗಿಯೂ ಬೇಟೆಯಾಡುತ್ತಾರೆ. ಅರಣ್ಯ ಇಲಾಖೆ ಈ ಆಮೆಗಳ ಬೇಟೆ ನಿಷೇಧಿಸಿದ್ದರೂ ರಾಜ್ಯದಲ್ಲಿ ಇವುಗಳ ಬೇಟೆ ಕಾನೂನುಬಾಹಿರವಾಗಿ ನಡೆದಿದೆ ಎಂದು ವರದಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com